ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಬಂಗಾಳ: ಎರಡೇ ದಿನದಲ್ಲಿ 19 ಶಿಶು ಸಾವು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾಲ್ಡಾ/ಬಂಕುರಾ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಶಿಶು ಮರಣ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಮಾಲ್ಡಾ, ಬಂಕುರಾ ಜಿಲ್ಲೆಗಳಲ್ಲಿ 19 ಶಿಶುಗಳು ಸಾವನ್ನಪ್ಪಿವೆ.

ಬಂಕುರಾದ ಸಮ್ಮಿಳನಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 10 ಶಿಶು ಮತ್ತು 9 ಶಿಶು ಮಾಲ್ಡಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಮ್ಮಿಳನಿ ಕಾಲೇಜಿನ ಮೇಲ್ವಿಚಾರಕ ಡಾ. ಪಿ.ಖಂಡು, ಮಿದುಳು ಪೊರೆ ಊತ, ನ್ಯುಮೋನಿಯಾ ಮತ್ತು ಕಡಿಮೆ ತೂಕದಿಂದ ಶಿಶುಗಳು ಸತ್ತಿವೆ ಎಂದಿದ್ದಾರೆ.

ಹೆಚ್ಚಿನ ನವಜಾತ ಶಿಶುಗಳು ಹಳ್ಳಿಗಳಿಂದ ಬಂದವಾಗಿದ್ದು ನ್ಯುಮೋನಿಯಾ ಹಾಗೂ ಸೆಪ್ಟಿಸೆಮಿಯಾದಿಂದ ಬಳಲುತ್ತಿವೆ. 9 ಶಿಶುಗಳು ಸಾಯುವ ಮೂಲಕ 16 ದಿನಗಳಲ್ಲಿ ಒಟ್ಟು 125 ಶಿಶು ಮರಣ ಉಂಟಾಗಿದೆ.

ನವಜಾತ ರಕ್ಷಣಾ ಕೇಂದ್ರದ ತಜ್ಞರು ಸದ್ಯದಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಮಾಲ್ಡಾ ಆಸ್ಪತ್ರೆಯ ಡಾ. ಎಂ. ಎ ರಶೀದ್ ತಿಳಿಸಿದ್ದಾರೆ.

ಸರ್ಕಾರಿ ಸೌಲಭ್ಯ ಇರುವಲ್ಲಿ ಶಿಶು ಮರಣ ಹೆಚ್ಚುತ್ತಿರುವುದಕ್ಕೆ ಅಪೌಷ್ಟಿಕತೆ ಕಾರಣ ಎಂಬ ವಾದವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೆರಿಗೆ ಸಂದರ್ಭ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೇ ಶಿಶು ಜನಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT