ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜಿ ಹಾಸ್ಟೆಲ್ ಸಮಸ್ಯೆಗೆ ಕೊನೆ ಎಂದು?

Last Updated 29 ನವೆಂಬರ್ 2011, 6:50 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತ ಕೋತ್ತರ ಕೇಂದ್ರಕ್ಕೆ ಕುಲಸಚಿವ ಪ್ರೊ. ಮೈಲಾರಪ್ಪ ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅದನ್ನು ಜನವರಿಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಭರವಸೆ ನೀಡಿದ್ದಾರೆ.

15 ವರ್ಷದ ಹಿಂದೆ ಕೇಂದ್ರದ ಜೊತೆಗೆ ಆರಂಭವಾದ ಹಲವು ಸಮಸ್ಯೆ ಗಳೊಂದಿಗೆ ಇಂದಿಗೂ ಮುಂದು ವರಿದಿರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗಕ್ಕೆ 1ಕ್ಕೆ ಸೇರಿದ ವಿದ್ಯಾರ್ಥಿಗಳ ಪಿಜಿ ಹಾಸ್ಟೆಲ್ ಸರಿಯಾಗುವುದೆಂದು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಹಲವು ಸಮಸ್ಯೆ: ಟೇಕಲ್ ರಸ್ತೆ ಯಲ್ಲಿರುವ ಹಾಸ್ಟೆಲ್ ಮೂರು ಪ್ರತ್ಯೇಕ ಕಟ್ಟಡಗಳಲ್ಲಿ ನಡೆಯುತ್ತಿದೆ. ಒಂದೊಂ ದು ಕಟ್ಟಡವೂ ಒಂದೊಂದು ದಿಕ್ಕಿನಲ್ಲಿದೆ. ಈ ಮೂರು ಕಟ್ಟಡಗಳ ಮಧ್ಯೆ ಕೃಷಿ ಜಮೀನಿದೆ. ಕೃಷಿ ಜಮೀನಿನ ಅಂಚಿನಲ್ಲೇ ನಿರ್ಮಿಸಿರುವ ಮುಖ್ಯ ಕಟ್ಟಡಕ್ಕೆ ಕಾಂಪೌಂಡ್ ಇಲ್ಲ. ಜಮೀನಿನಲ್ಲಿ ರುವುದರಿಂದ ಹಾವುಗಳ ಕಾಟವೂ ಉಂಟು. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಜಾರಿ ಬೀಳುವುದು ಸಾಮಾನ್ಯ. ಸಂಜೆ- ರಾತ್ರಿ ವೇಳೆ ಭದ್ರತೆ ಕೊರತೆಯೂ ಇದೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ತಿರು ಮಲೇಶ್, ಚಂದ್ರಪ್ಪ, ಶಿವಕುಮಾರ್.

ಮುಖ್ಯಕಟ್ಟಡದಲ್ಲಿರುವ ನಾಲ್ಕು ಸ್ನಾನದ ಮನೆಗಳ ಪೈಕಿ ಎರಡಕ್ಕೆ ಬಾಗಿಲೇ ಇಲ್ಲ. ಸ್ನಾನಕ್ಕೆಂದು ಮೀಸಲಿರಿಸಿದ್ದ ಎರಡು ಪಾತ್ರೆಗಳ ಪೈಕಿ ಒಂದು ತೂತು ಬಿದ್ದು ಕೆಲವು ತಿಂಗಳಾದರೂ ರಿಪೇರಿಯಾಗಿಲ್ಲ. ಇದು ಊಟಕ್ಕೂ ಅನ್ವಯಿಸುತ್ತದೆ. ಊಟದ ಕೊಠಡಿಯೂ ಚಿಕ್ಕದಿರುವುದರಿಂದ ಎಲ್ಲರೂ ಒಟ್ಟಿಗೇ ಊಟ ಮಾಡಲು ಸಾಧ್ಯವಿಲ್ಲ.

ಸುಮಾರು 15 ಮಂದಿಗೆ ಮಾತ್ರ ಅಲ್ಲಿ ಸ್ಥಳಾವಕಾಶ. ಹೀಗಾಗಿ ಕೊಠಡಿಗಳ ಮುಂದಿನ ಪಡಸಾಲೆಯ ನೆಲದಲ್ಲೇ ಕುಳಿತು ಊಟ ಮಾಡುತ್ತೇವೆ. ಮಳೆ ಬಂತೆಂದರೆ ಇದು ಸಾಧ್ಯ ವಾಗುವುದಿಲ್ಲ. ತಂಡಗಳಾಗಿ ವಿಂಗಡಣೆಗೊಂಡು ಊಟ ಮಾಡಬೇಕಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ಗಂಗಾಧರ್.

ಕೊಠಡಿಗಳಲ್ಲೇ ಒಂದನ್ನು ರೀಡಿಂಗ್ ರೂಂ ಮಾಡಲಾಗಿದೆ. ಆದರೆ ಅಲ್ಲಿ ಟೇಬಲ್, ಕುರ್ಚಿಗಳಿಲ್ಲ. ಇದನ್ನೇ ತಮ್ಮ ಸೈಕಲ್, ಬೈಕ್‌ಗಳನ್ನು ನಿಲ್ಲಿಸಲು ವಿದ್ಯಾರ್ಥಿಗಳು ಬಳಸುತ್ತಾರೆ. ಇರುವ ಕೇವಲ ಎರಡು ಬಾಯ್ಲರ್‌ಗಳನ್ನೇ ಬಿಸಿ ನೀರಿಗೆ ಬಳಸುವುದೂ ಕಷ್ಟ ಎನ್ನುತ್ತಾರೆ ವಿದ್ಯಾರ್ಥಿಗಳು.

ಮುಖ್ಯ ಕಟ್ಟಡದಲ್ಲಿ 18, ಉಳಿದ ಎರಡು ಕಟ್ಟಡಗಳ ಪೈಕಿ ಒಂದರಲ್ಲಿ 4, ಮತ್ತೊಂದರಲ್ಲಿ 9 ಕೊಠಡಿಗಳಿವೆ. ಪ್ರತಿ ಕೊಠಡಿಗೆ ಮೂವರು ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಕೊಠಡಿಗಳ ಸಮಸ್ಯೆ ಇಲ್ಲ. ಆದರೆ ಊಟದ್ದೇ ಸಮಸ್ಯೆ. ಏಕೆಂದರೆ ವಿಶ್ವವಿದ್ಯಾಲಯ ಪ್ರತಿ ವಿದ್ಯಾರ್ಥಿಗೆ ನೀಡುವುದು ಕೇವಲ ರೂ.  35 ಮಾತ್ರ. ಅಷ್ಟರಲ್ಲಿ ನಿಭಾಯಿಸುವುದು ಕಷ್ಟಕರ ಎಂಬುದು ವಾರ್ಡನ್ ಡಾ.ಡಿ.ಡಾಮಿನಿಕ್ ಅವರ ನುಡಿ.

ಅವರ ಪ್ರಕಾರ, ವಾರ್ಡನ್ ಆಗಿ ಅಧಿಕಾರ ಸ್ವೀಕರಿಸಿ ಬರುವ ಸಮಯದಲ್ಲಿದ್ದ ಸಮಸ್ಯೆಗಳ ನಡುವೆಯೇ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದು ಇದೀಗ ಸೌಹಾರ್ದ ಮತ್ತು ಶೈಕ್ಷಣಿಕ ವಾತಾವರಣ ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸೇರಿದಂತೆ ಹಲವು ತರಬೇತಿಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕಂಪ್ಯೂಟರ್ ತರಬೇತಿ, ಇಂಟರ್‌ನೆಟ್ ಸೌಲಭ್ಯ, ಲೈಬ್ರರಿ ಬೇಕಾಗಿದೆ ಎನ್ನುತ್ತಾರೆ ಅವರು.

ರೂ.52,399 ಬಾಡಿಗೆ: ವ್ಯವಸ್ಥಾಪಕ ಆಂಜಿನಪ್ಪ ಹೇಳುವಂತೆ, ಹಾಸ್ಟೆಲ್‌ನ ಮೂರು ಕಟ್ಟಡಗಳಿಗೆ ಸೇರಿ ಪಾವತಿಸಲಾಗುತ್ತಿರುವ ಬಾಡಿಗೆ ರೂ. 52, 399 (ಮುಖ್ಯ ಕಟ್ಟಡಕ್ಕೆ ರೂ. 38,899, ಉಳಿದ ಎರಡು ಕಟ್ಟಡಗಳಿಗೆ  ರೂ. 13, 500). ನೀಡಲಾಗುತ್ತಿರುವ ಮೂಲ ಸೌಕರ್ಯಗಳಿಗೆ ಹೋಲಿಸಿದರೆ ಈ ಬಾಡಿಗೆ ದುಬಾರಿ ಎಂಬುದು ವಿದ್ಯಾರ್ಥಿಗಳ ಅಭಿಮತ. 

ಅಡುಗೆ ಅನಿಲ ಸಿಲಿಂಡರ್ ವ್ಯವಸ್ಥೆಗೆಂದು ವಿವಿ ನೀಡಿದ್ದ ಹಣ ಸಮರ್ಪಕವಾಗಿ ಬಳಕೆಯಾಗ ದಿರುವುದರಿಂದ ಸೌದೆ ಒಲೆ ಬಳಸು ವಂತಾಗಿದೆ. ಈ ಸಮಸ್ಯೆ ಬಗೆಹರಿಸುವಂತೆಯೂ ವಿವಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುರ್ಚಿ, ಮೇಜುಗಳು, 18 ಮಂಚ, 25 ಹಾಸಿಗೆಗಳನ್ನು ಪೂರೈಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಇದೆಲ್ಲದ್ದರ ಜೊತೆಗೆ ನಿಲಯವನ್ನು ಕೇಂದ್ರದ ಜೊತೆಗೇ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT