ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಜಿನ್ನಾ ಭಾಷಣದ ದಾಖಲೆ

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರ ಎರಡು ಪ್ರಮುಖ ಭಾಷಣಗಳಿರುವ ದಾಖಲೆಗಳನ್ನು ಆ ರಾಷ್ಟ್ರಕ್ಕೆ ಭಾರತ ಹಸ್ತಾಂತರಿಸಿದ್ದು, ಈ ಕ್ರಮವನ್ನು ಇಲ್ಲಿ ಬಹಳ ಹರ್ಷೋಲ್ಲಾಸದಿಂದ ಸ್ವಾಗತಿಸಲಾಗಿದೆ.

ಭಾರತ ಮತ್ತು ಪಾಕ್ ವಿಭಜನೆಗೂ ಎರಡು ತಿಂಗಳು ಮುನ್ನ, ಅಂದರೆ, 1947ರ ಜೂನ್ 3ರಂದು ನವದೆಹಲಿಯಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ಜಿನ್ನಾ ಮಾಡಿದ ಭಾಷಣ ಮೊದಲನೆಯ ದಾಖಲೆ.

ಇದರಲ್ಲಿ ಎರಡೂ ದೇಶಗಳು ಸೇರುವ ಪ್ರಾಂತ್ಯದಲ್ಲಿ (ವಾಯವ್ಯ ಗಡಿ ಪ್ರಾಂತ್ಯ) ಜನಮತ ಗಣನೆ ನಡೆಸುವ ಕಾರ್ಯಕ್ಕೆ ಜಿನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಎರಡನೆಯ ದಾಖಲೆಯಲ್ಲಿ ಅದೇ ವರ್ಷದ ಆಗಸ್ಟ್ 14ರಂದು ಜಿನ್ನಾ ಮಾಡಿದ ಭಾಷಣವಿದೆ. ಅದರಲ್ಲಿ ಅವರು ಪಾಕ್‌ನಲ್ಲಿ ಎಲ್ಲ ಸಮುದಾಯಗಳ ಕಲ್ಯಾಣ ಮತ್ತು ಯೋಗಕ್ಷೇಮ ಕುರಿತು ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT