ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಪ್ರದರ್ಶನದಿಂದ ದೇಶಕ್ಕೆ ಪ್ರಯೋಜನ

Last Updated 19 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ಪಾಕಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉನ್ನತ ಸಾಧನೆ ಮಾಡಿದಲ್ಲಿ ದೇಶಕ್ಕೂ ಪ್ರಯೋಜನ ಆಗಲಿದೆ ಎಂದು ಪಾಕ್ ಆಂತರಿಕ ಆಡಳಿತ ಸಚಿವ ರೆಹಮಾನ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ಕ್ಷೇತ್ರದಲ್ಲಿ ಪಾಕ್ ಸ್ಥಾನ ದೊಡ್ಡದು ಎನ್ನುವುದನ್ನು ಸಾಬೀತು ಪಡಿಸಬೇಕು.ಆ ಮೂಲಕವೇ ಎಲ್ಲ ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳು ಪಾಕಿಸ್ತಾನಕ್ಕೆ ಬಂದು ಆಡುವಂತೆ ಒತ್ತಡ ಹೆಚ್ಚಿಸಬೇಕು.ಆ ನಿಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ ಮಹತ್ವದ್ದಾಗಿದೆ.ತಂಡದ ಆಟಗಾರರ ಮೇಲೆ ಭಾರಿ ನಿರೀಕ್ಷೆಯ ಭಾರವಿದೆ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ದೇಶವು ಅನೇಕ ಸವಾಲುಗಳನ್ನು ಎದುರಿಸಿದೆ. ಕ್ರಿಕೆಟ್ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.ಈಗ ಜನರಿಗೆ ಸಂತಸ ನೀಡುವ ಹೊಣೆಯು ಕ್ರಿಕೆಟ್ ತಂಡದ ಮೇಲಿದೆ’ ಎಂದ ಅವರ ‘ವಿಶ್ವಕಪ್ ನಂತರ ಪರಿಸ್ಥಿತಿ ಖಂಡಿತ ಬದಲಾಗಲಿದೆ.ದೇಶದಲ್ಲಿ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಪಾಕಿಸ್ತಾನದಲ್ಲಿ ಆಡಲು ಬರುವ ಬೇರೆ ದೇಶಗಳ ಕ್ರೀಡಾ ತಂಡಗಳಿಗೆ ಉನ್ನತ ಮಟ್ಟದ ಭದ್ರತೆಯನ್ನು ಕಲ್ಪಿಸುವುದು ನಮ್ಮ ಹೊಣೆ.ಅದಕ್ಕಾಗಿ ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ.ದೇಶದಲ್ಲಿ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನೋಡುವುದು ಸಾಧ್ಯವಾಗಬೇಕು’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT