ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯಕೀಯ ಪರೀಕ್ಷಕರ ಪ್ರತಿಭಟನೆ

Last Updated 2 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಸದಸ್ಯರು ಸೋಮವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಶು ವೈದ್ಯಕೀಯ ಪರೀಕ್ಷಕರಿಗೆ ಪಿಯುಸಿ ವಿಜ್ಞಾನ (ಬಯೋಲಾಜಿ) ನಂತರ ಎರಡು ವರ್ಷದ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಬದಲಾಗಿ ಎರಡು ವರ್ಷಗಳ ಪಶು ವೈದ್ಯಕೀಯ ಡಿಪ್ಲೋಮಾ ವಿದ್ಯಾರ್ಹತೆ ನಿಗದಿಪಡಿಸಬೇಕು. ನಮ್ಮ ವೃಂದದ ನೌಕರರಿಗೆ ಸೇವಾ ಭದ್ರತೆ ನೀಡಲು ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹೋಬಳಿ ಮಟ್ಟದಲ್ಲಿರುವ ಪಶು ವೈದ್ಯಕೀಯ ಸಂಸ್ಥೆಗಳನ್ನು ಪಶು ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಿಬೇಕು. ಏಕರೂಪದ ಸಿಬ್ಬಂದಿ ವರ್ಗ ಹೊಂದುವಂತೆ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಜಾನುವಾರು ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ವೃಂದದ ನೌಕರರಿಗೆ ಸೇವಾ ಅವಧಿಯಲ್ಲಿ ಕೇವಲ ಎರಡೇ ಮುಂಬಡ್ತಿಯ ಅವಕಾಶವಿದೆ. ಮೂರನೇ ಮುಂಬಡ್ತಿ ಅವಕಾಶ ಕಲ್ಪಿಸಲು ತಾಲ್ಲೂಕು ಮಟ್ಟದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಸಮಗ್ರ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಾಲ್ಲೂಕಿಗೆ ಒಂದರಂತೆ 176 ಹುದ್ದೆಗಳು, ಜಿಲ್ಲಾ ಕೇಂದ್ರದಲ್ಲಿ ತೆರೆಯಲು ಉದ್ದೇಶಿಸಿರುವ ಪಾಲಿ ಕ್ಲಿನಿಕ್‌ಗಳಲ್ಲಿನ 30 ಹುದ್ದೆಗಳು ಮತ್ತು 33 ಕ್ಷೇತ್ರಗಳಲ್ಲಿನ 33 ಹುದ್ದೆಗಳು ಸೇರಿದಂತೆ ಒಟ್ಟು 239 ಹುದ್ದೆಗಳನ್ನು ಬಿ ಗುಂಪಿನ ಜಾನುವಾರು ಅಭಿವೃದ್ಧಿ ಅಧಿಕಾರಿಗಳ ಹುದ್ದೆಯಾಗಿ ಸೃಷ್ಟಿಸುವಂತೆ ಆಗ್ರಹಿಸಿದರು.

ಪಶು ವೈದ್ಯಕೀಯ ಪರೀಕ್ಷಕರ ವೃಂದಕ್ಕೆ ವೇತನ ಶ್ರೇಣಿ ನಿಗದಿಪಡಿಸಬೇಕು. ತಾಂತ್ರಿಕ ಅಧಿಕಾರಿಗಳಿಗೆ ನೀಡುವಂತೆ ಗ್ರಾಮೀಣ ಭತ್ಯೆ ಮತ್ತು ಕ್ಷೇತ್ರ ಭತ್ಯೆಯನ್ನು ಪಶು ವೈದ್ಯಕೀಯ ಪರೀಕ್ಷಕರ ಎಲ್ಲ ವೃಂದದ ನೌಕರರಿಗೆ ನೀಡಬೇಕು. ಸದ್ಯ ನೀಡುತ್ತಿರುವ ರೂ. 200 ವಿಶೇಷ ಭತ್ಯೆಯನ್ನು ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮತ್ತು ಜಾನುವಾರು ಅಧಿಕಾರಿ ಹುದ್ದೆಗೂ ವಿಸ್ತರಿಸುವಂತೆ ಮನವಿ ಮಾಡಿದರು.

ನಿಗದಿತ ಪ್ರವಾಸ ಭತ್ಯೆಯನ್ನು ಪಶು ವೈದ್ಯಕೀಯ ಪರೀಕ್ಷಕರಿಗೆ ರೂ. 225, ಹಿರಿಯ ಪಶು ವೈದ್ಯಕೀಯ ಪರೀಕ್ಷಕರಿಗೆ ರೂ. 400 ನೀಡುತ್ತಿದ್ದು, ಜಾನುವಾರು ಅಧಿಕಾರಿ ಹುದ್ದೆಗೂ ರೂ. 750 ಪ್ರವಾಸ ಭತ್ಯೆ ನೀಡುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT