ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಸಾಮಗ್ರಿ ರಫ್ತು: ಶಿಕ್ಷೆ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪರಮಾಣು ಸಂಬಂಧಿ ಸಾಮಗ್ರಿಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಿದ ಪಾಕ್ ಪ್ರಜೆಯೊಬ್ಬನಿಗೆ ಇಲ್ಲಿನ ನ್ಯಾಯಾಲಯವು 37 ತಿಂಗಳ ಕಾಲ ಸೆರೆವಾಸ ವಿಧಿಸಿದೆ.

ಮೇರಿಲೆಂಡ್ ನಿವಾಸಿ ನದೀಂ ಅಖ್ತರ್ (46), ಅಮೆರಿಕದ ಕಂಪೆನಿಯೊಂದನ್ನು ಬಳಸಿಕೊಂಡು ವಿಕಿರಣ ಪತ್ತೆಹಚ್ಚುವ ಸಾಧನವನ್ನು ಅಕ್ರಮವಾಗಿ ರಫ್ತು ಮಾಡುತ್ತಿದ್ದ. ಇದರೊಟ್ಟಿಗೆ ಇನ್ನಿತರ ಉಪಕರಣಗಳನ್ನೂ  ತನ್ನ ದೇಶಕ್ಕೆ ಕಳುಹಿಸುತ್ತಿದ್ದ.

ನೀರು ಶುದ್ಧೀಕರಣ ಯಂತ್ರದಲ್ಲಿ ತಂಪು ಮಾಡುವ ಪ್ರಕ್ರಿಯೆಗೆ ಈ ಉಪಕರಣಗಳು ಅಗತ್ಯವೆಂದು ಕಾರಣ ನೀಡಿದ್ದ ಅಖ್ತರ್, ಅವುಗಳನ್ನು ಪರಮಾಣು ಚಟವಟಿಕೆಯಲ್ಲಿ ತೊಡಗಿರುವ ಪಾಕಿಸ್ತಾನದ ಕೆಲವು ಸಂಸ್ಥೆಗಳಿಗೆ ರಫ್ತು ಮಾಡಿದ್ದ.

ಈ  ಸಾಧನ- ಸಲಕರಣೆಗಳು ಅಣ್ವಸ್ತ್ರ, ಪರಮಾಣು ರಿಯಾಕ್ಟರ್‌ಗಳು ಇಲ್ಲವೇ ಪರಮಾಣು ಬಳಕೆಯ ಉತ್ಪನ್ನಗಳನ್ನು ಉತ್ಪಾದಿಸಲು ಬಳಸುವಂತಹ ವಸ್ತುಗಳಾಗಿದ್ದವು.

ಈ ಸಾಧನ- ಸಲಕರಣೆಗಳನ್ನು ಪಾಕ್‌ನ ಬಾಹ್ಯಾಕಾಶ ಸಂಶೋಧನಾ ಆಯೋಗ, ಅಣು ಶಕ್ತಿ ಆಯೋಗ ಮತ್ತು ಅವುಗಳ ಅಂಗ ಸಂಸ್ಥೆಗಳು ನದೀಂ ಅಖ್ತರ್‌ನಿಂದ ಖರೀದಿಸುತ್ತಿದ್ದವು ಎಂದು ತಿಳಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT