ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸ್ ಪೋಲಿಯೊ ಆಂದೋಲನ ಜಾಥಾ

Last Updated 18 ಫೆಬ್ರುವರಿ 2012, 6:20 IST
ಅಕ್ಷರ ಗಾತ್ರ

ಕುರುಗೋಡು: ರಾಷ್ಟ್ರೀಯ ಪಲ್ಸ್ ಪೋಲಿಯೊ ಮೊದಲ ಸುತ್ತಿನ  ಕಾರ್ಯಕ್ರಮ ಫೆ.19ರಿಂದ 22ರವರೆಗೆ ನಡೆಯಲಿದೆ.ಹುಟ್ಟಿದ ಮಗುವಿನಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ  ಓರ‌್ವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಣ್ ನಾಯಕ್ ಕೋರಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಓರ‌್ವಾಯಿ, ಗುತ್ತಿಗ ನೂರು, ಪಟ್ಟಣಸೆರಗು, ಚಿಟಗಿನ ಹಾಳು, ಎಚ್. ವೀರಾಪುರ, ಕಲ್ಲುಕಂಭ, ಕೆರೆಕೆರೆ, ಸೋಮಲಾಪುರ, ಲಕ್ಷ್ಮೀಪುರ, ಶ್ರೀನಿವಾಸ ಕ್ಯಾಂಪ್, ಮುಷ್ಟಘಟ್ಟೆ ಗ್ರಾಮಗಳ ಒಟ್ಟು 3141ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ.

ಪೋಲಿಯೊ ಹನಿಹಾಕಲು 16 ಬೂತ್‌ಗಳು, ಒಂದು ಸಂಚಾರಿ ತಂಡವನ್ನು ರಚಿಸಲಾಗಿದೆ.
ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ಮತ್ತು ಆರೋಗ್ಯ ಸಹಾಯಕರು ಸೇರಿ ಒಟ್ಟು 34 ಜನ ಮತ್ತು ಮೂವರು ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ 19ರಂದು ಬೂತ್‌ಗಳಲ್ಲಿ ಪೋಲಿಯೊ ಹನಿ ಹಾಕಲಾಗುತ್ತದೆ. 20ರಿಂದ 22ರ ವರೆಗೆ ಮನೆಮನೆಗೆ ತೆರಳಿ ಪೋಲಿಯೊ ಹನಿ ಹಾಕಲಾಗುವುದು. ಪ್ರಾಥಮಿಕ ಆರೋಗ್ಯಕೇಂದ್ರ ವ್ಯಾಪ್ತಿಯ ಹಳ್ಳಿಗಳ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಸದಸ್ಯರು ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವಲ್ಲಿ ಸಹಕರಿಸುವಂತೆ ಡಾ. ಲಕ್ಷ್ಮಣ್ ನಾಯಕ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT