ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ತಂಡಕ್ಕೆ ಪ್ರಶಸ್ತಿ

ಭಾರತ ರೈಲ್ವೆ ಚೆಸ್‌ ಚಾಂಪಿಯನ್‌ಷಿಪ್‌
Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಮೂವರು  ಅಂತರರಾಷ್ಟ್ರೀಯ ಮಾಸ್ಟರ್‌ಗಳ  ಚತುರ ನಡೆಗಳ ಮೂಲಕ ಎಲ್ಲ ಸುತ್ತುಗಳಲ್ಲೂ ಆಧಿಪತ್ಯ ಸ್ಥಾಪಿಸಿದ ಪಶ್ಚಿಮ ರೈಲ್ವೆ, ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ರೈಲ್ವೆ ಚೆಸ್‌ ಚಾಂಪಿಯನ್‌ಷಿಪ್‌ನ ತಂಡ ವಿಭಾಗದ ಚಾಂಪಿಯನ್‌ ಆಯಿತು.

ಮೂರನೇ ದಿನವಾದ ಮಂಗಳವಾರ ನಡೆದ ಅಂತಿಮ ಎರಡು ಸುತ್ತುಗಳಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ ತಂಡ ಒಟ್ಟು ಹನ್ನೆರಡು ಮ್ಯಾಚ್‌ ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡಿತು. ಕಳೆದ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಆತಿಥೇಯ ನೈರುತ್ಯ ತಂಡದವರು ಒಟ್ಟು ಒಂಬತ್ತು ಮ್ಯಾಚ್‌ ಪಾಯಿಂಟ್‌ಗಳೊಂದಿಗೆ ರನ್ನರ್‌ ಅಪ್‌ ಸ್ಥಾನವನ್ನು ಗಳಿಸಿ ಸಂಭ್ರಮ­ಪಟ್ಟರು. ಕಳೆದ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಚೆನ್ನೈನ ಇಂಟಗ್ರೇಟೆಡ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌) ತಂಡ ಮೂರನೇ ಸ್ಥಾನಕ್ಕೆ ಕುಸಿದದ್ದು 26ನೇ ಚಾಂಪಿಯನ್‌ಷಿಪ್‌ನ ಗಮನಾರ್ಹ ಸಂಗತಿ.

ಎರಡನೇ ದಿನವೇ ಚಾಂಪಿಯನ್ ಪಟ್ಟವನ್ನು ಖಚಿತಪಡಿಸಿಕೊಂಡಿದ್ದ ಪಶ್ಚಿಮ ರೈಲ್ವೆ ತಂಡದವರು ಮಂಗಳವಾರ ಇನ್ನಷ್ಟು ಹುರುಪಿನಿಂದ ಆಡಿದರು. ಬೆಳಿಗ್ಗೆ ದಕ್ಷಿಣ ಕೇಂದ್ರ ರೈಲ್ವೆ ವಿರುದ್ಧ ನಡೆದ ಐದನೇ ಸುತ್ತಿನಲ್ಲಿ ತಂಡದ ‘ದೈತ್ಯ ಸಂಹಾರಿ’ ಸಂಗ್ಮಾ ರಾಹುಲ್‌, ಕಂಡಿ ರವಿ ಮೇಲೆ ಮತ್ತು ಅಕ್ಷತ್‌ ಖಂಪಾರಿಯಾ, ವಿಕ್ರಮಜಿತ್‌ ಸಿಂಗ್‌ ಮೇಲೆ ಗೆಲುವು ದಾಖಲಿಸಿದರು. ಅರ್ಜುನ್‌ ತಿವಾರಿ ಮತ್ತು ವಿಕ್ರಂ ಕುಲಕರ್ಣಿ ಕ್ರಮವಾಗಿ ವೆಂಕಟರಾಮನ್‌ ಮತ್ತು ಗಿರಿನಾಥ್‌ ಜೊತೆ ಡ್ರಾ ಸಾಧಿಸಿದರು.

ಫಲಿತಾಂಶಗಳು
ಐದನೇ ಸುತ್ತು:
  ನೈರುತ್ಯ ರೈಲ್ವೆಗೆ 3–1ರಿಂದ ದಕ್ಷಿಣ ಕೇಂದ್ರ ರೈಲ್ವೆ ವಿರುದ್ಧ ಜಯ; ನೈರುತ್ಯ ರೈಲ್ವೆಗೆ 2.5–1.5ರಿಂದ ಐಸಿಎಫ್‌ ವಿರುದ್ಧ, ದಕ್ಷಿಣ ರೈಲ್ವೆಗೆ 2.5–1.5ರಿಂದ ಕೇಂದ್ರ ರೈಲ್ವೆ ವಿರುದ್ಧ ಗೆಲುವು; ಪೂರ್ವ ರೈಲ್ವೆಗೆ 2.5–1.5ರಿಂದ, ಚಿತ್ತರಂಜನ್‌ ಲೋಕೋಮೊಟಿವ್‌ ವರ್ಕ್ಸ್‌ಗೆ 3–1ರಿಂದ ಡಿಎಲ್‌ಡಬ್ಲ್ಯುಯು ವಾರಣಾಸಿ ವಿರುದ್ಧ ಜಯ; ಉತ್ತರ ಕೇಂದ್ರ ರೈಲ್ವೆಗೆ 3.5–0.5ರಿಂದ ಪಶ್ಚಿಮ ಕೇಂದ್ರ ರೈಲ್ವೆ ವಿರುದ್ಧ ಜಯ; ಆಗ್ನೇಯ ರೈಲ್ವೆಗೆ ಡಿಎಂಡಬ್ಲ್ಯು ಪಟಿಯಾಲಾ ವಿರುದ್ಧ 3–1ರಿಂದ ಜಯ; ರೈಲ್ವೆ ಮಂಡಳಿ ಹಾಗೂ ಮೆಟ್ರೊ ರೈಲ್ವೆ ನಡುವಿನ ಪಂದ್ಯ ಡ್ರಾ.

ಆರನೇ ಸುತ್ತು: ಪಶ್ಚಿಮ ರೈಲ್ವೆಗೆ ಪೂರ್ವ ರೈಲ್ವೆ ವಿರುದ್ಧ 3–1ರಿಂದ ಜಯ; ಐಸಿಎಫ್‌ಗೆ 3–1ರಿಂದ ದಕ್ಷಿಣ ಕೇಂದ್ರ ರೈಲ್ವೆ ವಿರುದ್ಧ, ಕೇಂದ್ರ ರೈಲ್ವೆಗೆ 4–0ಯಿಂದ ರೈಲ್ವೆ ಮಂಡಳಿ ವಿರುದ್ಧ, ವಾಯವ್ಯ ರೈಲ್ವೆಗೆ 3–1ರಿಂದ ಪಶ್ಚಿಮ ಕೇಂದ್ರ ರೈಲ್ವೆ
ವಿರುದ್ಧ, ಡಿಎಲ್‌ಡಬ್ಲ್ಯು ವಾರಣಾಸಿಗೆ 4–0ಯಿಂದ ಡಿಎಂಡಬ್ಲ್ಯು ವಿರುದ್ಧ ಜಯ; ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆ
ನಡುವಿನ, ಚಿತ್ತರಂಜನ್‌ ಲೋಕೋಮೊಟಿವ್‌ ಮತ್ತು ಮೆಟ್ರೊ ರೈಲ್ವೆ ನಡುವಿನ ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT