ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಣ್ಯದಲ್ಲಿ ಮೆಗಾ ಮೇಳ

Last Updated 13 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ‘ಪಿಐಎ ಮೆಗಾ ಶೋ 2011’ ಗುರುವಾರದಿಂದ ಶನಿವಾರದ ವರೆಗೆ ನಡೆಯಲಿದೆ.

ಇಲ್ಲಿನ ಆರು ಸಾವಿರ ಕೈಗಾರಿಕೋದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರುಕಟ್ಟೆ ಕಲ್ಪಿಸುವುದು ಇದರ ಉದ್ದೇಶ.ದಕ್ಷಿಣ ಏಷ್ಯದ ಅತ್ಯಂತ ಬೃಹತ್ ಕೈಗಾರಿಕಾ ವಲಯವೆಂದೇ ಹೆಸರಾದ, ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯದ 40 ಚ.ಕಿ.ಮೀ ಪ್ರದೇಶದಲ್ಲಿ ಸುಮಾರು 5000 ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿವೆ. ಮೆಶಿನ್ ಟೂಲ್ಸ್, ಆಟೊಮೊಬೈಲ್, ವಿಮಾನ ಉಪಕರಣಗಳು, ಸಿದ್ಧ ಉಡುಪುಗಳು ಹಾಗೂ ಪ್ಯಾಕೇಜಿಂಗ್ ಕೈಗಾರಿಕೆಗಳ ಚಟುವಟಿಕೆಗಳು ನಡೆಯುತ್ತಿವೆ.

ಗುರುವಾರ ಬೆಳಿಗ್ಗೆ ಉದ್ಘಾಟನೆ: ಸಚಿವ ಆರ್. ಅಶೋಕ. ಅತಿಥಿಗಳು: ಸಿ.ಎಚ್. ವಿಜಯಶಂಕರ್, ಎಂ. ಶ್ರೀನಿವಾಸ, ಎಸ್. ಮುನಿರಾಜು ಹಾಗೂ ಆಶಾ ಸುರೇಶ್. ಸ್ಥಳ: ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ನಿವೇಶನ, ಅಯ್ಯಪ್ಪ ದೇವಸ್ಥಾನದ ಹಿಂದೆ, 1ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ. ಬೆಳಿಗ್ಗೆ 11.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT