ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಪ್ರಧಾನಿ ನ್ಯಾಯಾಂಗ ನಿಂದನೆ ಪ್ರಕರಣ: ವಿಚಾರಣೆ ಆರಂಭ

Last Updated 13 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಪುನಃ ಕೈಗೆತ್ತಿಕೊಳ್ಳುವಂತೆ ತಾನು ನೀಡಿದ್ದ ಆದೇಶವನ್ನು ಪಾಲಿಸದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಮೇಲೆ ಸುಪ್ರೀಂ ಕೋರ್ಟ್, ಸೋಮವಾರ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.

ಯೂಸುಫ್ ರಾಜಾ ಗಿಲಾನಿ ಅವರು, ನ್ಯಾಯಾಂಗ ನಿಂದನೆ ದೋಷಾರೋಪ ಹೊತ್ತಿರುವ ಪ್ರಥಮ ಪಾಕ್ ಪ್ರಧಾನಿ ಎಂಬ ಅಪಖ್ಯಾತಿಗೊಳಗಾಗುತ್ತಿದ್ದಾರೆ. ನ್ಯಾಯಾಲಯದ ವಿಚಾರಣೆಯ ನಂತರ ಆರೋಪ ಸ್ಥಿರಪಟ್ಟರೆ 59ರ ಹರೆಯದ ಪ್ರಧಾನಿ ಗಿಲಾನಿ ಅವರು ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಗಿಲಾನಿ ಅವರು, ಸೋಮವಾರ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯಕ್ಕೆ ಹಾಜರಾಗಿ ತಾವು ನಿರಪರಾಧಿಗಳು ಎಂದು ವಾದಿಸಿದರು.


ಸುಪ್ರೀಂ ಕೋರ್ಟ್ ಗಿಲಾನಿ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಫೆ. 27ಕ್ಕೆ ಮುಂದೂಡಿತು. 

ಇದಕ್ಕೂ ಮೊದಲು ವಿಚಾರಣೆ ಆರಂಭವಾದಾಗ, ಏಳು ಮಂದಿ ನ್ಯಾಯಮೂರ್ತಿಗಳ ಪೀಠದ ನೇತೃತ್ವ ವಹಿಸಿದ್ದ  ನ್ಯಾಯಮೂರ್ತಿ  ನಾಸಿರ್ ಉಲ್ ಮುಲ್ಕ್ ಅವರು, ಗಿಲಾನಿ ಅವರ ಮೇಲೆ ನ್ಯಾಯಾಲಯ ಹೊರಿಸಿದ್ದ ನ್ಯಾಯಾಂಗ ನಿಂದನೆ ದೋಷಾರೋಪ ಪಟ್ಟಿಯನ್ನು ಓದಿ, ~ದೋಷಾರೋಪಗಳ ಬಗ್ಗೆ ತಿಳಿವಳಿಕೆ ಉಂಟಾಯಿತೆ?~ ಎಂದು ವಿಚಾರಿಸಿದಾಗ,~ಹೌದು ನಾನು ದೋಷಾರೋಪ ಪಟ್ಟಿ ಓದಿದ್ದೇನೆ ಅರ್ಥ ಮಾಡಿಕೊಂಡಿದ್ದೇನೆ~ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT