ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಅದಾಲತ್‌ನಿಂದ ಆರ್ಥಿಕ ಭದ್ರತೆ: ಎಚ್ಕೆ

Last Updated 11 ಸೆಪ್ಟೆಂಬರ್ 2013, 8:25 IST
ಅಕ್ಷರ ಗಾತ್ರ

ಗದಗ: ಬಡವರಿಗೆ  ಅರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲು ಸರಕಾರದ ಯೋಜನೆಗಳಲ್ಲಿ ಒಂದಾದ ಪಿಂಚಣಿ ಅದಾಲತ್‌ ಕಾಯರ್ಕ್ರಮ­ವನ್ನು ಹೋಬಳಿ ಮಟ್ಟದಲ್ಲಿ  ಹಮ್ಮಿ­ಕೊಳ್ಳ­ಲಾಗಿದೆ ಎಂದು ಗ್ರಾಮೀಣಾ­ಭಿವೃದ್ಧಿ ಹಾಗೂ ಪಂಚಾ­ಯತ್‌ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಬೆಟಗೇರಿಯ ಮನ್ನುಬಾಯಿ ಖೋಡೆ ಕಲ್ಯಾಣ ಮಂಟಪದಲ್ಲಿ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಬೆಟಗೇರಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾದ ಸದಾಶಯದಂತೆ ಯೋಜನೆಗಳು ಬಡವರ ಮನೆಗೆ ತಲುಪಬೇಕು ಆದರೆ ಆಡಳಿತ ದೋಷದಿಂದ ಅರ್ಹ ಫಲಾನು­ಭವಿಗಳಿಗೆ ಸಮರ್ಪಕ  ಮಾಹಿತಿ ಸಿಗುತ್ತಿಲ್ಲ. ಇದರಿಂದ ಇಂದಿಗೂ ಸರಕಾರಿ ಕಚೇರಿಯಲ್ಲಿ ಪಿಂಚಣಿ ಪಡೆ­ಯಲು ದಿನವಿಡಿ ಸಾಲುಗಟ್ಟಿ ನಿಂತಿರು­ತ್ತಾರೆ ವಿಷಾದಿಸಿದರು.

ಆಡಳಿತ ಯಂತ್ರದಲ್ಲಿ ಬದಲಾವಣೆ­ಯ ಅಗತ್ಯವಿದೆ. ದಲ್ಲಾಳಿಗಳನ್ನು ದೂರವಿರಿಸಿ ಅರ್ಹ ಫಲಾನುಭವಿಗಳಿಗೆ ಶೋಷಣೆ ಮಾಡದೆ ಬಡವರ ಮನೆಗಳಿಗೆ ಪಿಂಚಣಿ ಮುಟ್ಟಿಸುವ ಕೆಲಸವವನ್ನು ಸರ್ಕಾರ ಪಿಂಚಣಿ ಆದಾಲತ್ ಮೂಲಕ ಮಾಡುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳ ವಿರುದ್ಧ ಧ್ವನಿ ಎತ್ತು ಮೂಲಕ ವಿರೋಧ ಪಕ್ಷದವರು ಬಡವರ  ಬಗ್ಗೆ ಇರುವ ತಾತ್ಸಾರ ಭಾವನೆ ತೋರಿಸುತ್ತಿದ್ದಾರೆ. ಹಿಂದಳಿದ ವರ್ಗಗಗಳ ನಿಗಮ, ಅಲ್ಪ ಸಂಖ್ಯಾತರ ನಿಗಮಗಳಲ್ಲಿನ ಸಾಲವನ್ನು ಮನ್ನಾ ಮಾಡಿದ  ಸರಕಾರ ಬಡವರ ನೋವುಗಳಿಗೆ ಸ್ಪಂದಿಸುತ್ತದೆ ಎಂದರು.

ದೇಶದ ಬಡತನ ನಿರ್ಮೂಲನೆ ಮಾಡಲು ಕೇಂದ್ರ ಸರಕಾರವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಾಲ್ಲೂಕಿನಾದ್ಯಂತ ಅರ್ಹ ಫಲಾನುಭವುಗಳನ್ನು ಗುರುತಿಸಿ ಪಿಂಚಣಿ ಆದೇಶ ಪತ್ರವನ್ನು ವಿತರಿಸಲು ಉಪವಿಭಾಗಧಿಕಾರಿಗೆ ಆದೇಶಿಸಿದರು. ಪಿಂಚಣಿ ಅದಾಲತ್‌ನಲ್ಲಿ ವೃದಾ್ಧಪ್ಯ ವೇತನ, ಅಂಗವಿಕಲರ ಮಾಸಾಶನ, ವಿಧವಾ ವೇತನ, ಆದರ್ಶವಿವಾಹ ಯೋಜನೆಗೆ ಸಂಬಂಧಿಸಿದ ನೂರಾರು ಅರ್ಜಿಗಳನ್ನು ಸ್ವೀಕರಿಸಿಲಾಯಿತು. ಕೆಪಿಸಿಸಿ ಸದಸ್ಯ ವಾಸಣ್ಣ ಕುರುಡಗಿ, ನಗರಸಭೆ ಸದಸ್ಯರುಗಳಾದ ಎಲ್.ಡಿ. ಚಂದಾವರಿ. ಸುರೇಶ ಕಟ್ಟಿಮನಿ, ಪನ್ನಾಬಾಯಿ ಬಾಗಡೆ, ಮಂಜುನಾಥ ಮುಳಗುಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT