ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಅದಾಲತ್: ಅರ್ಹತಾ ಪತ್ರ ವಿತರಣೆ

Last Updated 12 ಜುಲೈ 2013, 6:49 IST
ಅಕ್ಷರ ಗಾತ್ರ

ಪಾಂಡವಪುರ: ಸಾಮಾಜಿಕ ಭದ್ರತಾ ಯೋಜನೆಗಳ ಮೊಟ್ಟಮೊದಲು ನಡೆದ ಪಿಂಚಣಿ ಅದಾಲತ್‌ನಲ್ಲಿ 1120 ಜನ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಯೋಜನೆಯ ಅರ್ಹತಾ ಪತ್ರವನ್ನು ಪಡೆದರಲ್ಲದೆ 360 ಜನರು ಯೋಜನೆಗೆ ಒಳಪಡಿಸುವಂತೆ ಅರ್ಜಿ ಸಲ್ಲಿಸಿದರು.

ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಲ್‌ನಲ್ಲಿರುವ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲ್ಲೂಕು ಆಡಳಿತ   ಆಯೋಜಿಸಿದ್ದ ಪಿಂಚಣಿ ಅದಾಲತ್‌ನಲ್ಲಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಅರ್ಹತಾ ಪತ್ರ ವಿತರಿಸಿದರು.

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪಿಂಚಣಿ ಅದಾಲತ್‌ನ್ನು ಉದ್ಪಾಟಿಸಿ ಮಾತನಾಡಿದರು.

ತಹಶೀಲ್ದಾರ್ ಶಿವಕುಮಾರಸ್ವಾಮಿ ಮಾತನಾಡಿದರು., ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಅದಾಲತ್ ಒಂದು ಹೊಸ ಪ್ರಯೋಗವಾಗಿದೆ ಎಂದು  ಶಾಸಕ   ಕೆ.ಎಸ್. ಪುಟ್ಟಣ್ಣಯ್ಯನವರ ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ   ಎಚ್.ಎಂ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ದಾಸೇಗೌಡ, ತಾ.ಪಂ. ಇಒ ಸಿದ್ದಲಿಂಗಮೂರ್ತಿ, ಸದಸ್ಯರಾದ ಲಲಿತಾ ಆನಂದ್, ಎಂ.ಕೆ. ಪುಟ್ಟೇಗೌಡ ಇತರರು ಇದ್ದರು.

ವಿತರಣೆ: ಹೊಸದಾಗಿ ಅರ್ಹತಾ ಪತ್ರ ಪಡೆಯಲು ಅದಾಲತ್ ನಡೆದ ಸ್ಥಳದಲ್ಲಿಯೇ  ವೈದ್ಯರು ವಯಸ್ಸಿನ ಪ್ರಮಾಣ ಪತ್ರ, ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ವಾಸಸ್ಥಳ ಇನ್ನಿತರ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದರು. ಅದಾಲತ್‌ನಲ್ಲಿ 4 ಕೇಂದ್ರಗಳನ್ನು ತೆರೆಯಲಾಗಿತ್ತು. 

`ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಸಾಕುಸಾಕಾಗಿ ಹೋಗುತ್ತಿತ್ತು. ಈಗ ಎಲ್ಲ ಅಧಿಕಾರಿಗಳು ಒಂದೇ ಸ್ಥಳದಲ್ಲೇ ಇರುವುದರಿಂದ ಅಲೆದಾಡುವುದು ತಪ್ಪಿದೆ, ಅಲ್ಲದೆ ಮಧ್ಯವರ್ತಿಗಳ ಹಾವಳಿ ತಪ್ಪಿದೆ' ಎಂದು ಅದಾಲತ್‌ಗೆ ಬಂದಿದ್ದ ವಿಧವೆ ದೇವಮ್ಮ ಅಭಿಪ್ರಾಯಪಟ್ಟರು.

`ಹಲವು ವರ್ಷಗಳಿಂದ ಪಿಂಚಣಿ ನಿಂತುಹೋಗಿತ್ತು. ಮತ್ತೆ ಪಡೆಯಲು ಪ್ರಯಾಸ ಪಡುತ್ತಿದ್ದೆ. ಈಗ ಪಿಂಚಣಿ ಸಿಕ್ಕಿರುವುದರಿಂದ ನನಗೊಂದು ಆಸರೆ ಸಿಕ್ಕಂತಾಗಿದೆ' ಎಂದು   ದೇವರಹಳ್ಳಿಯ ಚಿಕ್ಕಬೆಟ್ಟೇಗೌಡ ಪ್ರಜಾವಾಣಿ ಜತೆಗೆ ತಮ್ಮ ಸಂತಸವನ್ನು ಹಂಚಿಕೊಂಡರು.

ವಿದ್ಯಾರ್ಥಿಗೆ ನೇಣಿಗೆ ಶರಣು
ಪ್ರಜಾವಾಣಿ ವಾರ್ತೆ
ಪಾಂಡವಪುರ: ವಿದ್ಯಾರ್ಥಿಯೊಬ್ಬಳು ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ನುಗ್ಗಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದ ದೇವರಾಜು ಅವರ ಪುತ್ರಿ ಕಾವ್ಯ (18) ಅವರೆ ನೇಣಿಗೆ ಶರಣಾಗಿರುವ ವಿದ್ಯಾರ್ಥಿನಿ. ಬೆಳಿಗ್ಗೆ ತಮ್ಮ ಮನೆಯೊಂದರ ಕೊಠಡಿಯ ಬಾಗಿಲನ್ನು ಭದ್ರಪಡಿಸಿಕೊಂಡು ನೇಣಿಗೆ ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಶಾಸಕ ಭೇಟಿ: ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಅಪಘಾತ: ವ್ಯಕ್ತಿ ಸಾವು
ಪ್ರಜಾವಾಣಿ ವಾರ್ತೆ
ಪಾಂಡವಪುರ: ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಹಾರೋಹಳ್ಳಿ ಗ್ರಾಮದ ಬೋರೇಗೌಡ (55) ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಗ್ರಾಮದ ಬೋರೇಗೌಡ (55) ಅವರೆ ಮೃತ ವ್ಯಕ್ತಿ. ಸುಮಾರು 3 ತಿಂಗಳ ಹಿಂದೆ ಪಟ್ಟಣದ ಪಂಪ್‌ಹೌಸ್ ಬಳಿ ಅಪರಿಚಿತ ಕಾರೊಂದು ರಸ್ತೆ ಬದಿಯಲ್ಲಿದ್ದ ಇಬ್ಬರಿಗೆ ಡಿಕ್ಕಿಹೊಡೆದು ಒಬ್ಬರ  ಸ್ಥಳದಲ್ಲೆ ಅಸುನೀಗಿದ್ದರು,  ತೀವ್ರವಾಗಿ ಗಾಯಗೊಂಡಿದ್ದ ಬೋರೇಗೌಡ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಅರೆಪ್ರಜ್ಞೆಯಲ್ಲಿದ್ದ ಬೋರೇಗೌಡರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಮೃತ ಬೋರೇಗೌಡ ಅವರಿಗೆ ಪತ್ನಿ,  ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT