ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಗೆ ಮಡಿವಾಳ ಸಮುದಾಯ

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
Last Updated 5 ಜನವರಿ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಮಡಿವಾಳ ಸಮುದಾಯ­ವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕರ್ನಾಟಕ ರಾಜ್ಯ  ಮಡಿವಾಳರ ಸಂಘನಗರದಲ್ಲಿ ಭಾನುವಾರ ಆಯೋ­ಜಿಸಿದ್ದ ರಾಜ್ಯಮಟ್ಟದ ಜಾಗೃತಿ ಸಮಾ­ವೇಶದಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ವರ್ಗಗಳ ವಸತಿ ನಿಲಯ­ಗಳಲ್ಲೂ ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾ­ಗು­ವುದು. ಈ ವಸತಿ  ನಿಲಯಗಳಲ್ಲಿ ಸೀಟು ದೊರೆಯದಿದ್ದರೆ,  ‘ವಿದ್ಯಾಸಿರಿ’ ಯೋಜ­ನೆ­ಯಡಿ ರೂ15 ಸಾವಿರ ಆರ್ಥಿಕ ಸಹಾಯ ಒದಗಿಸಲಾಗುವುದು’ ಎಂದರು.

‘ಮುಂದಿನ ಸಾಲಿನ ಬಜೆಟ್‌ನಲ್ಲಿ ಮಡಿ­ವಾಳ ಹಾಗೂ ಸವಿತಾ ಸಮಾಜಕ್ಕೆ ವಿಶೇಷ ಪ್ಯಾಕೇಜ್‌ ಒದಗಿಸಲಾಗು­ವುದು. ಈ ಎರಡು ಸಮುದಾಯದ ಜನರು ಕುಲ­ಕಸುಬನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

ಸಕಾರತ್ಮಾಕ ಸ್ಪಂದನೆ: ಮಡಿವಾಳ ಜಯಂತಿ­ಯನ್ನು ಸರ್ಕಾರದಿಂದ ಅಧಿಕೃತ­ವಾಗಿ ಆಚರಿಸುವುದು, ಮಡಿವಾಳ ಮಾಚಿ­­ದೇವ ಪೀಠ ಸ್ಥಾಪನೆ ಹಾಗೂ ಆಂಧ್ರಪ್ರದೇಶ ಮಾದರಿಯಲ್ಲಿ ದೋಭಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್‌.­ಆಂಜನೇಯ, ‘ಬಹುರಾಷ್ಟ್ರೀಯ ಕಂಪೆನಿ­ಗಳು ಡ್ರೈಕ್ಲೀನರ್‌ ಸಂಸ್ಥೆಗಳನ್ನು ಸ್ಥಾಪಿಸಿ, ಮಡಿ­ವಾಳರ ಕುಲಕಸುಬಿಗೆ ಅಡ್ಡಿ ಉಂಟು ಮಾಡಿವೆ. ಲಾಂಡ್ರಿ ಸ್ಥಾಪನೆ ಮಾಡುವವರಿಗೆ ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ರೂ1 ಲಕ್ಷ ಸಾಲ ಹಾಗೂ  ರೂ 25 ಸಾವಿರ ಸಹಾಯಧನ ನೀಡಲಾ­ಗು­ವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT