ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಪಿಯೊಂದಿಗೆ ಪುಟಾಣಿಯ ನಸುನಗು

Last Updated 5 ಜುಲೈ 2012, 9:20 IST
ಅಕ್ಷರ ಗಾತ್ರ

ಚಾಮರಾಜನಗರ: ಪಕ್ಕದಲ್ಲಿಯೇ ಮಗು ಅಳುತ್ತಿರುವ ಧ್ವನಿ. ತಿರುಗಿ ನೋಡಿದರೆ ಬಾಯಲ್ಲಿರುವ ಪೀಪಿಯೊಂದಿಗೆ ಪುಟಾಣಿಯ ನಸುನಗು. ಬಳೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ಹೆಂಗಳೆಯರು. ಕೈಮೇಲೆ ಹಚ್ಚೆ ಹಾಕಿಸಿಕೊಳ್ಳಲು ಮುಗಿಬಿದ್ದ ಯುವಕರು. ಗೃಹಬಳಕೆಯ ಪ್ಲಾಸ್ಟಿಕ್ ವಸ್ತುಗಳ ಭರ್ಜರಿ ಮಾರಾಟದಲ್ಲಿ ನಿರತರಾಗಿದ್ದ ವ್ಯಾಪಾರಿಗಳು. ಬಿಸಿಲು ನೆತ್ತಿ ಸುಡುತ್ತಿದ್ದಂತೆ ಐಸ್‌ಕ್ರೀಮ್ ಮೆಲ್ಲುತ್ತಾ ಬಾಯಿ ಚಪ್ಪರಿಸಿದ ಭಕ್ತರು.

-ಇವು ಜಾತ್ರೆಯಲ್ಲಿ ಕಂಡು ಬಂದ ದೃಶ್ಯಗಳು. ಬೆಳಿಗ್ಗೆ ರಥೋತ್ಸವ ಆರಂಭಗೊಂಡಾಗ ಭಕ್ತರ ಸಂಖ್ಯೆ ಕಡಿಮೆಯಿತ್ತು. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಯಿತು. ವಿವಿಧೆಡೆಯಿಂದ ಬಂದಿದ್ದ ನೆಂಟರು, ಭಕ್ತರು ಭಕ್ತಿಯ ಪರಾಕಾಷ್ಠೆ ಮರೆದರು.ಈ ಬಾರಿ ಆಟಿಕೆ ಅಂಗಡಿಗಳ ಸಂಖ್ಯೆ ಹೆಚ್ಚಿತ್ತು. ತರೇಹವಾರಿ ಆಟಿಕೆಗಳಿಗೆ ಮಕ್ಕಳು ಮನಸೋತರು.

ಮತ್ತೊಂದೆಡೆ ಪೋಷಕರ ಜೇಬು ಖಾಲಿಯಾಗುತ್ತಿತ್ತು. ಆಟದ ಸಾಮಾನು ಗಳ ಮಾರಾಟದ ಅಂಗಡಿಯವರು ಭರ್ಜರಿ ವ್ಯಾಪಾರ ಮಾಡಿದರು. ದೇವಸ್ಥಾನದ ಪಕ್ಕದಲ್ಲಿ ತಿಂಡಿತಿನಿಸು ಅಂಗಡಿಗಳಿದ್ದವು. ಸಂಜೆ ವೇಳೆಗೆ ಈ ಅಂಗಡಿಗಳಲ್ಲಿ ಉತ್ತಮ ವ್ಯಾಪಾರ ನಡೆಯಿತು. ಪ್ರತಿನಿತ್ಯವೂ ಭುವನೇಶ್ವರಿ ವೃತ್ತದ ಬಳಿಯಲ್ಲಿ ಜನಜಂಗುಳಿ, ಸಂಚಾರ ದಟ್ಟಣೆ ಇರುತ್ತದೆ. ಇಂದು ಕೂಡ ಸಾಕಷ್ಟು ಜನರು ನೆರೆದಿದ್ದರು. ಮುಂಜಾಗ್ರತೆಯಾಗಿ ಈ ವೃತ್ತದಿಂದ ದೇವಸ್ಥಾನಕ್ಕೆ ಯಾವುದೇ ವಾಹನ ತೆರಳದಂತೆ ಪೊಲೀಸರು ನಿರ್ಬಂಧಿಸಿದ್ದರು. ಸೂಚನೆಯ ನಡುವೆಯೂ ಬೈಕ್‌ಗಳನ್ನು ಓಡಿಸಿ ತಂದ ಕೆಲವು ಸವಾರರು ಪೇಚಾಟಕ್ಕೆ ಸಿಲುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT