ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟದಲ್ಲೊಂದು ‘ಕುಂಬಾರ’ ಕಪ್ಪೆ!

Last Updated 16 ಮೇ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟದಲ್ಲಿ14 ಹೊಸ ಪ್ರಭೇದಗಳ ಕುಣಿಯುವ ಕಪ್ಪೆ­ಗಳನ್ನು ಗುರುತಿಸಿರುವ ಬೆನ್ನಹಿಂದೆಯೇ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಮತ್ತೊಂದು ಹೊಸ ಪ್ರಭೇದದ ಕಪ್ಪೆ­ಯನ್ನು ಶೋಧಿಸಿದ್ದಾರೆ. ಮೊಟ್ಟೆಗಳನ್ನು ರಕ್ಷಿಸಲು ಮಣ್ಣಿನ ಲೇಪ ಮಾಡುವು­ದರಿಂದ ಈ ಪ್ರಭೇದ ಕಪ್ಪೆಗಳಿಗೆ ‘ಕುಂಬಾರ ಕಪ್ಪೆ’ ಎಂದು ಹೆಸರಿಸಲಾಗಿದೆ.

ಐಐಎಸ್‌ಸಿ ವಿಜ್ಞಾನಿಗಳಾದ ಡಾ. ಕೆ.ವಿ. ಗುರುರಾಜ, ಡಾ.ಕೆ.ಪಿ. ದಿನೇಶ್, ಮತ್ತು ಅಶೋಕ ಸಂಸ್ಥೆಯ ವಿಜ್ಞಾನಿ­ಗಳಾದ ಪ್ರೀತಿ ಜಿ. ಹಾಗೂ ಡಾ. ಜಿ.ರವಿ­ಕಾಂತ್ ಅವರ ತಂಡ ಈ ಪ್ರಭೇದವನ್ನು ಗುರುತಿಸಿದೆ.

ಜೋಗ ಜಲಪಾತದ ಹತ್ತಿರದಲ್ಲಿ­ರುವ ಕತ್ತಲೆಕಾನದಲ್ಲಿ ಈ ಕಪ್ಪೆಯನ್ನು ಪ್ರಥಮ ಬಾರಿಗೆ ವಿಜ್ಞಾನಿಗಳು ನೋಡಿ­ದ್ದಾರೆ. ನಿತ್ಯ ಹರಿದ್ವರ್ಣ ಕಾಡುಗಳು ಮತ್ತು ವರ್ಷ ಪೂರ್ತಿ ನೀರಿರುವ ಹಳ್ಳ, ತೊರೆ­ಗಳು ಈ ಕಪ್ಪೆಗಳ ವಾಸಸ್ಥಾನ­ವಾಗಿದೆ ಎಂದು ಅವರು ಅಭಿಪ್ರಾಯ­ಪಟ್ಟಿದ್ದಾರೆ.

ಈ ಕಪ್ಪೆಯ ವಿಶೇಷ ಗುಣ ಲಕ್ಷಣ­ಗಳೆಂದರೆ, ಹೆಣ್ಣು ಕಪ್ಪೆಗಳು ತಲೆ ಕೆಳ­ಗಾಗಿ ನಿಂತು ಮೊಟ್ಟೆಗಳನ್ನಿಡುತ್ತದೆ. ತದ­ನಂತರ­ದಲ್ಲಿ ಗಂಡು ಕಪ್ಪೆಯು ಈ ಮೊಟ್ಟೆ­ಗಳಿಗೆ ತೊರೆಯಿಂದ ತೆಗೆದ ಮಣ್ಣನ್ನು ಹಚ್ಚುತ್ತದೆ. ಕಪ್ಪೆಗಳಲ್ಲಿ ಇಂತಹ ವರ್ತನೆ ಕಂಡುಬಂದಿದ್ದು ಇದೇ ಮೊದಲ ಸಲ ಎಂದು ವಿಜ್ಞಾನಿಗಳು ತಿಳಿಸಿ­ದ್ದಾರೆ. ಹಾಗಾಗಿ ಈ ಪ್ರಭೇದಕ್ಕೆ 'ಕುಂಬಾರ' ಕಪ್ಪೆ ಎಂದೇ ಹೆಸರಿಡ ಲಾಗಿದೆ.

ಪಶ್ಚಿಮಘಟ್ಟ ಜೀವವೈವಿಧ್ಯ ತಾಣ­ವಾ­ಗಿದ್ದು, ಹಲವು ಪ್ರಭೇದಗಳ ಕಪ್ಪೆ­ಗಳಿಗೂ ತಾವು ಒದಗಿಸಿದೆ. ಗಂಡು ಕುಂಬಾರ ಕಪ್ಪೆಗಳು ಒಂದುಗೂಡಲು ಹೆಣ್ಣನ್ನು ಕರೆಯುವಾಗ ‘ಟೊಕ್‌ ಟೊಕ್‌’ ಎಂಬ ವಿಶಿಷ್ಟ ಸದ್ದು ಹೊರಡಿ­ಸು­ತ್ತವೆ. ಅದಕ್ಕೆ ಹೆಣ್ಣು ಕಪ್ಪೆಗಳು ಓಗೊಡು­ತ್ತವೆ ಎಂದು ವಿಜ್ಞಾನಿಗಳು ವಿವರಿಸಿ­ದ್ದಾರೆ.

‘ತಮ್ಮ ಸಂತತಿಯನ್ನು ಉಳಿಸಲು ಈ ಕಪ್ಪೆಗಳು ಅಷ್ಟೊಂದು ಜಾಗರೂಕತೆ­ಯಿಂದ ಮೊಟ್ಟೆಗಳನ್ನು ಕಾಯುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT