ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿದೆದ್ದ ಷೇರುಪೇಟೆ

ಸೂಚ್ಯಂಕ 685 ಅಂಶ ಏರಿಕೆ; ರೂಪಾಯಿ ಮೌಲ್ಯ ವೃದ್ಧಿ
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ದೇಶದ ಷೇರು­ಪೇಟೆಯ ಪಾಲಿಗೆ ಗುರುವಾರ ಕಳೆದ 3 ವರ್ಷದಲ್ಲೇ ದಾಖಲೆ ಪ್ರಮಾಣದ ಸಂವೇದಿ ಸೂಚ್ಯಂಕ  ಕಾಣುವ ದಿನವಾಗಿತ್ತು. ಹೂಡಿಕೆದಾ­ರ ರಿಗೂ ಒಂದೇ ದಿನದಲ್ಲಿ ತಮ್ಮ ಷೇರು ಸಂಪತ್ತು ರೂ.1.84 ಲಕ್ಷ ಕೋಟಿ ಹೆಚ್ಚಲು ಕಾರಣವಾದ ಶುಭ ದಿನವೂ ಆಗಿತ್ತು.

ಇನ್ನೊಂದೆಡೆ ರೂಪಾಯಿಯೂ ತನ್ನ ಮೌಲ್ಯವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಂಡಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 161 ಪೈಸೆಗಳಷ್ಟು ಬೆಲೆ ಏರಿಸಿಕೊಂಡ ರೂಪಾಯಿ, ಅಮೆರಿಕದ ಡಾಲರ್‌ ಎದುರು ರೂ. 61.77ರ ಲೆಕ್ಕದಲ್ಲಿ ವಿನಿಮಯ­ಗೊಂಡಿತು. ಇದು ರೂಪಾಯಿ ಕಳೆದೊಂದು ತಿಂಗಳಲ್ಲಿ ಪಡೆದುಕೊಂಡ ಅತಿ ಹೆಚ್ಚಿನ ಮೌಲ್ಯವಾಗಿದೆ.

1430 ಷೇರುಗಳಲ್ಲಿ ತೇಜಿ: ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ಒಮ್ಮೆಲೇ 684.48 ಅಂಶ ಗಳಷ್ಟು ಏರಿಕೆ ದಾಖಲಿಸಿ 20,646.64 ಅಂಶಗಳಲ್ಲಿ ದಿನದಂತ್ಯ ಕಂಡಿತು. ಆ ಮೂಲಕ ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೇರಿತು. ‘ಬಿಎಸ್‌ಇ’ ಪೇಟೆ ಯಲ್ಲಿನ 1430 ಷೇರುಗಳು ತಮ್ಮ ಮೌಲ್ಯ ಹೆಚ್ಚಿಸಿಕೊಂಡಿದ್ದು ಗಮನಾರ್ಹ.

ಇನ್ನೊಂದೆಡೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದಲ್ಲೂ ‘ನಿಫ್ಟಿ’ 216.10 ಅಂಶಗಳ (ಶೇ 3.66) ಉತ್ತಮ ಗಳಿಕೆ ಕಂಡಿತು. ದಿನದ ಕಡೆಗೆ ನಿಫ್ಟಿ 6,115.55 ಅಂಶಗಳಿಗೇರಿತು. ಇದು ಕಳೆದ 4 ತಿಂಗಳ ಗರಿಷ್ಠ ಮಟ್ಟವಾಗಿದೆ.

ಷೇರುಪೇಟೆಯಲ್ಲಿ ದಿಢೀರ್‌ ಬೆಳವಣಿಗೆಗೆ ಹಿಂದಿನ ದಿನ ಅಮೆರಿಕದ ಫೆಡರಲ್‌ ಬ್ಯಾಂಕ್‌ ಪ್ರಕಟಿಸಿದ ನಿಲುವು ಪ್ರೇರಣೆ ಒದಗಿಸಿತು. ಆರ್ಥಿಕ ಉತ್ತೇಜನ ಕ್ರಮಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಫೆಡರಲ್‌ ಬ್ಯಾಂಕ್‌ ಬುಧವಾರ ಪ್ರಕಟಿಸಿತ್ತು.
ಇದೇ ವೇಳೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಗುರು­ವಾರ ಒಂದೇ ದಿನ ರೂ. 3,500 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಭಾರತದ ಷೇರುಪೇಟೆ ಗಳಲ್ಲಿ ತೊಡಗಿಸಿದ್ದು ಸಹ ‘ಬಿಎಸ್‌ಇ’ ಮತ್ತು ‘ಎನ್‌ಎಸ್‌ಇ’ ಯಲ್ಲಿನ ಹರ್ಷಕ್ಕೆ ಕಾರಣವಾಯಿತು.

‘ಆರ್‌ಬಿಐ’ನತ್ತ ಚಿತ್ತ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದ್ದು, ದೇಶದ ಉದ್ಯಮ ಕ್ಷೇತ್ರ ಮತ್ತು ಹಣಕಾಸು ಮಾರುಕಟ್ಟೆಯ ಗಮನವೆಲ್ಲ ನೂತನ ಗವರ್ನರ್‌ ರಘುರಾಂ ರಾಜನ್‌ ಅವರತ್ತಲೇ ಕೇಂದ್ರೀಕೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT