ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಕೈದಿಗಳ ಬಿಡುಗಡೆ: ಸೂಚನೆ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಶಿಕ್ಷೆ ಪೂರ್ಣಗೊಳಿಸಿದ್ದರೂ ದೇಶದ ಕಾರಾಗೃಹಗಳಲ್ಲಿ ಕಾಲ ತಳ್ಳುತ್ತಿರುವ ಪಾಕಿಸ್ತಾನದ 54 ಕೈದಿಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.

ಕೈದಿಗಳನ್ನು ಬಿಡುಗಡೆ ಮಾಡಿ ಅವರ ದೇಶಗಳಿಗೆ ಗೌರವದಿಂದ ಕಳುಹಿಸಿಕೊಡುವ ಕಾರ್ಯವನ್ನು ಒಂದು ತಿಂಗಳ ಒಳಗೆ ಮುಗಿಸಬೇಕು ಎಂದು ನಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಚ್.ಎಲ್. ಗೋಖಲೆ ಅವರನ್ನೊಳಗೊಂಡ ನ್ಯಾಯ ಪೀಠವು ಹೇಳಿದೆ.

`ಅಲ್ಲದೇ ದೇಶದಲ್ಲಿರುವ ಬಾಂಗ್ಲಾ, ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ಕೈದಿಗಳಿಗೂ ಈ ತೀರ್ಪು ಅನ್ವಯಿಸುತ್ತದೆ~ ಎಂದು ಕೋರ್ಟ್ ತಿಳಿಸಿತು.

`ಶಿಕ್ಷೆಯ ಅವಧಿ ಮುಗಿಸಿರುವ ಈ ಕೈದಿಗಳ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರದ ಸರ್ಕಾರ, ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ವಿಫಲವಾಗಿದೆ~ ಎಂದು ಹರಿಹಾಯ್ದ ಪೀಠವು, ` ಮಾನವ ಹಕ್ಕುಗಳನ್ನು  ಗೌರವಿಸಿ ಅದಕ್ಕೆ ಬದ್ಧರಾಗಿರಬೇಕಲ್ಲದೆ, ವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಿಧಾನದ 21ನೇ ಅನುಚ್ಛೇದವನ್ನು ಎತ್ತಿ ಹಿಡಿಯಬೇಕು~ ಎಂದು ಅಭಿಪ್ರಾಯಪಟ್ಟಿದೆ.

ಈಗಾಗಲೇ ಸೆರೆವಾಸವನ್ನು ಪೂರೈಸಿರುವ 365 ಪಾಕ್ ಕೈದಿಗಳ ಪಟ್ಟಿಯನ್ನು ಕಳೆದ ನ. 28 ರಂದು ಸರ್ಕಾರ  ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT