ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯೂಷಣ ಪರ್ವ: ಪಲ್ಲಕ್ಕಿ ಉತ್ಸವ

Last Updated 20 ಸೆಪ್ಟೆಂಬರ್ 2013, 7:01 IST
ಅಕ್ಷರ ಗಾತ್ರ

ಬೆಳಗಾವಿ: ಜೈನ ಧರ್ಮದ ಬಾಂಧವರಿಂದ ಆಚರಿಸಲಾಗುವ ಪರ್ಯೂಷಣ ಮತ್ತು ದಶ­ಲಕ್ಷಣ ಪರ್ವ ಮುಕ್ತಾಯಗೊಂಡಿದ್ದು, ಈ ನಿಮಿತ್ಯ ಗುರುವಾರ ಪಲ್ಲಕ್ಕಿ ಉತ್ಸವ ನಡೆಯಿತು.

ನಗರದ ಮಠ ಬೀದಿಯಲ್ಲಿರುವ ಭಗವಾನ್‌ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಿಂದ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡಿತು. ಮೆರವಣಿಗೆ ಕಲ್ಮಠ ರಸ್ತೆ, ಮಾರುತಿ ಗಲ್ಲಿ, ದೇಶಪಾಂಡೆ ಗಲ್ಲಿ ಮೂಲಕ ಬಸವಣಗಲ್ಲಿಯಲ್ಲಿರುವ ಭಗವಾನ್‌ ನೇಮಿನಾಥ ದಿಗಂಬರ ಜೈನ ಮಂದಿರಕ್ಕೆ ಆಗಮಿಸಿತು.

ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ 24 ತೀರ್ಥಂಕರರಿಗೆ ವಿಶೇಷ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿಯ ದಿನದಂದು ನಡೆದ ವಿವಿಧ ಸ್ಫರ್ಧೆಗಳಲ್ಲಿ ವಿಜೇತ­ರಾದವರಿಗೆ ಬಹುಮಾನ ವಿತರಿಸಲಾಯಿತು.

ತೀರ್ಥಂಕರರ ಪೂಜಾ ವಿಧಾನದ ಬಳಿಕ ಮೆರವಣಿಗೆಯು ಬಸವಣ ಗಲ್ಲಿ, ರಾಮ­ಲಿಂಗಖಿಂಡ ಗಲ್ಲಿ, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಶೇರಿ ಗಲ್ಲಿ ಮೂಲಕ ಮಠ ಬೀದಿ ಮದಿರಕ್ಕೆ ತೆರಳಿ ಅಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಸಂದರ್ಭದಲ್ಲಿ ಜೈನ ಬಾಂಧವರು ಪಲ್ಲಕ್ಕಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT