ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಸ್ಫೋಟ: 29 ಸಾವು

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ವಾಯವ್ಯ ಭಾಗದ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ಮಂಗಳವಾರ ಶಕ್ತಿಶಾಲಿ ಬಾಂಬ್ ಸ್ಫೋಟದಿಂದ ಅರೆಸೇನಾ ಪಡೆಯ ಮೂವರು ಸಿಬ್ಬಂದಿ ಸೇರಿ 29 ಅಮಾಯಕರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಖೈಬರ್ ಪ್ರಾಂತ್ಯದ ಪ್ರಮುಖ ಪಟ್ಟಣವಾದ ಜಮರುದ್‌ನ ಮಾರುಕಟ್ಟೆಯಲ್ಲಿ ಈ ಸ್ಫೋಟ ಸಂಭವಿಸಿದೆ.
 ಜಮರುದ್ ಮಾರುಕಟ್ಟೆಯಲ್ಲಿ ಬಸ್ ಹಾಗೂ ಟ್ರಕ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ವೊಂದರಲ್ಲಿ ಈ ಬಾಂಬ್ ಇಡಲಾಗಿತ್ತು.

ಟ್ರಕ್‌ನಲ್ಲಿ ಕುಳಿತಿದ್ದವರೆಲ್ಲ ಸ್ಥಳದಲ್ಲೇ ಸತ್ತರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಪೆಶಾವರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸ್ಫೋಟದಿಂದಾಗಿ ಸಮೀಪದ ಪೆಟ್ರೋಲ್ ಬಂಕ್ ಹಾಗೂ ಸುತ್ತಲಿದ್ದ ವಾಹನಗಳು ಜಖಂಗೊಂಡಿವೆ.
ಹೊಣೆ: ಪಾಕಿಸ್ತಾನ ತಾಲಿಬಾನ್ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT