ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿಗೆ 28 ಬಲಿ

Last Updated 1 ಜುಲೈ 2013, 13:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್): ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ನಗರದಲ್ಲಿ ಭಾನುವಾರ ರಾತ್ರಿ ಶಿಯಾ ಮುಸ್ಲಿಂ ಸಮುದಾಯದ ಮಸೀದಿಯೊಂದನ್ನು ಗುರಿಯಾಗಿರಿಸಿಕೊಂಡು ಆತ್ಮಹತ್ಯಾ ಬಾಂಬರ್‌ನೊಬ್ಬ ನಡೆಸಿದ ಸ್ಫೋಟದಲ್ಲಿ ಕನಿಷ್ಠ 28 ಜನರು ಮೃತಪಟ್ಟು, 70ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ತುಂಬಾ ಪ್ರಬಲವಾಗಿದ್ದ ಈ ಸ್ಫೋಟದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಘಟನಾಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲು ವ್ಯತ್ಯಯ ಉಂಟಾಯಿತು. ಅಲ್ಲದೇ, ಈ ಸ್ಫೋಟದಿಂದಾಗಿ ಕಟ್ಟಡದ ಸುತ್ತಲಿನ ಹಲವು ಕಟ್ಟಡಗಳು ಹಾಗೂ ವಾಹನಗಳು ಜಖಂಗೊಂಡಿವೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.

ಸೈಕಲ್ ಮೇಲೆ ಬಂದ ಆತ್ಮಹತ್ಯಾ ಬಾಂಬರ್ ಕ್ವೆಟ್ಟಾ ನಗರದಲ್ಲಿ ಅತ್ಯಂತ ಭದ್ರತಾ ವ್ಯವಸ್ಥೆಯುಳ್ಳ ಜನಭರಿತ ಪ್ರದೇಶದಲ್ಲಿ ತನ್ನನ್ನು ಸ್ಫೋಟಿಸಿಕೊಂಡ ಎಂದು ನಗರ ಪೊಲೀಸ್ ಅಧಿಕಾರಿ ಜುಬೈರ್ ಮೆಹಮೂದ್ ತಿಳಿಸುವ ಜತೆಗೆ ಮೃತರ ಸಂಖ್ಯೆಯನ್ನು ದೃಢಪಡಿಸಿದರು.

ಪ್ರತ್ಯಕ್ಷದರ್ಶಿಯೊರ್ವ ಹೇಳುವಂತೆ ಮಹಿಳೆಯರ ಉಡುಪು ಧರಿಸಿ ಬಂದ್ ಆತ್ಮಹತ್ಯಾ ಬಾಂಬರ್ ಜನಸಂದಣಿಯತ್ತ ಬರುತ್ತಲೇ ತಾನು ಧರಿಸಿದ್ದ ಜಾಕೆಟ್‌ನಲ್ಲಿಟ್ಟಿದ್ದ ಸ್ಫೋಟಕವನ್ನು ಸ್ಫೋಟಿಸಿದ.  ಈ ವೇಳೆ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬಂದು ಜಮಾಯಿಸಿದ್ದ ಜನರು ಸ್ಫೋಟಕ್ಕೆ ಬಲಿಯಾದರು.

ಘಟನೆ ಕುರಿತಂತೆ ಮೂರು ದಿನಗಳ ದೇಶದಾದ್ಯಂತ ಶೋಕಾಚರಣೆಗೆ ಕರೆ ನೀಡಿರುವ ಶಿಯಾ ಸಮುದಾಯವು, ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷಿಸುವ ಜತೆಗೆ ಸಮುದಾಯಕ್ಕೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT