ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಬಿ.ರಸ್ತೆ ಅಭಿವೃದ್ಧಿಗೆ ₨ 11 ಕೋಟಿ ಮಂಜೂರು ಅಂತೂ ಇಂತೂ ರಸ್ತೆ ಅಭಿವೃದ್ಧಿಗೆ ಕಾಲಬಂತು

ಪಿ.ಬಿ.ರಸ್ತೆ ಅಭಿವೃದ್ಧಿಗೆ ₨ 11 ಕೋಟಿ ಮಂಜೂರು
Last Updated 5 ಡಿಸೆಂಬರ್ 2013, 6:13 IST
ಅಕ್ಷರ ಗಾತ್ರ

ದಾವಣಗೆರೆ: ಸದಾ ದೂಳು, ಸಂಚಾರ ದಟ್ಟಣೆ, ಗುಂಡಿಗಳ ಹಾವಳಿ... ಇದು ನಗರದ ಪಿ.ಬಿ.ರಸ್ತೆಯಲ್ಲಿ ಸಂಚರಿಸುವ ವರಿಗೆ ದಿನನಿತ್ಯ
ಕಾಡುವ ಸಮಸ್ಯೆಗಳು. ಅದಕ್ಕೆ ಸ್ವಲ್ಪಮಟ್ಟಿಗೆ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.

ಅದಕ್ಕೆ ಕಾರಣ ನಗರದ ಪ್ರಮುಖ ರಸ್ತೆಯಾದ ಪುಣೆ– ಬೆಂಗಳೂರು ರಸ್ತೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಿರುವುದು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಬ್ಬು ಬೆಳೆಗಾರರ ಸಭೆಯ ಬಳಿಕ ಜಿಲ್ಲಾಧಿಕಾರಿ ಎಸ್‌.ಟಿ. ಅಂಜನ್‌ಕುಮಾರ್‌ ಸುದ್ದಿಗಾರರ ಜತೆಗೆ ಮಾತನಾಡಿ, ನಗರದ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದಿಂದ ಬಿಎಸ್‌ಎನ್‌ಎಲ್‌ ಕಚೇರಿಯ ತನಕ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುವುದು. ಲೋಕೋಪ ಯೋಗಿ ಇಲಾಖೆಯಿಂದ ₨ 11 ಕೋಟಿ ಹಣ ಕೂಡ ಮಂಜೂರಾಗಿದೆ. ಸುಮಾರು 30 ಅಡಿ ಅಗಲದಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಮಾಹಿತಿ ನೀಡಿದರು. 

ನೋಟಿಸ್‌: ಎಪಿಎಂಸಿಯ ವರ್ತಕರು ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ನೀಡಿಯೇ ರೈತರಿಂದ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಮಾಡಬೇಕು. ಖರೀದಿಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವರ್ತಕರಿಗೆ ನೋಟಿಸ್‌ ಕೂಡ ನೀಡಲಾಗಿದೆ ಎಂದು ಅವರು, ಒಟ್ಟು 8 ಖರೀದಿ ಕೇಂದ್ರ ತೆರೆಯಲಾಗಿದೆ. ಮೆಕ್ಕೆಜೋಳ ಹಾಗೂ ಭತ್ತಕ್ಕೆ ಪ್ರತ್ಯೇಕವಾಗಿ ತೂಕದ ಯಂತ್ರ ಅಳವಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT