ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸ್ತಾ ಮಹಿಮೆ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಫೆ.26 ವಿಶ್ವ ಪಿಸ್ತಾಶಿಯೊ ದಿನ. ಕ್ಯಾಲಿಫೋರ್ನಿಯಾ ಪಿಸ್ತಾಗಳಲ್ಲಿ ಕೇವಲ 3-4 ಕ್ಯಾಲೊರಿ ಇರುತ್ತದೆ. ಜತೆಗೆ 30ಕ್ಕೂ ಹೆಚ್ಚು ಜೀವಸತ್ವಗಳು, ಲವಣಾಂಶ ಮತ್ತು  ಫೈಟೊನ್ಯೂಟ್ರಿಯಂಟ್‌ಗಳು ಅದನ್ನು ಅದ್ಭುತ ಕಾಯಿಯಾಗಿಸಿವೆ!

 ಮೂಲತಃ ಮಧ್ಯಪೂರ್ವ ಭಾಗದ ಪಿಸ್ತಾಗಳನ್ನು ಕ್ರಿ.ಪೂ. 7000ರಲ್ಲೇ ಸೇವಿಸುತ್ತಿದ್ದ ದಾಖಲೆಗಳಿವೆ. ಆದರೆ ಆಗ ಅವು ಅರಸೊತ್ತಿಗೆ ಕುರುಹುಗಳು. 1930ರಲ್ಲಿ ಕ್ಯಾಲಿಫೋರ್ನಿಯಾಗೆ ಕಾಲಿಟ್ಟಂದಿನಿಂದ ಇಂದಿನ ಸುಧಾರಿತ ‘ಕುರ್ಮನ್’ ವಿಧ ಬೆಳೆದು ಬಂದಿದೆ. ಈಗ ಅಲ್ಲಿ ವರ್ಷಕ್ಕೆ 4000 ಲಕ್ಷ ಪೌಂಡುಗಳಷ್ಟು ಪಿಸ್ತಾ ಬೆಳೆಯುತ್ತಾರೆ.

*ಅತ್ಯಂತ ಕಡಿಮೆ ಕ್ಯಾಲೊರಿಯ ಕಾಯಿಗಳಲ್ಲೊಂದಾದ ಪಿಸ್ತಾದಲ್ಲಿ ಅತ್ಯಂತ ಕಡಿಮೆ ಕೊಬ್ಬು ಇದೆ. ಅಳತೆಯಲ್ಲೂ ಹೆಚ್ಚು ಸಂಖ್ಯೆಯಲ್ಲಿ ಸಿಗುತ್ತವೆ. ಅಂದರೆ ಒಂದು ಔನ್ಸಿಗೆ 23 ಬಾದಾಮಿಗಳು, 14 ವಾಲ್‌ನಟ್‌ನ ಹಳಕುಗಳು, 18 ಗೋಡಂಬಿಗಳು ಬಂದರೆ ಪಿಸ್ತಾಗಳು 49 ಬರುತ್ತವೆ! ಒಂದು ಮುಷ್ಟಿ ಅಂದರೆ 30 ಪಿಸ್ತಾ 100 ಕ್ಯಾಲೊರಿಯ ಸಂಜೆಯ ತಿಂಡಿ!

*ಸಿಪ್ಪೆಯಲ್ಲಿ ಅಡಗಿ ಕೂತ ಕಾರಣ ಅವುಗಳನ್ನು ತಿನ್ನಲು ಬೇಕಾಗುವ ಸಮಯವೂ ಹೆಚ್ಚು. ಹಾಗಾಗಿ ಅವುಗಳನ್ನು ಕಡಿಮೆ ತಿನ್ನಬಹುದು ಎಂಬುದೂ ಒಂದು ತರ್ಕ. ಈ ಕಾರಣಕ್ಕೆ ಒಟ್ಟಾರೆ ಶೇ 41ರಷ್ಟು ಕ್ಯಾಲೊರಿ ಸೇವನೆ ಕಡಿಮೆಯಾಗುತ್ತದಂತೆ!

*ಸಮೃದ್ಧ ಪೌಷ್ಟಿಕ ಅಂಶ: ಪಿಸ್ತಾಗಳು ವಿಟಮಿನ್ ಬಿ6, ತಾಮ್ರ ಮತ್ತು ಮ್ಯಾಂಗನೀಸ್‌ನ ಸಮೃದ್ಧ ಮೂಲ. ಪ್ರೊಟೀನ್, ನಾರಿನಂಶ, ಥಿಯಾಮಿನ್ ಮತ್ತು ಫಾಸ್ಫರಸ್‌ಗಳ ಉತ್ತಮ ಮೂಲ.

*ಇತ್ತೀಚೆಗೆ ಪ್ರಕಟವಾದ ಇಟಾಲಿಯನ್ ಅಧ್ಯಯನವೊಂದರ ಪ್ರಕಾರ ಚಹಾ, ಹಣ್ಣು, ತರಕಾರಿ, ರೆಡ್ ವೈನ್ ಮತ್ತು ಸಾಯ್ (ಸೋಯಾ) ಆಹಾರಗಳಲ್ಲಿ ಸಿಗುವ ವಿವಿಧ ಬಗೆಯ ಲಾಭದಾಯಕ ಆ್ಯಂಟಿ ಆಕ್ಸಿಡೆಂಟ್‌ಗಳು ಹಾಗೂ ಫೈಟೊನ್ಯೂಟ್ರಿಯೆಂಟ್‌ಗಳು ಪಿಸ್ತಾದಲ್ಲಿವೆ. ಆದ್ದರಿಂದ ಸಂಶೋಧಕರು, ಪಿಸ್ತಾಗಳು ಸಸ್ಯಾಧಾರಿತ ಆಹಾರವಸ್ತುಗಳಲ್ಲಿ ಅತ್ಯುತ್ತಮ, ಆ್ಯಂಟಿ ಆಕ್ಸಿಡೆಂಟ್‌ಗಳ ಮೂಲ ಪಿಸ್ತಾ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.  
ಹೆಚ್ಚಿನ ಮಾಹಿತಿಗೆ www.pistachiohealth.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT