ಈ ಬಗ್ಗೆ ಮಾತನಾಡಿದ ಕಾರಾ 4 ಕಿಡ್ಸ್ ಅಧ್ಯಕ್ಷ ರುಸ್ತುಮ್‌ಜಿ ಅವರು `ಸಸಿಗಳಿಗೆ ಮಕ್ಕಳ ಹೆಸರು ಮತ್ತು ಮಾಲೀಕತ್ವ ನೀಡುವ ಹಸಿರು ಆಂದೋಲನದ ಮೂಲಕ ಅವರಿಗೆ ಪರಿಸರದ ಮೌಲ್ಯ ತಿಳಿಸಲು ಇದೊಂದು ಉತ್ತಮ ವೇದಿಕೆ~ ಎಂದರು. ಈ ಆಂದೋಲನದ ಭಾಗವಾಗಿ 150ಕ್ಕೂ ಹೆಚ್ಚು ಮಕ್ಕಳು ತಲಾ ಎರಡು ಸಸಿ ದತ್ತು ಪಡೆದರು. ಅದನ್ನು ಪೋಷಿಸುವ ಹೊಣೆ ಹೊತ್ತುಕೊಂಡರು. ನಿತ್ಯ ಅದನ್ನು ಗಮನಿಸುವ, ಸ್ಪರ್ಶಿಸಿಸುವ, ಹೂ ಬಿಟ್ಟಾಗಿ ಮೂಸಿ ಪರಿಮಳದ ಖುಷಿ ಪಡುವ, ನೀರುಣಿಸುವ ಪ್ರತಿಜ್ಞೆ ಮಾಡಿದರು.