ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡ ಸದೃಶ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅತಿವೃಷಿ್ಟಯಿಂದಾಗಿ ಈ ವರ್ಷ ಮಲೆ ನಾಡಿನಲ್ಲಿ ಆದ ಅನಾಹುತ, ಅದರಲ್ಲೂ ಕೊಳೆರೋಗದಿಂದ ಅಡಿಕೆ ಬೆಳೆಗಾರರಿಗಾದ ನಷ್ಟ, ಕೃಷಿಕರ ಬವಣೆ ಕುರಿತು ನಾನು ಬರೆದ ಲೇಖನ 'ಸಂಗತ' ದಲ್ಲಿ ಪ್ರಕಟವಾಗಿತು್ತ. ಅಷ್ಟೇ ಅಲ್ಲ; ಮರುದಿನ ‘ಪ್ರಜಾವಾಣಿ’ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತನ್ನ ‘ಸಂಪಾದಕೀಯ’ದಲ್ಲೂ (‘ಜನರ ಕಷ್ಟಕ್ಕೆ ಮಿಡಿಯುವರೇ’) ಆಗ್ರಹಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹಾಗೂ ಸಚಿವ ಕಿಮ್ಮನೆ ರತ್ನಾಕರ ಅವರ ಜತೆ, ಆಗುಂಬೆ ಸಮೀಪದ ಕೃಷಿಕ ತಲಗೆರೆ ಗೋಪಾಲಕೃಷ್ಣ ಭಟ್ಟರ ಅಡಿಕೆ ತೋಟಕ್ಕೆ ಭೇಟಿ ನೀಡಿ, ಕೊಳೆರೋಗದಿಂದ ರೈತರಿಗೆ ಆದ ಅನಾಹುತವನ್ನು ಕಣ್ಣಾರೆ ಕಂಡು, ಪ್ರತೀ ಹೆಕ್ಟೇರ್ ಅಡಿಕೆ ತೋಟಕ್ಕೆ, ಹನ್ನೆರಡು ಸಾವಿರ ರೂ ಪರಿಹಾರ ಧನ  ಘೋಷಿಸಿದ್ದು ಮಾತ್ರವಲ್ಲ;
ತಕ್ಷಣವೇ ಆ ಹಣವನ್ನು ವಿತರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದರ ಫಲವಾಗಿ, ರೈತರಿಗೆ ಅದು ದಕ್ಕುತ್ತಿರುವುದು ನಿಜಕ್ಕೂ ಪವಾಡ ಸದೃಶ ಘಟನೆ! ರೈತರಿಗೆ- ಭಾರೀ ನಷ್ಟ ಆಗಿದ್ದರೂ, ಅಲ್ಪಪ್ರಮಾಣದಲ್ಲಾದರೂ ಸರ್ಕಾರ ಪರಿಹಾರ ದೊರಕಿಸಿಕೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT