ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆ ಹೀಗೆ ಸಿದ್ಧರಾಗಿ...

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಒಂದು ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಯಾರು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿಕೊಳ್ಳುತ್ತಾರೊ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದಲ್ಲದೆ, ಉತ್ತಮ ಹುದ್ದೆಯನ್ನೂ ಪಡೆದುಕೊಳ್ಳುತ್ತಾರೆ. ಆದ್ದರಿಂದ ಇಂದಿನ ಸ್ಪರ್ಧಾಲೋಕದಲ್ಲಿ ಪ್ರತಿಯೊಬ್ಬರು ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರಯತ್ನ ಪಡಬೇಕಾದ ಅಗತ್ಯವಿದೆ.

ಕೆಲವರು ಎಷ್ಟೇ ಕಷ್ಟಪಟ್ಟು ಓದಿದರೂ ಉತ್ತಮ ಅಂಕ ಗಳಿಸುವಲ್ಲಿ ವಿಫಲರಾಗಿ ಬಿಡುತ್ತಾರೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಕಷ್ಟಪಟ್ಟು ಓದುವುದಕ್ಕಿಂತಲೂ ಇಷ್ಟಪಟ್ಟು ಸಂತಸದಾಯಕವಾಗಿ ಓದುವುದರಿಂದ ಹೆಚ್ಚಿನ ಲಾಭಗಳಿವೆ. ಈ ದಿನಗಳಲ್ಲಿಂತೂ ವಿದ್ಯಾರ್ಥಿಗಳಿಗೆ ಹಲವಾರು ಸವಲತ್ತುಗಳು ಲಭ್ಯ ಇವೆ. ಸಾಮಾನ್ಯವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳು ಈ ಕೆಳಗಿನ ಕೆಲವು ವಿಧಾನಗಳನ್ನು ಗಮನಿಸಿ ಅಳವಡಿಸಿಕೊಂಡರೆ ಉತ್ತಮ ಅಂಕಗಳನ್ನು ಗಳಿಸಿಬಹುದು:

* ವರ್ಷಾರಂಭದಲ್ಲಿಯೇ ಓದುವುದನ್ನು ಪ್ರಾರಂಭಿಸಿ
* ನಿಮ್ಮದೇ ಆದ ಸ್ವಂತ ಪಠ್ಯಪುಸ್ತಕಗಳನ್ನು ಹೊಂದಿದ್ದರೆ ಒಳ್ಳೆಯದು.
* ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಪದೇ ಪದೇ ಓದಿಕೊಳ್ಳಿ
* ಓದುವಾಗ ಕಿರು ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳಿ
* ಯಾವಾಗಲೂ ಶಾಂತತೆಯಿಂದ ಇರಿ
* ಬೆಳಗಿನ ಸಮಯದಲ್ಲಿ ಹೆಚ್ಚು ಓದುವುದು ಉತ್ತಮ
* ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ
* ನಿಮ್ಮ ದೌರ್ಬಲ್ಯಗಳ ಕಡೆಗೆ ಹೆಚ್ಚು ಗಮನಕೊಟ್ಟು ಅದರ ನಿವಾರಣೆಗಾಗಿ ಹೆಚ್ಚು ಪರಿಶ್ರಮವಹಿಸಿ
* ಆಸಕ್ತಿದಾಯಕ, ಸರಳವೆನಿಸಿದ ವಿಷಯಗಳನ್ನು ಮೊದಲು ಓದಿಕೊಂಡು ಆ ಮೇಲೆ ಕಠಿಣವೆನಿಸಿದ ವಿಷಯಗಳನ್ನು ಓದಿ
* ಆವಾಗಾವಾಗ ಪುನರಾವರ್ತನೆ ಮಾಡಿ
* ಕಠಿಣವಾದ ಪ್ರಶ್ನೆಗಳನ್ನು ಮತ್ತು ವಿಷಯಗಳನ್ನು ಮತ್ತೆ ಮತ್ತೆ ಓದಿಕೊಳ್ಳಿ
* ಓದಿದ್ದನ್ನು ನಿಮ್ಮ ಸಹಪಾಠಿಗಳೊಂದಿಗೆ ಚರ್ಚಿಸಿ. ಅನುಮಾನಗಳಿದ್ದಲ್ಲಿ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ
* ಪಠ್ಯಪುಸ್ತಕದ ಮುಖ್ಯವಾದ ಪಾಠಗಳನ್ನು ಮತ್ತು ಮತ್ತೆ ಮತ್ತೆ ಕೇಳಲಾದ ಪ್ರಶ್ನೆಗಳನ್ನು ಒಂದೆಡೆ ಬರೆದಿಟ್ಟುಕೊಂಡು ಓದಿ. ವಿಷಯವನ್ನು ಮಾತೃ ಭಾಷೆಯಲ್ಲಿ ಅರ್ಥಮಾಡಿಕೊಳ್ಳಿ. ಇದರಿಂದ ಅದನ್ನು ದೀರ್ಘವಾಗಿ ನೆನಪಿನಲ್ಲಿಡಲು ನಿಮ್ಮಿಂದ ಸಾಧ್ಯವಾಗುತ್ತದೆ.
* ಮುಖ್ಯವಾದ ವಿಷಯಗಳ ಮೇಲೆ ನೋಟ್ಸ್ ಮಾಡಿಟ್ಟು­ಕೊಳ್ಳಿ. ಶಾರ್ಟನೋಟ್ಸ್ ಮಾಡಿಕೊಳ್ಳಿ, ಅದನ್ನು ನೆನಪಿನ­ಲ್ಲಿ­ಡಲು ಕೆಲವು ಕೋಡ್ ಗಳನ್ನು ಕೊಟ್ಟುಕೊಳ್ಳಿ.
* ಪಠ್ಯದಲ್ಲಿ ಬರುವ ಪ್ರತಿಯೊಂದು ವಿಷಯದ ಮುಖ್ಯ ಅಂಶಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ.
ನಂತರ ಅದನ್ನು ಎಲ್ಲಾ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿ ಜೊತೆಯಲ್ಲಿ ತೆಗೆದುಕೊಂಡು ಹೋಗಿ. ಬಿಡುವು ಸಿಕ್ಕಾಗೆಲ್ಲ ಓದಿಕೊಂಡು ನೆನಪಿನಲ್ಲಿಟ್ಟುಕೊಳ್ಳಬಹುದು
* ಒಂದು ವಿಷಯದ ಒಂದೇ ಪಠ್ಯಪುಸ್ತಕ ಅಥವಾ ಒಂದೇ ನೋಟ್ಸನ್ನು ಕೊನೆಯವರೆಗೂ ಓದುವುದು ಒಳ್ಳೆಯದು. ಆ ಪುಸ್ತಕದಲ್ಲಿ ಇರದೆ ಇದ್ದ ವಿಷಯಗಳನ್ನು ಮಾತ್ರ ಬೇರೆ ಪಠ್ಯ ಪುಸ್ತಕದಿಂದ ಬರೆದಿಟ್ಟುಕೊಂಡು ಓದಬಹುದು
* ನಿರಂತರ ಮತ್ತು ವ್ಯಾಪಕ ಅಧ್ಯಯನ ಮಾಡುವುದು ಹಾಗೂ ಓದಿನ ಮಧ್ಯೆ ವಿರಾಮ ಪಡೆದುಕೊಳ್ಳುವುದು ಮುಖ್ಯ
* ಈಗ ಕೇವಲ ಲಿಖಿತ ಪರೀಕ್ಷೆಗೆ ಮಹತ್ವ ಕೊಡುವುದರಿಂದ ಶುದ್ಧ ಬರಹಕ್ಕೆ ಆಧ್ಯತೆ ನೀಡಲಾಗುವುದು. ಅದಕ್ಕಾಗಿ ಓದಿದ ವಿಷಯವನ್ನು ನೆನಪಿನಲ್ಲಿಟ್ಟು ಬರೆಯುವುದನ್ನು ರೂಢಿಸಿಕೊಳ್ಳಿ
* ಪ್ರತಿ ದಿನ ಎರಡು ದಿಗಳನ್ನಾಗಿ ವಿಭಾಗಿಸಿಕೊಳ್ಳುವುದು ಅಂದರೆ ಮುಂಜಾನೆ ಮತ್ತು ಸಂಜೆ ಸಾಧ್ಯವಾದಾಗ ದಿನಕ್ಕೆ ಎರಡು ಬಾರಿಯಂತೆ ದಿನಕ್ಕೆ ಕನಿಷ್ಠ ಆರು ಗಂಟೆ ಓದುವ ಹವ್ಯಾಸ ಹಾಕಿಕೊಳ್ಳಿ
* ರಾತ್ರಿ ಮಲಗುವಾಗ ಆ ದಿನ ಓದಿದ ಅಂಶಗಳನ್ನು ಒಂದು ಸಾರಿ ನೆನಪಿಸಿಕೊಳ್ಳಿ. ಮುಂಜಾನೆ ಎದ್ದಾಗ ಆ ದಿನ ಓದಬೇಕಾದ ವಿಷಯಗಳನ್ನು ಕುರಿತು ನೆನಪಿಸಿಕೊಳ್ಳಿ
* ಹೆಚ್ಚಿನ ಅಂಕ ಗಳಿಸುವ ಸಲುವಾಗಿ ಇತರ ಸಾಧಕರೊಂದಿಗೆ ಚರ್ಚಿಸಿ. ಇಲ್ಲದಿದ್ದರೆ ಅವರ ಸಾಧನೆ ಬಗ್ಗೆ ಓದಿ ತಿಳಿದುಕೊಳ್ಳಿ
* ಸಾಧ್ಯವಾದರೆ ಹಿಂದಿನ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ತರಿಸಿಕೊಂಡು ನೋಡಿಕೊಳ್ಳಿ
* ದಿನನಿತ್ಯ ಓದಿಗಾಗಿ ಒಂದು ನಿರ್ದಿಷ್ಟವಾದ ಕೋಣೆಯನ್ನು, ಅಲ್ಲಿ ಒಂದು ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಿಕೊಳ್ಳಿ.
*ಪ್ರತಿಯೊಂದು ವಿಷಯದ ಮುಖ್ಯ ಅಂಶಗಳನ್ನು ಮತ್ತು ಚಿತ್ರಗಳನ್ನು ಡ್ರಾಯಿಂಗ್ ಸೀಟಿನಲ್ಲಿ ಬರೆದು ಗೋಡೆಗೆ ಅಂಟಿಸಿ
* ಕಠಿಣವಾದ ಉತ್ತರಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆದು ಗೋಡೆಗೆ ಅಂಟಿಸುವುದು ಒಳ್ಳೆಯದು.
* ಪರೀಕ್ಷೆಯ ಬಗ್ಗೆ ಹೆದರಿಕೆ ಬೇಡ, ಅದನ್ನು ಸವಾಲಾಗಿ ತೆಗೆದುಕೊಳ್ಳಿ. ಅದಕ್ಕಾಗಿ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಿ
* ಮೊದಲು ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಂಡು ಬಿಡಿಸಿ. ಇದು ಪರೀಕ್ಷೆಯ ತಿರುಳನ್ನು ಮತ್ತು ವಿಷಯದ ಪರಿಚಯ ಪಡೆಯಲು ಬಹುಮುಖ್ಯ ಹಂತವಾಗಿದೆ
* ಎಲ್ಲ ವಿಷಯಗಳಿಗೆ ಸಮಾನವಾಗಿ ಒಂದು ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ ಪ್ರಶ್ನೆಗೆ ತಕ್ಕಂತೆ ಪರಿಣಾಮಕಾರಿ ಉತ್ತರ ಕೊಡಿ. ಅಕ್ಷರಗಳನ್ನು ಅಂದವಾಗಿ ಬರೆಯಿರಿ. ಏಕೆಂದರೆ


ನಿಮ್ಮ ಬರಹಗಳ ಆಧಾರದ ಮೇಲೆಯೇ ಅಂಕಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ಪದೇ ಪದೇ ದಿನಾಲು ಪ್ರಶ್ನೆಗಳಿಗೆ ಉತ್ತರ ನೋಡದೆ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ
* ಉತ್ತರ ಪತ್ರಿಕೆಯ ಮೇಲೆ, ಕೆಳಗೆ, ಬಲಗಡೆ, ಎಡಗಡೆ, ಸ್ವಲ್ಪ ಸ್ಥಳವನ್ನು ಬಿಟ್ಟು ಬರೆಯಿರಿ. ಇದರಿಂದ ನೋಡಲು ಅಚ್ಚುಕಟ್ಟಾಗಿ ಕಾಣತ್ತದೆ.
* ಎಡಿಷ್‌ನಲ್ ಶೀಟ್ ತೆಗೆದುಕೊಂಡರೆ ಅದಕ್ಕೆ ನಿಮ್ಮ ಪತ್ರಿಕೆಯ ಮುಂದುವರೆದ ಕ್ರಮಸಂಖ್ಯೆಯನ್ನು ಹಾಕುತ್ತಾ ಹೋಗಿ, ಕೊನೆಗೆ ದಾರದಿಂದ ಕಟ್ಟಿ ಕೊಡಿ
* ಅವಶ್ಯಕತೆಗೆ ಅನುಗುಣವಾಗಿ ಪ್ರಮುಖ ಮುಖ್ಯಾಂಶಗಳನ್ನು, ಉಪಮುಖ್ಯಾಂಶಗಳನ್ನು ಬರೆಯಿರಿ
* ಎಲ್ಲಾ ಮುಖ್ಯವಾದ ನಾಣ್ಣುಡಿಗಳನ್ನು, ವ್ಯಾಖ್ಯೆಗಳನ್ನು ನೆನಪಿನಲ್ಲಿಟ್ಟುಕೊಂಡು ತಪ್ಪಿಲ್ಲದಂತೆ ಬರೆಯಿರಿ
* ಪ್ರಶ್ನೆಗಳ ಅಂಕ ಗಾತ್ರಗಳಿಗನುಗುಣವಾಗಿ ಸಮಯ ಹಂಚಿಕೊಳ್ಳಿ
* ಸಂಕ್ಷಿಪ್ತ ಉತ್ತರ ಬಯಸುವ ಪ್ರಶ್ನೆಗಳಿಗೆ ಹೆಚ್ಚು ಒತ್ತೊಕೊಟ್ಟು ಓದಿ ಬರೆಯಿರಿ ಇದರಿಂದಾಗಿಯೇ ಹಚ್ಚು ಅಂಕಗಳು ಬರುತ್ತವೆ
* ಬರವಣಿಗೆ ನಿಖರ, ಆಕರ್ಷಕ, ಅಗತ್ಯತೆಗೆ ಅನುಗುಣವಾಗಿ ಯಾವುದೇ ತಪ್ಪಿಲ್ಲದಂತೆ ಇರಲಿ
*ದೀರ್ಘ ಉತ್ತರ ಬಯಸುವ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ಉತ್ತರವನ್ನು ಪ್ಯಾರಾಗ್ರಾಪ್‌ಗಳಾಗಿ ವಿಂಗಡಿಸಿ ಬರೆಯಿರಿ. ಕೊನೆಗೆ ಉಪಸಂಹಾರದಲ್ಲಿ ಉತ್ತರದ ಮೌಲ್ಯವನ್ನು ಎತ್ತಿ ತೋರಿಸಿ
*ಪರೀಕ್ಷೆಯ ಮುಂಚೆ ಮತ್ತು ಪರೀಕ್ಷಾ ಹಾಲ್‌ನಲ್ಲಿ ಸಮಯವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ
*ಪರೀಕ್ಷಾ ಸಮಯ ಮುಗಿಯುವತನಕ ಕೊಠಡಿಯಿಂದ ಹೊರಗೆ ಹೋಗಬೇಡಿ ಉತ್ತರಗಳನ್ನು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ
*ಪರೀಕ್ಷೆ ಬರೆಯುವಾಗ ಯಾವುದೇ ತಪ್ಪುಗಳು ಆಗದಂತೆ ಕಾಳಜಿ ವಹಿಸಿ ಒಂದೂ ಪ್ರಶ್ನೆ ಬಿಡದಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ
*ಮೊದಲು ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿಕೊಳ್ಳಿ ಪ್ರಶ್ನೆಗೆ ತಕ್ಕ ಪರಿಣಾಮಕಾರಿ ಉತ್ತರ ಬರೆಯಿರಿ. ಅನವಶ್ಯಕ ಅಂಶಗಳನ್ನು ಬರೆಯದಿರುವುದು ಒಳ್ಳೆಯದು. ಇದರಿಂದ ಸಮಯದ ಉಳಿತಾಯ ಆಗುತ್ತದೆ.
*ಮುಖ್ಯ ಸಾಲುಗಳ ಕೆಳಗೆ ಅಡಿಗೆರೆ ಹಾಕಿ

ಪಾಲಕರು ಅನುಸರಿಸಬೇಕಾದ ವಿಧಾನಗಳು
*ಮೇಲಿಂದ ಮೇಲೆ ನಿಮ್ಮ ಮಗುವಿನ ಶಾಲೆಗೆ ಭೇಟಿ ಕೊಟ್ಟು ಶಿಕ್ಷಕರನ್ನು ಬೇಟಿಯಾಗಿ ನಿಮ್ಮ ಮಗುವಿನ ಮಾಹಿತಿ ಪಡೆದುಕೊಳ್ಳಿ
*ಮಕ್ಕಳೊಂದಿಗೆ ಪ್ರೀತಿಯಿಂದ ಮುಕ್ತವಾಗಿ ಮಾತನಾಡಿ. ಇದರಿಂದಾಗಿ ಅವರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ನಿಮ್ಮಂದಿಗೆ ಹಂಚಿಕೊಳ್ಳುತ್ತಾರೆ
*ಮಕ್ಕಳೊಂದಿಗೆ ಹೆಚ್ಚು ಹೊತ್ತು ಕಳೆಯಿರಿ. ಅವರ ಅಭ್ಯಾಸದ ಕಡೆಗೆ, ಅವರ ಆಹಾರ, ಆರೋಗ್ಯದ ಕಡೆಗೆ ಗಮನ ಹರಿಸಿ, ಕಾಳಜಿ ವಹಿಸಿ
*ಅಧ್ಯಯನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿ
*ಮಕ್ಕಳು ಆಟ ಆಡಲು, ಕೆಲವು ಸಮಯ ಟಿ.ವಿ. ನೋಡಲು ಅವಕಾಶಕೊಡಿ!
*ಪ್ರತಿಯೊಬ್ಬರಿಗೂ ಆರು ಗಂಟೆ ನಿದ್ರೆ ಅನಿವಾರ್ಯ. ಆದ್ದರಿಂದ ನಿದ್ರೆಗೆ ಅವಕಾಶ ಕೊಡಿ
*ಪರೀಕ್ಷಾ ಸಮಯದಲ್ಲಿ ಮಕ್ಕಳು ತಿನ್ನುವ ಆಹಾರದತ್ತ ಗಮನ ಹರಿಸಿ
*ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹೇರದೆ, ಒತ್ತಡವನ್ನು ಕಡಿಮೆ ಮಾಡಿ ಶಾಂತವಾಗಿರಲು ಅವಕಾಶ ಕೊಡಿ
*ಮಕ್ಕಳು ಫೇಲ್ ಆದಾಗ/ಕಡಿಮೆ ಅಂಕ ತೆಗೆದುಕೊಂಡಾಗ ಅವರನ್ನು ನಿಂದಿಸದೇ ಈಗಿನ ದಿನಗಳಲ್ಲಿ ಅಧಿಕ ಅಂಕ ಪಡೆಯಬೇಕಾದ ಅನಿವಾರ್ಯತೆ ಕುರಿತು ತಿಳುವಳಿಕೆ ಕೊಡಿ

ಇವೆ ವಿಧಾನಗಳನ್ನು ಅನುಸರಿಸಬೇಕೆಂದೇನಿಲ್ಲ. ನೀವು ನಿಮ್ಮದೆಯಾದ ಸರಳ, ಆಸಕ್ತಿದಾಯಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಯಾವುದೇ ವಿಧವಾಗಿರಲಿ ಒಟ್ಟಿನಲ್ಲಿ ಸೂಕ್ತ ಪೂರ್ವತಯಾರಿ ಮಾಡಿಕೊಂಡರೆ ಪರೀಕ್ಷೆಗೆ ಭಯಪಡುವ ಅಗತ್ಯ ಬೀಳದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT