ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್-ಭಾರತ ಸೈನಿಕರಿಗೂ ಸಿಹಿ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಮೃತಸರ (ಐಎಎನ್‌ಎಸ್): ದೀಪಾವಳಿ ಹಬ್ಬದ ಅಂಗವಾಗಿ ಅಟ್ಟಾರಿ-ವಾಘಾ ಗಡಿ ಪ್ರದೇಶದಲ್ಲಿ ಬುಧವಾರ ಭಾರತ ಮತ್ತು ಪಾಕ್ ಸೈನಿಕರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ಇಲ್ಲಿಂದ 30 ಕಿ.ಮೀ.ದೂರದಲ್ಲಿರುವ ಗಡಿ ರೇಖೆಯ ಬಳಿ ಭಾರತದ ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) ಯೋಧರು ಪಾಕಿಸ್ತಾನದ ಸಟ್ಲೆಜ್ ರೇಂಜರ್ಸ್‌ ಸೇನಾ ತುಕಡಿಯ ಸದಸ್ಯರಿಗೆ ಹಬ್ಬದ ದ್ಯೋತಕವಾಗಿ ಸಿಹಿ ಹಂಚಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಿ ಸೈನಿಕರೂ ಕೂಡಾ ಸಿಹಿ ನೀಡಿದರು. 

 `ಎರಡೂ ದೇಶಗಳ ಸೈನಿಕರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು~ ಎಂದು ಬಿಎಸ್‌ಎಫ್ ಸೇನಾ ಮುಖ್ಯಸ್ಥ ಸುಶಿಲ್ ನೇಗಿ ಸುದ್ದಿಗಾರರಿಗೆ ತಿಳಿಸಿದರು.

ಈ ಗಡಿ ಭಾಗವು ಎರಡೂ ದೇಶಗಳ ನಡುವಿನ ಅಧಿಕೃತ ಭೂ ಸಂಚಾರ ಮಾರ್ಗವಾಗಿದೆ. ಇಲ್ಲಿ ಪ್ರತಿನಿತ್ಯ ಸಂಜೆ ನಡೆಯುವ ಉಭಯ ದೇಶಗಳ ವರ್ಣಮಯ ಸೇನಾ ಕವಾಯತು ಪ್ರದರ್ಶನ ಜನಪ್ರಿಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT