ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡಗಳ ಹಿಂದಿನ ಸತ್ಯ ತಿಳಿಯಲು ಸಲಹೆ

Last Updated 14 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ನಾಯಕನಹಟ್ಟಿ: ವಿದ್ಯಾರ್ಥಿಗಳು ಪವಾಡಗಳ ಹಿಂದಿನ ಸತ್ಯವನ್ನು ತಿಳಿಯುವಂತಹ ಕೆಲಸವನ್ನು ಮಾಡಿ ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ಎಂ. ಶಿವಸ್ವಾಮಿ ಕರೆ ನೀಡಿದರು.

ಸಮೀಪದ ತಿಮ್ಮಣ್ಣನಹಳ್ಳಿಯಲ್ಲಿ ತಳುಕಿನ ಸರ್ಕಾರಿ ಪದವಿ ಪೂರ್ವಕಾಲೇಜು ಬುಧವಾರ ಹಮ್ಮಿಕೊಂಡಿದ್ದ ಪವಾಡಗಳ ಗುಟ್ಟು ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವರು ಮನುಷ್ಯನ ಮನೋದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಹಣಗಳಿಸುವ ಪ್ರಯತ್ನ ಮಾಡುತ್ತಾರೆ. ಇದು ಸರ್ವೇಸಾಮಾನ್ಯ. ವಿದ್ಯಾರ್ಥಿಗಳು ಪ್ರಶ್ನಿಸದೇ ಏನನ್ನೂ ಒಪ್ಪುವಂತಹ ಗೋಜಿಗೆ ಹೋಗಬಾರದು.

ಅಲ್ಲದೇ, ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥರನ್ನು ಮೋಸ ಮಾಡುವಂತಹ ಉದಾಹರಣೆಗಳಿವೆ. ವಿಜ್ಞಾನದ ಪ್ರಯೋಗಗಳು ಜನರಿಗೆ ಅರ್ಥವಾಗುವುದಿಲ್ಲ ಎಂದರು.

ಪ್ರಾಂಶುಪಾಲ ಭಗವಂತ ಕಟ್ಟೀಮನಿ ಮಾತನಾಡಿ, ಮೋಸಹೋಗುವವರು ಇರುವವರೆಗೂ ಮೋಸಮಾಡುವವರು ಇದ್ದೇ ಇರುತ್ತಾರೆ. ವೈಜ್ಞಾನಿಕ ಮನೋಧರ್ಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದರ ಜತೆಗೆ ಪೋಷಕರಲ್ಲೂ ಈ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಚಂದ್ರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕಲಾವಿದರಾದ ನಾಗರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ತಪ್ಪ, ರಾಜಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT