ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ವೈದ್ಯನಿಗೆ ಅಮೆರಿಕ ಪೌರತ್ವ: ಕಾಂಗ್ರೆಸ್ಸಿಗರ ಆಗ್ರಹ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆಯಲ್ಲಿ ಸಿಐಎಗೆ ನೆರವು ನೀಡಿದ ಕಾರಣಕ್ಕಾಗಿ `ದೇಶದ್ರೋಹಿ ಆರೋಪ~ಕ್ಕೊಳಗಾಗಿ ಈಗ ಪಾಕಿಸ್ತಾನ ಜೈಲಿನಲ್ಲಿರುವ ವೈದ್ಯ ಡಾ. ಶಕೀಲ್ ಅಫ್ರಿದಿ ಅವರಿಗೆ ಅಮೆರಿಕದ ನಾಗರಿಕತ್ವ ನೀಡಬೇಕೆಂದು ಇಲ್ಲಿನ ಕಾಂಗ್ರೆಸ್ ಸಂಸದರ ಗುಂಪೊಂದು ಒತ್ತಾಯಿಸಿದೆ.

ಈ ಪಾಕ್ ವೈದ್ಯನಿಗೆ ತಮ್ಮ ದೇಶದ ಪೌರತ್ವ ನೀಡುವಂತೆ ಸೂಚಿಸಿ ಅಮೆರಿಕ ಜನಪ್ರತಿನಿಧಿಗಳ ಸಭೆಯಲ್ಲಿ (ಕೆಳಮನೆ) ಮಸೂದೆಯೊಂದನ್ನು ಮಂಡಿಸಲಾಗಿದೆ ಎಂದು ಕಾಂಗ್ರೆಸ್ಸಿಗ ಡಾನಾ ರೊಹ್ರಾಬಚರ್ ತಿಳಿಸಿದ್ದಾರೆ.
ಈ ಮಸೂದೆಗೆ ಬಿಲ್ ಪೋಸಿ, ಟೆಡ್ ಪೋ, ರೋಸ್ಕೊ ಬಾರ್ಲೆಟ್ ಸೇರಿದಂತೆ ಡಜನ್‌ಗೂ ಅಧಿಕ ಸಂಸದರು ಸಹಿ ಹಾಕಿರುವುದಾಗಿ ತಿಳಿದುಬಂದಿದೆ.

ಲಾಡೆನ್ ಕಾರ್ಯಾಚರಣೆಯಲ್ಲಿ ಡಾ. ಅಫ್ರಿದಿ ನೆರವಾದುದನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಿಯಾನ್ ಪನೆಟ್ಟಾ ಅವರು ಬಹಿರಂಗಪಡಿಸಿದ ನಂತರ ಈ ಒತ್ತಾಯ ಕೇಳಿಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT