ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ರಾರ್ಜಿತ ಶ್ರೀಮಂತಿಕೆ; ಲಕ್ಷಾಂತರ ಸ್ವಂತಿಕೆ

Last Updated 18 ಏಪ್ರಿಲ್ 2013, 9:56 IST
ಅಕ್ಷರ ಗಾತ್ರ

ತಿಪಟೂರು: ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದವರಲ್ಲಿ ತಮ್ಮ ಆದಾಯ ಘೋಷಿಸಿಕೊಂಡಿರುವಂತೆ ಹಾಲಿ ಶಾಸಕ ಬಿ.ಸಿ.ನಾಗೇಶ್ ಉಳಿದವರಿಗಿಂತ ಹೆಚ್ಚು ಶ್ರೀಮಂತರು.

ಜೆಡಿಎಸ್ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಲು ಬಯಸಿರುವ ಎಂ.ಮೈಲಾರಿ ಎರಡನೇ ಸ್ಥಾನದಲ್ಲಿದ್ದಾರೆ.

ಬಿ.ಸಿ.ನಾಗೇಶ್ (ಬಿಜೆಪಿ)
ಹಿಂದಿನ ತೆರಿಗೆ ವಿವರ ಸಲ್ಲಿಸಿದ ಪ್ರಕಾರ ಒಟ್ಟು ಆದಾಯ 18.42 ಲಕ್ಷ, ಪತ್ನಿ ಆದಾಯ ರೂ.2.10 ಲಕ್ಷ. ಕೈಯಲ್ಲಿರುವ ನಗದು 98 ಸಾವಿರ, ಪತ್ನಿ ಬಳಿ 18 ಸಾವಿರ ನಗದಿದೆ.

15.50 ಲಕ್ಷ ಎಲ್‌ಐಸಿ, ಪತ್ನಿ- 5 ಲಕ್ಷ, ಮಗ- 3 ಲಕ್ಷ, ಮಗಳ ಹೆಸರಲ್ಲಿ 2 ಲಕ್ಷದ ಪಾಲಿಸಿಗಳಿವೆ. ಒಂದು ಟ್ರ್ಯಾಕ್ಟರ್, ಟಾಟಾ ಸುಮೋ, ಟಿವಿಎಸ್ ಸ್ಕೂಟಿ, 2 ಕೆ.ಜಿ ಬೆಳ್ಳಿ, 200 ಗ್ರಾಂ ಚಿನ್ನ, ಮಗಳು-60 ಗ್ರಾಂ ಚಿನ್ನ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಬಿಡಿಎಯಿಂದ ಮಂಜೂರಾಗಿ ತಂದೆಯಿಂದ ಬಂದ (ಸೋದರ ಜಂಟಿ) ನಿವೇಶನ, ಕಸಬಾ ಸರ್ವೆ ನಂ. 108/3ರಲ್ಲಿ 1.19 ಎಕರೆ ಜಮೀನಿದೆ.

ಕೆ.ಆರ್.ಬಡಾವಣೆಯಲ್ಲಿ 58/65, ಮತ್ತೊಂದು 112/70, ವಸತಿ ಕಟ್ಟಡ, ಆರ್‌ಎಂಸಿ ಯಾರ್ಡ್‌ನಲ್ಲಿ 100/72 (ಪಿತ್ರಾರ್ಜಿತ), ಬಿ.ಎಚ್.ರಸ್ತೆ ಪಕ್ಕ 41/150 ವಾಣಿಜ್ಯ ಸಂಕೀರ್ಣ, 152/110, ಮಾದಿಹಳ್ಳಿ ಬಳಿ ಸೈಟ್, ಬೆಂಗಳೂರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸೈಟ್, ಹಾಲ್ಕುರಿಕೆ ಬಳಿ 54 ಎಕರೆ ಕೃಷಿ ಭೂಮಿ ಒಳಗೊಂಡು ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಸೇರಿ ಸ್ಥಿರಾಸ್ತಿಯ ಒಟ್ಟು ಮೊತ್ತ ರೂ. 3.37 ಕೋಟಿ. ಚರಾಸ್ತಿ ಮೌಲ್ಯ 2 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಯಾವುದೇ ಪೊಲೀಸ್ ಪ್ರಕರಣಗಳಿಲ್ಲ. ವಿದ್ಯಾಭ್ಯಾಸ-ಬಿಇ.

ಕೆ.ಷಡಕ್ಷರಿ (ಕಾಂಗ್ರೆಸ್)
ಹಿಂದಿನ ವರ್ಷದ ತೆರಿಗೆ ವಿವರ ಸಂದರ್ಭದಲ್ಲಿ ತೋರಿಸಿದ ಆದಾಯ 7.94 ಲಕ್ಷ, ಕೈಯಲ್ಲಿರುವ ನಗದು 22 ಲಕ್ಷ. 15 ಕೆ.ಜಿ ಬೆಳ್ಳಿ, ಪತ್ನಿ- 1050 ಗ್ರಾಂ ಚಿನ್ನ, ಇನೋವಾ ಕಾರು, ಪತ್ನಿ ಹೆಸರಲ್ಲಿ ಕೆ.ಆರ್‌ಬಡಾವಣೆಯಲ್ಲಿ ಮನೆ (87/60), ಖಾತೆ ನಂ. 110ರಲ್ಲಿ 45/50 ಸೈಟ್, ಪತ್ನಿ ಹೆಸರಲ್ಲಿ ಚಿಕ್ಕಣ್ಣ ಗಾರ್ಡ್‌ನ್‌ನಲ್ಲಿ 40/30 ಸೈಟ್, ಆರ್‌ಎಂಸಿ ಯಾರ್ಡ್ ಮಳಿಗೆ, 31 ಗುಂಟೆ ಪಿತ್ರಾರ್ಜಿತ ಕೃಷಿ ಭೂಮಿ, ವೈಯಕ್ತಿಕ ಚರಾಸ್ತಿಯ ಒಟ್ಟು ಮೌಲ್ಯ 51.15 ಲಕ್ಷ, ಪತ್ನಿ- 29.40, ಸ್ಥಿರಾಸ್ತಿ ಮೌಲ್ಯ 65 ಲಕ್ಷ. ಆದರೆ ಕೊಬ್ಬರಿ ವ್ಯವಹಾರಕ್ಕೆಂದು ಡಿಸಿಸಿ ಬ್ಯಾಂಕ್‌ನಿಂದ 1.32 ಕೋಟಿ ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಯಾವುದೇ ಪೊಲೀಸ್ ಪ್ರಕರಣಗಳಿಲ್ಲ. ವಿದ್ಯಾಭ್ಯಾಸ-ಬಿ.ಕಾಂ.

ಎಂ.ಲಿಂಗರಾಜು (ಜೆಡಿಎಸ್)
ಹಿಂದಿನ ವರ್ಷದ ತೆರಿಗೆ ವಿವರ ಸಂದರ್ಭ ತೋರಿಸಿರುವ ಆದಾಯ 6.88 ಲಕ್ಷ, ಕೈಯಲ್ಲಿರುವ ನಗದು 10 ಸಾವಿರ, ಸ್ಕಾರ್ಪಿಯೋ, ಫಿಯೆಸ್ಟಾ ವಾಹನ, 100 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಪತ್ನಿ ಹೆಸರಲ್ಲಿ ಸ್ಕೂಟಿ, 100 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ, ಬೊಮ್ಮೇನಹಳ್ಳಿ, ಮಡೇನೂರು ಬಳಿ ಒಟ್ಟು 3.5 ಎಕರೆ ಕೃಷಿ ಭೂಮಿ, ಪತ್ನಿ ಹೆಸರಲ್ಲಿ ಮಾದಿಹಳ್ಳಿಯಲ್ಲಿ 3.1 ಎಕರೆ ಭೂಮಿಯಿದೆ.

ಶಂಕರಪ್ಪ ಲೇಔಟ್‌ನಲ್ಲಿ ವಾಸದ ಮನೆ, ವೈಯಕ್ತಿಕ ಸ್ಥಿರಾಸ್ತಿ ಒಟ್ಟು ಮೌಲ್ಯ 17 ಲಕ್ಷ, ಚರಾಸ್ತಿ ಮೌಲ್ಯ 10.63 ಲಕ್ಷ. ಬ್ಯಾಂಕ್ ಸಾಲ 11 ಲಕ್ಷ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಲೋಕೇಶ್ವರ (ಕೆಜೆಪಿ)
ಹಿಂದಿನ ತೆರಿಗೆ ವಿವರ ಪಟ್ಟಿಯಲ್ಲಿ ತೋರಿಸಲಾದ ಆದಾಯ ರೂ. 3.59 ಲಕ್ಷ. ಪತ್ನಿ ಹೆಸರಲ್ಲಿ 4.56 ಲಕ್ಷ, ಅಣ್ಣ-6 ಲಕ್ಷ, 1ನೇ ತಮ್ಮ-5 ಲಕ್ಷ, 2ನೇ ತಮ್ಮ 4.80 ಲಕ್ಷ.

ಕೈಯಲ್ಲಿರುವ ನಗದು ಸ್ವಂತ 80 ಸಾವಿರ, ಎಲ್‌ಐಸಿ- 16 ಲಕ್ಷ ಮೌಲ್ಯ, 600 ಗ್ರಾಂ ಚಿನ್ನ, 1500 ಗ್ರಾಂ ಬೆಳ್ಳಿ ಸೇರಿ ಚರಾಸ್ತಿ ಒಟ್ಟು ಮೌಲ್ಯ 51.50 ಲಕ್ಷ. ಪತ್ನಿಗೆ ಸೇರಿದ 100 ಗ್ರಾಂ ಚಿನ್ನ ಸೇರಿ ಚರಾಸ್ತಿ ಮೌಲ್ಯ 11.38 ಲಕ್ಷ, ಅಣ್ಣ- 60.78 ಲಕ್ಷ, 1ನೇ ತಮ್ಮ 26 ಲಕ್ಷ, 2ನೇ ತಮ್ಮ 34 ಲಕ್ಷ, ತಿಪಟೂರು ತಾಲ್ಲೂಕು ರಜತಾದ್ರಿಪುರ ಬಳಿ ಪಿತ್ರಾರ್ಜಿತ ಒಟ್ಟು ಕುಟುಂಬದ ಕೃಷಿ ಭೂಮಿ ಮೌಲ್ಯ 50 ಲಕ್ಷ. ಅದೇ ಸ್ಥಳದ ಕೃಷಿಯೇತರ ಜಂಟಿ ಭೂಮಿ ಮೌಲ್ಯ 10 ಲಕ್ಷ, ತಿಪಟೂರು ನಿವೇಶನ, ಜಂಟಿ ಆಸ್ತಿ ಸೇರಿದಂತೆ ಒಟ್ಟು ರೂ. 1.10 ಕೋಟಿ ಮೌಲ್ಯದ ಕೃಷಿಯೇತರ ಭೂಮಿ. ಬಿಎ, ಎಂಪಿಇಡಿ ವಿದ್ಯಾರ್ಹತೆ, ಯಾವುದೇ ಪೊಲೀಸ್ ಪ್ರಕರಣಗಳಿಲ್ಲ.
ಎಂ.ಮೈಲಾರಿ (ಪಕ್ಷೇತರ)

ಹಿಂದಿನ ವರ್ಷದ ಆದಾಯ ತೆರಿಗೆ ವಿವರ ಪಟ್ಟಿಯಲ್ಲಿ ತೋರಿಸಲಾದ ಒಟ್ಟು ಆದಾಯ 4 ಲಕ್ಷ, ಪತ್ನಿ ಹೆಸರಲ್ಲಿ 8 ಲಕ್ಷ, ಕೈಯಲ್ಲಿರುವ ನಗದು 50 ಸಾವಿರ, ಪತ್ನಿ ಖಾತೆಯಲ್ಲಿ 1.5 ಲಕ್ಷ, 16 ಲಕ್ಷ ಬೆಲೆ ಬಾಳುವ ಫಾರ್ಚುನರ್ ವಾಹನ, 100 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ಪತ್ನಿ-150 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ಸೇರಿ ಒಟ್ಟು ಮೌಲ್ಯ 23 ಲಕ್ಷ, ಪತ್ನಿ-6.40 ಲಕ್ಷ, ಗೊಲ್ಲಹಳ್ಳಿಯಲ್ಲಿ 4.27 ಗುಂಟೆ, ಬೆಟ್ಟಹಳ್ಳಿ 1.12 ಗುಂಟೆ, ಲಕ್ಷ್ಮೀಪುರ 1.23 ಗುಂಟೆ, ದಾಸಾಪುರ 1.12, ಸಂಪಿಗೆಹಳ್ಳಿ 1.12 ಗುಂಟೆ ಕೃಷಿ ಭೂಮಿಯಿದೆ.

ಬೆಂಗಳೂರು ಓಎಂಬಿಆರ್ ಲೇಔಟ್ 211 ಗುಂಟೆ (ಕೃಷಿಯೇತರ ಭೂಮಿ) ಜಂಟಿ ಒಡೆತನ ಸೇರಿ ಸ್ವಯಾರ್ಜಿತ ಸ್ವತ್ತುಗಳ ಒಟ್ಟು ಮೌಲ್ಯ ರೂ. 1.80 ಕೋಟಿ, ವಿವಿಧ ಬ್ಯಾಂಕ್ ಸೇರಿ ಒಟ್ಟು 1.12 ಕೋಟಿ ಸಾಲವಿದೆ ಎಂದು ಘೋಷಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ ಎಸ್‌ಎಸ್‌ಎಲ್‌ಸಿ, ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT