ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರ ಪ್ರೀತಿಯೂ ತಾಯ್ತನದ ಹೋಲಿಕೆಯೂ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ನಾನೆಂದೂ ತಾಯ್ತನ ಅನುಭವಿಸಿಲ್ಲ. ಅಂದಮೇಲೆ ಅದರ ನೋವು-ನಲಿವು ಹೇಗೆ ಗೊತ್ತಾಗಬೇಕು? ಆದರೆ, ನಟನೆಯಲ್ಲಿ ಒಂದು ಪಾತ್ರಕ್ಕೆ ಜೀವ ತುಂಬುವುದು ಸಹ ತಾಯಿಯಾಗುವಷ್ಟೇ ಕಷ್ಟ ಎಂದು ಹೋಲಿಸಿ ಮಾತನಾಡಿದ್ದು ನಟ ಮುಮ್ಮುಟ್ಟಿ.

ಕನ್ನಡದಲ್ಲಿ ಅಭಯ ಸಿಂಹ ನಿರ್ದೇಶನದ `ಶಿಕಾರಿ~ ಚಿತ್ರದಲ್ಲಿ ಅಭಿನಯಿಸಿರುವ ಮುಮ್ಮುಟ್ಟಿ ಬೆಂಗಳೂರಿಗೆ ಅತಿಥಿಯಾಗಿ ಬಂದದ್ದು ಬೊಟಿಕ್ ಶೈಲಿಯ ಪ್ರಸೂತಿ ಆಸ್ಪತ್ರೆಯೊಂದಕ್ಕೆ ಪ್ರಚಾರ ನೀಡಲು.

ಹೆಚ್ಚು ಮಾತನಾಡುವ ಮೂಡ್‌ನಲ್ಲಿಲ್ಲದ ಮುಮ್ಮುಟ್ಟಿ ತಾಯ್ತನವನ್ನೂ ಅಭಿನಯವನ್ನೂ ತುಲನೆ ಮಾಡಿದ್ದನ್ನು ಬಿಟ್ಟರೆ ಬಣ್ಣದಲೋಕದ ಬೆರಗಿನ ಬಗ್ಗೆ ಹೆಚ್ಚು ತೆರೆದುಕೊಳ್ಳಲಿಲ್ಲ.

ಹೊಸಬರನ್ನು ಬೆಂಬಲಿಸುವ ಮನಃಸ್ಥಿತಿಯ ಅವರು ಅಭಯ ಸಿಂಹ ಇ-ಮೇಲ್ ಮೂಲಕ ಕಳುಹಿಸಿದ್ದ ಕಥೆಯನ್ನು ಓದಿ ಥ್ರಿಲ್ ಆಗಿ ಅಭಿನಯಿಸಲು ಒಪ್ಪಿದ್ದರು. ಮಲಯಾಳಂ ಭಾಷೆಯಲ್ಲೂ ಸಿದ್ಧಗೊಂಡಿರುವ `ಶಿಕಾರಿ~ ಮುಮ್ಮುಟ್ಟಿ ಅಭಿನಯದ ಮೊದಲ ಕನ್ನಡ ಚಿತ್ರವೆನ್ನುವುದು ವಿಶೇಷ.

ರ‌್ಹಿಯಾ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಪ್ರಸೂತಿ ಕೇಂದ್ರ `ಮದರ್‌ಹುಡ್~ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಭಾಗಿಯಾಗಲು ಮುಮ್ಮುಟ್ಟಿ ನಗರಕ್ಕೆ ಬಂದಿದ್ದರು. ಹೆಣ್ಣಿಗೆ ತಾಯ್ತನ ನೀಡುವ ಖುಷಿ ಬೇರ‌್ಯಾವುದೂ ನೀಡಲ್ಲ. ತನ್ನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಅವಳಲ್ಲಿ ಕಾತರ, ಕುತೂಹಲ ತುಸು ಹೆಚ್ಚು. ಬೆಂಗಳೂರಿನಲ್ಲಿರುವ ಮಹಿಳೆಯರ ತಾಯ್ತನದ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸುತ್ತಿದೆ ಎಂದೆಲ್ಲ ಅವರು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.

`ಮದರ್‌ಹುಡ್~ ಒಂದು ವರ್ಷದ ಸೇವೆಯನ್ನು ಯಶಸ್ವಿಯಾಗಿ ಮುಗಿಸಿದೆ. ಈ ಅವಧಿಯಲ್ಲಿ 350 ಮಕ್ಕಳು ಇಲ್ಲಿ ಜನಿಸಿವೆ. `ಮದರ್‌ಹುಡ್~ ಬೊಟಿಕ್ ಪ್ರಸೂತಿ ಕೇಂದ್ರವಾಗಿದ್ದು ಅತ್ಯಾಧುನಿಕ ಸಾಧನಗಳು, ಲೆವೆಲ್ 5 ಎನ್‌ಐಸಿಯು ಮತ್ತು ಅತ್ಯಾಧುನಿಕ ಪ್ರಸೂತಿ ಸೌಲಭ್ಯ, ಸೌಕರ್ಯಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT