ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಗಾಯಕ ರಾಹತ್‌ಗೆ 15 ಲಕ್ಷ ದಂಡ

Last Updated 20 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಭಾರಿ ಮೊತ್ತದ ವಿದೇಶಿ ಕರೆನ್ಸಿಯನ್ನು ತಮ್ಮೊಡನೆ ಸಾಗಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಗಾಯಕ ರಾಹತ್ ಫತೇ ಆಲಿ ಖಾನ್ ಮತ್ತು ಅವರ ವ್ಯವಸ್ಥಾಪಕ ಮರೂಫ್ ಅವರಿಗೆ ತಲಾ 15 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆದರೆ ಅವರಿಬ್ಬರೂ ದಂಡದ ಹಣವನ್ನು ಪಾವತಿಸಿಲ್ಲ. ದಂಡ ಪಾವತಿಸಿದ ಬಳಿಕವಷ್ಟೇ ದೇಶದಿಂದ ಹೊರಹೋಗಲು ಅವರಿಗೆ ಸಮ್ಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಈವೆಂಟ್ ಮ್ಯಾನೇಜರ್ ಚೈತ್ರೇಶ್ ಶ್ರೀವಾಸ್ತವ ಮತ್ತು ಹಾಗೂ ಮುಂಬೈನ ಇಬ್ಬರು ವಿದೇಶಿ ವಿನಿಮಯ ಮಾರಾಟಗಾರರ ವಿರುದ್ಧ ನಡೆಸುತ್ತಿರುವ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT