ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಸಿಗದ ಸೌಲಭ್ಯ: ಶಿವಶಂಕರ್‌ ವಿಷಾದ

Last Updated 17 ಸೆಪ್ಟೆಂಬರ್ 2013, 6:25 IST
ಅಕ್ಷರ ಗಾತ್ರ

ಬೀದರ್‌: ಸಂವಿಧಾನ ಬದ್ಧವಾಗಿ ಪರಿಶಿಷ್ಟ ಸಮುದಾಯದವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌.ಸಿ/ಎಸ್‌.ಟಿ. ನೌಕರರ ಸಂಘದ ಅಧ್ಯಕ್ಷ ಡಿ. ಶಿವಶಂಕರ ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ವಿಷಯ ಕುರಿತು ನಗರದ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತ­ನಾಡಿದರು.

ಪರಿಶಿಷ್ಟ ಸಮುದಾಯದವರ ಅಭಿ­ವೃದ್ಧಿ­ಗಾಗಿ ಸರ್ಕಾರ ಜಾರಿ­ಗೊಳಿಸಿರುವ ಸೌಲಭ್ಯಗಳು ಪಡೆದು­ಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಕಕ್ಷೆ ಸಂತೋಷಮ್ಮಾ ಕೌಡ್ಯಾಳ್‌, ಸದಸ್ಯೆ ಕಸ್ತೂರಿಬಾಯಿ ಬೌದ್ಧೆ, ಹಿಂದುಳಿದ ನೌಕರರ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರೇಮಸಾಗರ್‌ ದಾಂಡೇಕರ್‌, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ್‌ ಗಂದಗೆ, ರಾಜ್ಯ ಪರಿಷತ್‌ ಸದಸ್ಯ ರಾಜ­ಕುಮಾರ್‌ ಮಾಳಗೆ, ಪಶು­ಸಂಗೋಪನ ಇಲಾಖೆ ಉಪ ನಿರ್ದೇಶಕ ಡಾ. ಮುನಿಯಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ. ಬಾಬುರಾವ್‌, ಎಸ್‌.ಸಿ/ಎಸ್‌.ಟಿ. ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಎಸ್‌. ಮನೋಹರ್‌,  ನಾಮದೇವ್‌ ಪೂಜಾರಿ ಇದ್ದರು.

ಎಕಲಾರ: ಓಜೋನ್‌ ದಿನಾಚರಣೆ
ಬೀದರ್‌
: ಔರಾದ್‌ ತಾಲ್ಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಓಜೋನ್‌ ದಿನ ಆಚರಿಸಲಾಯಿತು.
ಓಜೋನ್ ಪದರಿನ ಸಂರಕ್ಷಣೆ­ಗಾಗಿ ಪರಿಸರದ ಸ್ವಚ್ಛತೆ ಕಾಪಾಡ­ಬೇಕಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಮಹಿಪಾಲರೆಡ್ಡಿ ಶೇರಿಕಾರ್ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಬಾಬುಗೊಂಡ ಉದ್ಘಾಟಿಸಿದರು. ನಾಮದೇವ ಸಿಂಗಾರೆ, ಮಲ್ಲಿಕಾರ್ಜುನ ಟಂಕ­ಸಾಲೆ, ಸಿದ್ದಾರೆಡ್ಡಿ, ಶಿವರಾಜ ಬಿರಾ­ದಾರ್‌, ವಿಜಯಲಕ್ಷ್ಮಿ ನಿರ್ಮಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT