ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಅಧ್ಯಕ್ಷರಾಗಿ ಮ್ಯಾಮ್ನೂನ್ ಹುಸೇನ್

ಅತ್ಯುನ್ನತ ಹುದ್ದೆಗೇರಿದ ಭಾರತೀಯ ಸಂಜಾತ
Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಭಾರತ ಸಂಜಾತ ಮ್ಯಾಮ್ನೂನ್ ಹುಸೇನ್ ಪಾಕಿಸ್ತಾನದ 12ನೇ ಅಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ. ಇವರು  ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ನಿಕಟವರ್ತಿಯಾಗಿದ್ದಾರೆ. ಈಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಅವಧಿ ಇದೇ ಸೆಪ್ಟೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ಆ ಬಳಿಕ ಸೆ. 9ರಂದು  ಮ್ಯಾಮ್ನೂನ್ ಅವರು ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಭ್ಯರ್ಥಿ ಹಾಗೂ ನಿವೃತ್ತ ನ್ಯಾಯಾಧೀಶ ವಾಜಿಯುದ್ದೀನ್ ಅಹ್ಮದ್ ಅವರನ್ನು ಮ್ಯಾಮ್ನೂನ್ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಪರಾಭವಗೊಳಿಸಿದರು.

ಇನ್ನೊಂದು ಪ್ರಮುಖ ಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮತದಾನದ ದಿನ ಬದಲಾಯಿಸಿದ್ದನ್ನು ಖಂಡಿಸಿ ಚುನಾವಣೆ ಬಹಿಷ್ಕರಿಸಿತ್ತು. ಆಡಳಿತಾರೂಢ ಪಾಕಿಸ್ತಾನ ಮುಸ್ಲಿಮ್ ಲೀಗ್- ನವಾಜ್ ಪಕ್ಷವು ಹುಸೇನ್ ಅವರನ್ನು ಕಣಕ್ಕಿಳಿಸಿತ್ತು. ಸಂಸತ್ತು ಹಾಗೂ ನಾಲ್ಕು ಪ್ರಾಂತೀಯ ಅಸೆಂಬ್ಲಿಯ ಸಾವಿರಕ್ಕೂ ಹೆಚ್ಚು ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.

ಭಾರತದ ಐತಿಹಾಸಿಕ ನಗರಿ ಆಗ್ರಾದಲ್ಲಿ 1940ರಲ್ಲಿ ಹುಸೇನ್ ಜನಿಸಿದರು. ಆದರೆ 1947ರ ದೇಶ ವಿಭಜನೆ ಸಮಯದಲ್ಲಿ ಅವರ ಪಾಲಕರು ಪಾಕಿಸ್ತಾನಕ್ಕೆ ವಲಸೆ ಹೋದರು. ಪಾಕಿಸ್ತಾನದಲ್ಲಿ ಈವರೆಗೆ 11 ಅಧ್ಯಕ್ಷರು ಕಾರ್ಯನಿರ್ವಹಿಸಿದ್ದು, ಈ ಪೈಕಿ ಐವರು ಸೇನೆಯ ಮುಖ್ಯಸ್ಥರು. ಅವರ ಪೈಕಿ ನಾಲ್ವರು ಕ್ಷಿಪ್ರ ಬಂಡಾಯದ ಮೂಲಕ ಅಧಿಕಾರ ಹಿಡಿದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT