ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್ತಾ ಮಸ್ತಿ

Last Updated 27 ಜುಲೈ 2012, 19:30 IST
ಅಕ್ಷರ ಗಾತ್ರ

ಸುಡುವ ಪಾಸ್ತಾವನ್ನು ತುಟಿಗೆ ಸೋಕಿಸುತ್ತಾ ನಾಲಗೆ ಮೇಲೆ ಹೊರಳಾಡಿಸಿ ಹೊಟ್ಟೆಯೊಳಕ್ಕೆ ಇಳಿಸುವಾಗ ಸಿಗುವ ಸುಖವನ್ನು ಅನುಭವಿಸಿಯೇ ತಿಳಿಯಬೇಕು. ಚೀಸ್, ಫುಸಿಲ್ಲಿ, ಕ್ರೀಮಿ ಟೊಮೆಟೊ, ಸ್ಪೆಗಟಿ (ದಪ್ಪ ಎಳೆಯ ಶಾವಿಗೆ), ಚಿಕನ್ ವ್ಹಾಹ್! ಇವೆಲ್ಲದರ ಸಮ್ಮಿಶ್ರಣ ಹೊಂದಿರುವ ಪಾಸ್ತಾ ತಿನ್ನುವಾಗ ಸಿಗುವ ಆನಂದವೇ ಬೇರೆ.

ಪಾಸ್ತಾ ಪ್ರಿಯರಿಗೆ ಪಿಜ್ಜಾ ಹಟ್ ಇಂತಹ ಇನ್ನೊಂದು ಅವಕಾಶ ಕಲ್ಪಿಸಿದೆ. ಪಾಸ್ತಾ ಭಕ್ಷಕರು ಇಲ್ಲಿ ಹನ್ನೊಂದು ಬಗೆಯ ಸ್ವಾದಿಷ್ಟಕರ ಪಾಸ್ತಾ ಸವಿದು ಮಸ್ತಿ ಮಾಡಬಹುದು.

`ಪಾಸ್ತಾ ಮಸ್ತಿ~ ಹೆಸರಿನಡಿಯಲ್ಲಿ ಪರಿಚಯಿಸಿರುವ ಈ ಪಾಸ್ತಾಗಳು ವೈವಿಧ್ಯಮಯ ಸ್ವಾದದಲ್ಲಿ ಲಭ್ಯ. ಪಾಸ್ತಾ ಪ್ರಿಯರು ತಮ್ಮ ಸ್ನೇಹಿತರು, ಕುಟುಂಬದೊಂದಿಗೆ ಪಿಜ್ಜಾ ಹಟ್‌ಗೆ ತೆರಳಿ ಮನಸಾರೆ ಸವಿಯಬಹುದು. ಪಾಸ್ತಾಗಳು ವೆಜ್ ಹಾಗೂ ನಾನ್‌ವೆಜ್ ಎರಡರಲ್ಲೂ ಲಭ್ಯವಿದೆ. ಲಸಂಗಾ ಪಿಜ್ಜಾ ಹಟ್‌ನ ವಿಶೇಷ ಪಾಸ್ತಾ. ಇದರ ಪ್ರತಿ ತುಂಡನ್ನು ತಿನ್ನುವಾಗ ವಿಭಿನ್ನ ಅನುಭೂತಿ ಸಿಕ್ಕುತ್ತದೆ ಹಾಗೂ ಮತ್ತಷ್ಟು ಭಕ್ಷಣೆಗೆ ಪ್ರೇರಣೆ ಹುಟ್ಟಿಸುತ್ತದೆ ಎಂಬುದು ಕಂಪೆನಿ ಹೇಳಿಕೆ. ಅಂದಹಾಗೆ ಪಾಸ್ತಾ ಬೆಲೆ ರೂ.109ರಿಂದ ಪ್ರಾರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT