ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳೇಗಾರಿಕೆ ರಾಜಕಾರಣ ಮಟ್ಟ ಹಾಕಿ: ದತ್ತ

Last Updated 23 ಏಪ್ರಿಲ್ 2013, 9:40 IST
ಅಕ್ಷರ ಗಾತ್ರ

ಮಲ್ಲೇಶ್ವರ(ಬೀರೂರು): ಕಡೂರು ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತಿ ಮತ್ತು ಪಾಳೇಗಾರಿಕೆ ರಾಜಕಾರಣಕ್ಕೆ ಮತ ದಾರರು ಪ್ರೀತಿ ರಾಜಕಾರಣದ ಮೂಲಕ ಇತಿಶ್ರೀ ಹಾಡಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ವೈಎಸ್.ವಿ.ದತ್ತ ಅಭಿಪ್ರಾಯಪಟ್ಟರು.
ಕಡೂರು ತಾಲ್ಲೂಕು ಮಲ್ಲೇ ಶ್ವರದಲ್ಲಿ ಚುನಾವಣಾ ಪ್ರಚಾರಕ್ಕೂ ಮುನ್ನ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

`ಕ್ಷೇತ್ರದ ಎಲ್ಲ ಸಮುದಾಯಗಳಲ್ಲಿ ಉಪಚುನಾವಣೆ ಸಂದರ್ಭ ತಾವು ಜಾತಿ ವೈಭವೀಕರಣಕ್ಕೆ ಸಿಲುಕಿ ಮತದಾನ ಮಾಡಿದ್ದು ತಪ್ಪು ಎನ್ನುವ ಮನೋಭಾವ ಮೂಡಿ ಅವರ ಆತ್ಮಾವಲೋಕನ ಅನುಕಂಪವಾಗಿ ಪರಿವರ್ತನೆಯಾಗಿದೆ.  ನಾನು ಸಾಲಗಾರ ಅನ್ನುವುದು ಹೇಗೆ ಜನರಿಗೆ ಗೊತ್ತೋ ಹಾಗೇ ನಾನು ಭ್ರಷ್ಟ ಅಲ್ಲ ಅನ್ನುವುದೂ ತಿಳಿದಿದೆ.

ಈ ಸಂದರ್ಭದಲ್ಲಿ ನನ್ನ ದೌರ್ಬಲ್ಯ ಎಂದರೆ ನಾನು ಹಲವು ಅನುದಾನಗಳನ್ನು ಕೆಲಸ ಮಾಡಿದ್ದರೂ ಸದ್ಯದ ನನ್ನ ಎದುರಾಳಿಗಳು ಹಣದಲ್ಲಿ ಬಲಾಢ್ಯ ರಾಗಿದ್ದು ಕೊನೆ ಹಂತದಲ್ಲಿ ಜನರನ್ನು ಹಣದಿಂದ ಬದಲಾವಣೆ ಮಾಡುವ ಉದ್ದೇಶದಿಂದ ಇದ್ದಾರೆ. ಈ ರೀತಿಯ ಧೈರ್ಯದಿಂದಾಗಿ ನಾನು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರೂ ಅವರು ಮನೆಯಲ್ಲಿ ಇದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಇಲ್ಲವೇ ಇಲ್ಲ. ಕೆಜೆಪಿ ಮತ್ತು ಕಾಂಗ್ರೆಸ್ ವೀರಶೈವ ಸಮುದಾಯದ ಮತಗಳನ್ನೇ ನೆಚ್ಚಿಕೂತಿವೆ ಎಂದರು.

`ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮ ಸ್ವಾಗತಾರ್ಹ. ಇದರಿಂದ ಒಳ್ಳೆಯದೇ ಆಗಿದೆ. ಚೆಕ್‌ಬೌನ್ಸ್ ಪ್ರಕರಣ ತೀರಾ ಖಾಸಗಿ ವಿಚಾರ. ಅದನ್ನು ಪ್ರಕಟ ಮಾಡ ಬೇಕಾದ ಪ್ರಮೇಯವೂ ಇರಲಿ ಎಂದರು. ಸಭೆಯಲ್ಲಿ ಹಿರೇನಲ್ಲೂರು ಶಿವು ಜೆಡಿಎಸ್ ಸೇರ್ಪಡೆಗೊಂಡರು. ಕಂಸಾಗರ ರೇವಣ್ಣ, ಗಂಗಾಧರ ನಾಯ್ಕ, ಮಂಜುನಾಥ ಪ್ರಸನ್ನ, ಸತೀಶನಾಯ್ಕ, ಪಾತೇನಹಳ್ಳಿ ಚೌಡಪ್ಪ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT