ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ತಿನಲ್ಲಿ ಐ.ಟಿ ದಾಳಿ ಪ್ರತಿಧ್ವನಿ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆದಿಚುಂಚನಗಿರಿ ಶಾಖಾ ಮಠ ಹಾಗೂ ಅದರ ಅಂಗಸಂಸ್ಥೆಗಳ ಮೇಲೆ ನಡೆದ ದಾಳಿ ಘಟನೆಗೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಪ್ರಬಲ ಪ್ರತಿರೋಧ ವ್ಯಕ್ತವಾಯಿತು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `450ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಮತ್ತು ನೂರಾರು ಆಸ್ಪತ್ರೆಗಳ ಮೂಲಕ ನಾಡಿನ ಸೇವೆ ಮಾಡುತ್ತಿರುವ ಪ್ರತಿಷ್ಠಿತ ಆದಿಚುಂಚನಗಿರಿ ಮಠದ ವಿರುದ್ಧ ಇಂತಹ ಪ್ರಹಾರ ನಡೆಸಿದ್ದು ಏಕೆ' ಎಂದು ಪ್ರಶ್ನಿಸಿದರು.

`ಲೆಕ್ಕಪತ್ರದಲ್ಲಿ ಏನಾದರೂ ಏರು-ಪೇರುಗಳಿದ್ದರೆ ತನಿಖೆ ನಡೆಸಲು ನಮ್ಮ ಅಭ್ಯಂತರ ಏನಿಲ್ಲ. ಆದರೆ, ಸಂಸ್ಥೆಯನ್ನೇ ಅಧೀರಗೊಳಿಸುವ ಇಂತಹ ಯತ್ನ ತರವಲ್ಲ. ಸರ್ಕಾರವೂ ಮಾಡಲಾಗದಷ್ಟು ಸಮಾಜ ಸೇವೆಯಲ್ಲಿ ನಿತರವಾಗಿರುವ ಮಠದ ಮೇಲೆ ನಡೆದಿರುವ ಈ ಪ್ರಹಾರದ ವಿರುದ್ಧ ಚರ್ಚೆಗೆ ಅವಕಾಶ ಕಲ್ಪಿಸಬೇಕು' ಎಂದು ಪಟ್ಟುಹಿಡಿದರು.

`ತ್ರಿವಿಧ ದಾಸೋಹದಲ್ಲಿ ತೊಡಗಿರುವ ಮಠದ ಮೇಲೆ ದಾಳಿ ನಡೆಸುವ ಮೂಲಕ ಕಳಂಕ ತರಲು ಹುನ್ನಾರ ನಡೆಸಲಾಗಿದೆ. ಇಂತಹ ಯತ್ನಗಳನ್ನು ನಾವು ಖಂಡಿಸುತ್ತೇವೆ' ಎಂದು ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡರಂಗೇಗೌಡ ಅವರಿಂದಲೂ ಪ್ರತಿರೋಧ ವ್ಯಕ್ತವಾಯಿತು.

`ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಈ ದಾಳಿ ನಡೆಸಿರುವುದರಿಂದ ಸದನದ ಚರ್ಚೆ ವ್ಯಾಪ್ತಿಗೆ ಬರುವುದಿಲ್ಲ' ಎಂದು ಸಭಾನಾಯಕ ಎಸ್.ಆರ್. ಪಾಟೀಲ ಹೇಳಿದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಎದ್ದುನಿಂತು ಸಭಾನಾಯಕರ ಹೇಳಿಕೆಗೆ ಆಕ್ಷೇಪ ಎತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT