ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ವ್ಯವಸ್ಥೆ ಬೇಕು

ಅಕ್ಷರ ಗಾತ್ರ

ಡಾಲರ್ ಹುಲಿ ಜಗತ್ತಿನ ಬಹುತೇಕ ದೇಶಗಳ ಎಲ್ಲಾ ಹಣ ಕಬಳಿಸುತ್ತಿದೆ. ಒಂದು ಸಮಯದಲ್ಲಿ ಭಾರತದ ರೂಪಾಯಿ ಡಾಲರ್‌ಗೆ ನಾಲ್ಕು ರೂಪಾಯಿ ಗಳಿಸಿತ್ತು. ತನ್ನ ಮೌಲ್ಯವನ್ನು ರೂಪಾಯಿ ಬಹುತೇಕ ಕಳೆದು ಕೊಳ್ಳುತ್ತಿರುವುದರೊಂದಿಗೆ ಜನರನ್ನು ಹೈರಾಣ ಮಾಡುತ್ತಿದೆ.
ಜಗತ್ತಿನ ವ್ಯವಹಾರಗಳೆಲ್ಲಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಡಾಲರ್‌ನಿಂದಲೇ ಮಾಡಲಾಗುತ್ತಿದೆ. ಯಾವುದೇ ದೇಶ ತನ್ನ `ಕರೆನ್ಸಿ' ಅಥವಾ ಚಲಾವಣೆಯಲ್ಲಿರುವ ಹಣವನ್ನು ಈ ಡಾಲರ್‌ಗೆ ಹೋಲಿಸಿ ತನ್ಮೂಲಕ ಅದರ ಮೌಲ್ಯ ಗುರುತಿಸಿ ವ್ಯವಹರಿಸುತ್ತವೆ.

ಯಾವ ದೇಶ ಈ `ಡಾಲರ್'ನ್ನು ಹೆಚ್ಚೆಚ್ಚು ಹೊಂದಿದಷ್ಟೂ ಆ ದೇಶ ಶ್ರೀಮಂತವೆಂದು ಬಿಂಬಿಸಲಾಗುತ್ತಿದೆ. ಇದರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಕುಸಿಯುವುದಿಲ್ಲ! ಅದು ಹುಲಿಯಾಗಿಯೇ ಇರುತ್ತದೆ.

ಬೆಲೆ ಏರಿಕೆ, ಸರ್ಕಾರ ತೆರಿಗೆ ವಿಧಿಸುವುದು, ಹೀಗೆ ಕೊರತೆ ತುಂಬಿಕೊಳ್ಳಲು ಸರ್ಕಾರಗಳು ಜನರ ಜೀವ ಹಿಂಡುತ್ತಿವೆ. ಆದರೆ ಈ ಡಾಲರ್‌ನಿಂದ ದೂರವಿದ್ದು ಜಗತ್ತಿನ ರಾಷ್ಟ್ರಗಳೆಲ್ಲಾ ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿಲ್ಲ. ಅರ್ಥಶಾಸ್ತ್ರಜ್ಞರೆಲ್ಲಾ ಇದರ ಕಪಿಮುಷ್ಟಿಯಲ್ಲಿ ಸಿಲುಕಿದ್ದರಿಂದ ಶ್ರೀಸಾಮಾನ್ಯನ ಕಷ್ಟ ಪರಿಹರಿಸುವುದು ಸಾಧ್ಯವಾಗುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT