ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಸುರಕ್ಷತಾ ಕ್ರಮದ ಪರಾಮರ್ಶೆ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಪಾನ್‌ನಲ್ಲಿ ಸಂಭವಿಸಿದ ಅಣು ದುರಂತದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಬುಧವಾರ ಪರಮಾಣು ಬಿಕ್ಕಟ್ಟು ಎದುರಿಸುವ ತಯಾರಿ ಕುರಿತಂತೆ ಉನ್ನತ ಮಟ್ಟದ ಸಭೆಯಲ್ಲಿ ಪರಾಮರ್ಶೆ ನಡೆಸಿದ ಪ್ರಧಾನಿ ಮನಮೋಹನ ಸಿಂಗ್ ಅವರು, ಅಣು ಸ್ಥಾವರಗಳಲ್ಲಿ ವಿಶ್ವದರ್ಜೆಯ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಂಗ್ ಅವರು, ಅಣು ಸ್ಥಾವರಗಳ ಸುರಕ್ಷತೆಗಾಗಿ ವಿಶ್ವದರ್ಜೆ ಗುಣಮಟ್ಟದ ಅತ್ಯುನ್ನತ ಸುರಕ್ಷಾ ವಿಧಾನಗಳನ್ನು ಅನುಸರಿಸಬೇಕು ಎಂದು ಆದೇಶಿಸಿದರು. ಪರಮಾಣು ಸ್ಥಾವರಗಳ ಬಳಿ ಹೆಚ್ಚುವರಿ ನಾಲ್ಕು ವಿಪತ್ತು ಸ್ಪಂದನಾ ಪಡೆಗಳ ರಚನೆ ಮತ್ತು ರೇಡಿಯೊ ವಿಕಿರಣ ಪತ್ತೆ ವಾಹನಗಳ ಅಳವಡಿಕೆ ಸೇರಿದಂತೆ ಪರಮಾಣು ಬಿಕ್ಕಟ್ಟನ್ನು ಎದುರಿಸಲು ತೆಗೆದುಕೊಳ್ಳಬಹುದಾದ ವಿವಿಧ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯ ಬಳಿಕ ಸಿಂಗ್ ಅವರು, ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ಮತ್ತು ಪರಮಾಣು ಶಕ್ತಿ ಇಲಾಖೆಗಳು ಕೈಗೊಂಡಿರುವ ಪರಮಾಣು ಸುರಕ್ಷಾ ವಿಧಾನಗಳನ್ನು ಪರಾಮರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT