ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನದ ನಿರೀಕ್ಷೆಯಲ್ಲಿ ಕೃಷಿ ಶಾಲೆ...!

Last Updated 11 ಸೆಪ್ಟೆಂಬರ್ 2011, 6:45 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಹನುಮನಮಟ್ಟಿಯಲ್ಲಿ ಈಚೆಗಷ್ಟೇ ಸರ್ಕಾರ ಕೃಷಿ ಮಹಾ ವಿದ್ಯಾಲಯವನ್ನು ಉದ್ಘಾಟಿಸಿದೆ. ಆದರೆ 1948ರಿಂದಲೇ ಕೃಷಿ ಕಾಲೇಜು ಮಾಡುವಂತಹ ಕೆಲಸ ಮಾಡುತ್ತಿರುವ ಕೃಷಿ ಪಾಠಶಾಲೆಯೊಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ.

ಕೃಷಿಗೆ ಉತ್ತೇಜನ ನೀಡಬೇಕೆಂಬ ಉದ್ದೆೀಶದಿಂದ ಸ್ವಾತಂತ್ರ್ಯ ನಂತರದ ಆಗಿನ ಮೈಸೂರು ಸರ್ಕಾರ ರಾಜ್ಯದ ವಿವಿಧೆಡೆ ಕೃಷಿ ಪಾಠಶಾಲೆಗಳನ್ನು ತೆರೆ ಯಿತು. ಅವುಗಳಲ್ಲಿ ಅಖಂಡ ಧಾರ ವಾಡ ಜಿಲ್ಲೆಯ ಈಗಿನ ಹಾವೇರಿ ಜಿಲ್ಲೆಯ ದೇವಿಹೊಸೂರು ಗ್ರಾಮದಲ್ಲಿ ಇರುವ ಕೃಷಿ ಪಾಠಶಾಲೆ ಒಂದು.

ಸುಮಾರು 180 ಎಕರೆ ವಿಸ್ತಾರದ ಪ್ರದೇಶದಲ್ಲಿದ್ದ ಕೃಷಿ ಪಾಠಶಾಲೆಯ ಈ ಭಾಗದ ಕೃಷಿ ವಿದ್ಯಾಲಯದಂತೆ ಕೆಲಸ ನಿರ್ವಹಿಸುತ್ತಿತ್ತು. ಕೃಷಿಕರಿಗೆ ತರಬೇತಿ ನೀಡುವುದರ ಜೊತೆಗೆ ಎಸ್ಸೆಸ್ಸೆಲ್ಸಿ ಪಾಸಾದ ರೈತ ಮಕ್ಕಳಿಗೆ ಎರಡು ವರ್ಷ, ಒಂದು ವರ್ಷ, 10 ತಿಂಗಳ, ಆರು ತಿಂಗಳ ಡಿಪ್ಲೋಮಾ ಪದವಿಗೆ ಸಮಾನವಾದ ತರಬೇತಿ ಹಾಗೂ ಸಂಶೋಧನೆಗಳು ನಡೆಯುತ್ತಿದ್ದವು. ತರಬೇತಿಗೆ ಆಗಮಿಸಿ ಶಿಬಿರಾರ್ಥಿಗಳಿಗೆ ಊಟ, ವಸತಿ ಕೂಡಾ ಉಚಿತವಾಗಿ ನೀಡಲಾಗುತ್ತಿತ್ತು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಕೂಡಾ ದೊರೆಯುತ್ತಿತ್ತು. ಇಲ್ಲಿ ತರಬೇತಿ ಪಡೆದ ನೂರಾರು ಜನರು ಕೃಷಿ ಇಲಾ ಖೆಯ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇನ್ನೂ ಕೆಲವರು ಪ್ರಗತಿಪರ ರೈತರು ಎನಿಸಿಕೊಂಡಿದ್ದಾರೆ.

ಹೆಸರಿಗೆ ಮಾತ್ರ ಪಾಠಶಾಲೆ: ಒಂದು ವಿದ್ಯಾಲಯದಂತೆ ಕಾರ್ಯ ನಿರ್ವಹಿ ಸುತ್ತಿದ್ದ ಕೃಷಿ ಪಾಠಶಾಲೆ ಸರ್ಕಾರದ ನಿರ್ಲಕ್ಷ್ಯವೋ ಅಥವಾ ರೈತರ ನಿರಾ ಸಕ್ತಿಯೋ ಇಂದು ಹೆಸರಿಗೆ ಮಾತ್ರ ಕೃಷಿ ಪಾಠಶಾಲೆ ಎನ್ನುವಂತಾಗಿದೆ. ಎರಡು ವರ್ಷದ ವರೆಗೆ ನಡೆಯುತ್ತಿದ್ದ ತರಬೇತಿ ಹಾಗೂ ಸಂಶೋಧನೆಗಳು ಇಂದು ಈ ಪಾಠಶಾಲೆಯಿಂದ ಮಾಯವಾಗಿವೆ. ಕ್ರಮೇಣ ಆರು ತಿಂಗಳು, ಮೂರು ತಿಂಗಳು ನಡೆಯುವ ತರಬೇತಿಗಳು ಈಗ ಒಂದು ದಿನದಿಂದ ಒಂದು ವಾರದ ವರೆಗೆ ಮಾತ್ರ ನಡೆಯುತ್ತಿವೆ.

ವಿಸ್ತಾರದ ಹರವು ಕಡಿಮೆ: 1948 ರಲ್ಲಿ ಸಿರಸಂಗಿ ಲಿಂಗರಾಜರು ದೇವಿ ಹೊಸೂರು ಗ್ರಾಮದ ಕೃಷಿ ಪಾಠಶಾಲೆ ತೆರೆಯಲು 180 ಎಕರೆ ಜಮೀನನ್ನು ದೇಣಿಗೆ ರೂಪದಲ್ಲಿ ನೀಡಿದರು. ಅದೇ ಕಾರಣಕ್ಕಾಗಿ ಈ ಕೃಷಿ ಪಾಠಶಾಲೆಗೆ ಸಿರಸಂಗಿ ಲಿಂಗರಾಜ ಕೃಷಿಪಾಠ ಶಾಲೆ ಎಂದು ಹೆಸರಿಡಲಾಗಿದೆ. ಇಷ್ಟೊಂದು ವಿಸ್ತಾರವಾದ ಜಮೀನಿನಲ್ಲಿ ತರಬೇತಿ ಬರುವ ಶಿಬಿರಾರ್ಥಿಗಳು ಕೃಷಿಯಲ್ಲಿ ತೊಡಗಿ ಅಪಾರ ಪ್ರಮಾಣದ ಬೆಳೆ ಬೆಳೆ ಯುತ್ತಿದ್ದರು. ಆದರೆ, ಇತ್ತೀಚಿನ ವರ್ಷ ಗಳಲ್ಲಿ ಅದರ ವಿಸ್ತಾರದ ಹರವು ಕಡಿಮೆ ಯಾಗುತ್ತಾ ಸಾಗಿದೆ.

180 ಎಕರೆ ಜಮೀನಿನಲ್ಲಿ 2002 ರಲ್ಲಿ ಆರಂಭವಾದ ಮೆಣಸಿನಕಾಯಿ ಸಂಶೋಧನಾ ಕೇಂದ್ರಕ್ಕೆ 95 ಎಕರೆ, ಸೀಡ್ಸ್ ಕಾರ್ಪೋರೆಷನ್‌ಗೆ ಎರಡು ಎಕರೆ, ದೇವಿಹೊಸೂರ ಬಹು ಹಳ್ಳಿ ಕುಡಿವ ನೀರಿನ ಯೋಜನೆಗೆ 12.20 ಎಕರೆ ನೀಡಲಾಗಿದ್ದು, ಈಗ ಕೇವಲ 70 ಎಕರೆಯಲ್ಲಿ ಮಾತ್ರ ಕೃಷಿ ಪಾಠಶಾಲೆ ಉಳಿದಿದೆ. ಇದರಲ್ಲಿ 20 ಎಕರೆಯಲ್ಲಿ ಕಟ್ಟಡ ಮತ್ತು ರಸ್ತೆಗಾಗಿ ಬಳಕೆಯಾ ಗಿದ್ದರೆ, ಉಳಿದ 50 ಎಕರೆ ಯಲ್ಲಿ ಮಾತ್ರ ಸಾಗುವಳಿ ಮಾಡಲಾಗು ತ್ತದೆ. ಎಂದು ಇಲ್ಲಿನ ಸಹಾಯಕ ಕೃಷಿ ಅಧಿ ಕಾರಿ ಎ.ಎನ್.ಜಾನ್ವೇಕರ ತಿಳಿಸುತ್ತಾರೆ.

ಸಿಬ್ಬಂದಿ ಕೊರತೆ: ಕೃಷಿ ಪಾಠಶಾಲೆ ಯಲ್ಲಿ ಈಗಲೂ ತಾಂತ್ರಿಕ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಒಟ್ಟು ಆರು ಹುದ್ದೆಗಳಲ್ಲಿ ಎರಡು ಸ್ಥಾನಗಳು ಮಾತ್ರ ಭರ್ತಿಯಿದ್ದು, ಉಳಿದ ನಾಲ್ಕು ಹುದ್ದೆಗಳು ಖಾಲಿಯಿವೆ. ಅದರಂತೆ ಇಲ್ಲಿರುವ ಅತಿಥಿ ಗೃಹ ಹಾಗೂ ಇನ್ನಿತರ ಕಟ್ಟಡಗಳು ನಿರುಪಯುಕ್ತವಾಗಿವೆ. ಇದೇ ಈಗ ಹನುಮನ ಮಟ್ಟಿಯಲ್ಲಿ ಆರಂಭವಾಗಿದ್ದರಿಂದ ಅದು ಸಾಧ್ಯವಿಲ್ಲ. ಆದರೆ, ಹಾನಗಲ್ಲ ತಾಲ್ಲೂಕಿನ ಅಕ್ಕಿ ಆಲೂರಲ್ಲಿ ಆರಂಭಿಸಿದಂತೆ ಡಿಪ್ಲೋಮಾ ಕೋರ್ಸ್ ಆರಂಭ ಮಾಡುವ ಮೂಲಕ ಕೃಷಿ ಪಾಠಶಾಲೆ ಯನ್ನು ಪುನಶ್ಚೇತನ ಗೊಳಿಸಬೇಕು ಎಂದು ಪ್ರಗತಿ ಪರರೈತ ಕರಬಸನಗೌಡ ಪೊಲೀಸ್ ಪಾಟೀಲ ಒತ್ತಾಯಿ ಸುತ್ತಾರೆ.
                                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT