ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಟಿಂಗ್ ಕೈಬಿಡಲು ನಾನೂ ಕಾರಣ: ಕ್ಲಾರ್ಕ್

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೊಬರ್ಟ್ (ಪಿಟಿಐ): ಏಕದಿನ ಕ್ರಿಕೆಟ್ ತಂಡದಿಂದ ರಿಕಿ ಪಾಂಟಿಂಗ್ ಅವರನ್ನು ಕೈಬಿಡಲು ಆಯ್ಕೆಗಾರರ ಮೇಲೆ ತಾವು ಹೆಚ್ಚಿಸಿದ ಒತ್ತಡ ಕಾರಣವೆಂದು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾಕ್ ಒಪ್ಪಿಕೊಂಡಿದ್ದಾರೆ.

ನಾಯಕ ಎನ್ನುವ ಕಾರಣಕ್ಕಾಗಿ ಜಾನ್ ಇನ್ವರರಿಟಿ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾಗಿರುವ ಕ್ಲಾರ್ಕ್ ಅವರು ಆಯ್ಕೆ ಸಮಿತಿ ಸಭೆಯಲ್ಲಿ ಪಾಂಟಿಂಗ್ ಕೈಬಿಡುವ ವಿಷಯ ಚರ್ಚೆ ಆದಾಗ ಅದಕ್ಕೆ ಬೆಂಬಲವಾಗಿ ಮಾತನಾಡಿದ್ದರು.

ಈ ಅಂಶವನ್ನು ಅವರೇ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. 2015ರ ವಿಶ್ವಕಪ್ ಕ್ರಿಕೆಟ್‌ಗೆ ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಯುವಕರಿಗೆ ಅವಕಾಶ ಸಿಗಬೇಕು ಎನ್ನುವುದು ಮೈಕಲ್ ವಾದವಾಗಿತ್ತು. ಅದಕ್ಕೆ ಸಮಿತಿಯ ಎಲ್ಲ ಸದಸ್ಯರೂ ಸಮ್ಮತಿ ವ್ಯಕ್ತಪಡಿಸಿದ್ದರು. ಆದ್ದರಿಂದ ತಾವೂ `ಪಂಟರ್~ ತಂಡದಿಂದ ಸ್ಥಾನ ಕಳೆದುಕೊಳ್ಳಲು ಕಾರಣವೆಂದು ಸ್ಪಷ್ಟಪಡಿಸಿದ್ದಾರೆ.

`ತಂಡದ ನಾಯಕ ನಾನು. ಆದ್ದರಿಂದ ನೂರಕ್ಕೆ ನೂರರಷ್ಟು ಆಯ್ಕೆ ಸಮಿತಿ ಸದಸ್ಯ. ಅದರಲ್ಲಿ ಅನುಮಾನವಿಲ್ಲ. ಸಭೆಯಲ್ಲಿ ನನ್ನ ಅಭಿಪ್ರಾಯಕ್ಕೂ ಅವಕಾಶ ಸಿಗುತ್ತದೆ~ ಎಂದ ಅವರು `ಪಾಂಟಿಂಗ್ ದೀರ್ಘ ಕಾಲದವರೆಗೆ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಆದರೆ ಆಗ ಅವರಿಗೆ ಆಯ್ಕೆ ಸಮಿತಿಯಲ್ಲಿ ಸದಸ್ಯತ್ವ ಇರಲಿಲ್ಲ.

ತಮಗೆ ಕೊಟ್ಟ ಆಟಗಾರರರಲ್ಲಿ ಅಂತಿಮ ಹನ್ನೊಂದರ ಪಟ್ಟಿಯನ್ನು ಮಾತ್ರ ನಿರ್ಧರಿಸುತ್ತಿದ್ದರು. ಈಗ ನನ್ನ ಅಧಿಕಾರದ ಚೌಕಟ್ಟು ದೊಡ್ಡದು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT