ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಕಾರಿನ ದೊಡ್ಡ ರ‌್ಯಾಲಿ

Last Updated 14 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಟಾಟಾ ಸಮೂಹದ ಪುಟ್ಟ ನ್ಯಾನೊ ಕಾರು ಬೆಂಗಳೂರಲ್ಲಿ ಈಗಲೂ ಕುತೂಹಲದ ಕೇಂದ್ರ ಬಿಂದು. ಅದು ದಾರಿಯಲ್ಲಿ ಸಾಗುವಾಗ ಎಂಥವರೂ ಒಂದು ಕ್ಷಣ ತಿರುಗಿ ನೋಡುತ್ತಾರೆ. ಅದರ ಬೆಲೆಗೆ ಬೇರೆ ಯಾವುದೇ ಕಾರು ಸಿಗುವುದಿಲ್ಲ ಎನ್ನುವುದು ಪ್ಲಸ್ ಪಾಯಿಂಟ್.

ಈಚೆಗೆ ನ್ಯಾನೊ ಕಾರು ಮಾಲೀಕರಿಗೆ `ಟಾಟಾ ನ್ಯಾನೊ ಮೈಲೇಜ್ ಮ್ಯೋರಥಾನ್~ ಏರ್ಪಡಿಸಲಾಗಿತ್ತು. ಅದರಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ತಮ್ಮ ನೆಚ್ಚಿನ ಕಾರಿನಲ್ಲಿ ಖುಷಿ ಸವಾರಿಯ ಜತೆಗೆ ವಿವಿಧ ವಿನೋದಾವಳಿ ಮತ್ತು ಕ್ರೀಡಾಕೂಟದ ಮಜಾ ಅನುಭವಿಸಿದರು.

ಕಾರಿನ ಮೈಲೇಜ್ ಅಳೆಯಲು, ಇಂಧನ ದಕ್ಷತೆ ಪರಿಶೀಲಿಸಲು, ಚಾಲನೆಯ ತಂತ್ರಗಳನ್ನು ತಿಳಿದುಕೊಳ್ಳಲು ಮತ್ತು ತನ್ಮೂಲಕ ಬಹುಮಾನಗಳನ್ನು ಗೆಲ್ಲಲು ಇಲ್ಲಿ ಟಾಟಾ ಮೋಟರ್ಸ್ ಅವಕಾಶ ಕಲ್ಪಿಸಿತ್ತು.

60 ಕಿ.ಮೀ ದೂರದ ಈ ರ‌್ಯಾಲಿಯಲ್ಲಿ ಭಾಗವಹಿಸಿದ ಕಾರುಗಳು ಬನ್ನೇರುಘಟ್ಟ ರಸ್ತೆ ಐಒಸಿ ಬಂಕ್‌ನಲ್ಲಿ ಇಂಧನ ಟ್ಯಾಂಕ್ ಭರ್ತಿ ಮಾಡಿಕೊಂಡು ನೈಸ್ ರಸ್ತೆಯ ಕಡೆಗೆ  ಮುಂದುವರಿದು ತುಮಕೂರು ರಸ್ತೆಯಲ್ಲಿ  50 ಕಿ.ಮೀ ಸಂಚರಿಸಿ ಯು-ಟರ್ನ್ ತೆಗೆದುಕೊಂಡು  ವಂಡರ್‌ಲಾಗೆ ತೆರಳಿದವು.

ರ‌್ಯಾಲಿಯ ಉದ್ದೇಶ ನ್ಯಾನೋ ಗ್ರಾಹಕರಲ್ಲಿಇಂಧನ ದಕ್ಷತೆಯಿಂದ ವಾಹನ ಓಡಿಸುವ ಅಭ್ಯಾಸವನ್ನು ಉತ್ತೇಜಿಸುವುದಾಗಿತ್ತು. ಹೀಗಾಗಿ ರ‌್ಯಾಲಿಗೆ ಮುನ್ನ ಇಂಧನ ಉಳಿತಾಯದ ಚಾಲನಾ ತಂತ್ರಗಳ ಬಗ್ಗೆ ತಿಳಿಸಿಕೊಡಲಾಯಿತು.

ಪ್ರತಿ ಲೀಟರ್‌ಗೆ ಅತಿ ಹೆಚ್ಚು ದೂರ ಕ್ರಮಿಸಿದ ಎಸ್. ಉಮರ್ (1 ಲೀಟರ್‌ಗೆ 34.5 ಕಿಮಿ), ವಿಜಯ್ ತಿವಾರಿ (27 ಕಿಮಿ) ಮತ್ತು ಸುಂದರ್ ಶೇಖರ್ (26.83 ಕಿಮಿ) ಕ್ರಮವಾಗಿ 30 ಸಾವಿರ, 15 ಸಾವಿರ ಮತ್ತು 10 ಸಾವಿರ ರೂ ಬಹುಮಾನಕ್ಕೆ ಪಾತ್ರರಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT