ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಭೂಕಂಪ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್): ಬುಧವಾರ ಮುಂಜಾನೆ ಪಾಕಿಸ್ತಾನದ ಕ್ವೆಟ್ಟಾ, ಮುಲ್ತಾನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರಿಕ್ಟರ್ ಮಾಪಕದ 7.3ರ ಪ್ರಮಾಣದಲ್ಲಿ ಭೂಕಂಪವಾಗಿದ್ದು ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಬೆಳಿಗ್ಗೆ 1.23ರ ವೇಳೆಗೆ ಈ ಘಟನೆ ನಡೆದಾಗ ಜನ ಗಾಢ ನಿದ್ರೆಯಲ್ಲಿದ್ದರು. ಉತ್ತರ ಪಾಕಿಸ್ತಾನದಲ್ಲಿ 5 ವರ್ಷಗಳ ಹಿಂದೆ ರಿಕ್ಟರ್ ಮಾಪಕದ 7.5ರ ಪ್ರಮಾಣದಲ್ಲಿ ಭೂಮಿ ನಡುಗಿದ್ದಾಗ 70ಸಾವಿರ ಮಂದಿ ಸತ್ತಿದ್ದರು.

ಇದೇ  ಪ್ರದೇಶ ಬುಧವಾರ ಮತ್ತೆ ನಡುಗಿದಾಗ ಲಕ್ಷಾಂತರ ಜನ ಮನೆಯಿಂದ ಹೊರಗೆ ಓಡಿ ಬಂದು ದಿನವಿಡೀ ರಸ್ತೆ, ಮೈದಾನಗಳಲ್ಲಿ ನಿಂತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಈ ಘಟನೆಯಿಂದ ಇಬ್ಬರು ಮಹಿಳೆಯರು ಹೃದಯಾಘಾತಕ್ಕೆ ಒಳಗಾಗಿದ್ದರೆ, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕರಾಚಿ ನಗರದಲ್ಲಿ ಕೂಡಾ ಇದೇ ಅನುಭವವಾಗಿದ್ದು ಸಹಸ್ರಾರು ಜನ ಆತಂಕದಿಂದ ಬೀದಿಯಲ್ಲಿ ನಿಂತಿದ್ದರು.ಹಲವು ಮನೆಗಳು ಕುಸಿದಿವೆಯಾದರೂ, ಪ್ರಾಣ ಹಾನಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT