ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಉಪಾಧ್ಯಕ್ಷೆ ನೇತೃತ್ವದಲ್ಲಿ ಸ್ವಚ್ಛತೆ

Last Updated 8 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಸುರಪುರ: ಪಟ್ಟಣದಲ್ಲಿ ಡೆಂಗೆ ಜ್ವರದ ಪ್ರಕರಣಗಳು ಹೆಚ್ಚುತ್ತಲೆ ಇವೆ. ನಾಗರಿಕರು ನೈರ್ಮಲ್ಲೆಕರಣ ಮಾಡಲು ಪುರಸಭೆಗೆ ಮಾಡಿದ ಮನವಿಗಳು ನಿಷ್ಫಲವಾಗಿದ್ದವು. ಈ ನಿಟ್ಟಿನಲ್ಲಿ ಪುರಸಭೆ ಆಡಳಿತ ಮಂಡಳಿಗೆ ನಾಗರಿಕರು ಹಿಡಿಶಾಪ ಹಾಕುತ್ತಲೆ ಇದ್ದರು. ತಿಮ್ಮಾಪುರದ ವಾರ್ಡ್ ನಂ. 24 ಮತ್ತು 25 ರಲ್ಲೂ ಡೆಂಗೆ ಪ್ರಕರಣಗಳು ವರದಿಯಾಗಿದ್ದವು.

ಈ ಹಿನ್ನೆಲೆಯಲ್ಲಿ ಪುರಸಭೆ ಉಪಾಧ್ಯಕ್ಷೆ ರತ್ನಮ್ಮ ಚೆನ್ನಪ್ಪ ಎಲಿಗಾರ್ ಶನಿವಾರ ಬೆಳಿಗ್ಗೆ ಪುರಸಭೆಗೆ ಸಿಟ್ಟಿನಿಂದಲೆ ಆಗಮಿಸಿದರು. ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸ್ಪಂದಿಸಿದ ಸಿಬ್ಬಂದಿ ತಕ್ಷಣ ಎರಡೂ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿತು.

ಚರಂಡಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಡಿ.ಡಿ.ಟಿ. ಸಿಂಪರಣೆ ಇತರ ನೈರ್ಮಲ್ಯ ಕಾರ್ಯ ಮಾಡಿ ವಾರ್ಡುಗಳನ್ನು ಸ್ವಚ್ಛ ಮಾಡಲಾಯಿತು.

ಉಪಾಧ್ಯಕ್ಷೆಯ ಕಾರ್ಯವೈಖರಿಗೆ ವಾರ್ಡಿನ ಪ್ರಮುಖರಾದ ನಾಗಪ್ಪ ಕಟ್ಟಿಮನಿ, ಸಿದ್ರಾಮ ಎಲಿಗಾರ್, ಅಯ್ಯಪ್ಪ ಕರೆಗಾರ್, ಚಂದ್ರಕಾಂತ ಎಲಿಗಾರ್, ವೀರಭದ್ರ ಕುಂಬಾರ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಪುರಸಭೆ ಸದಸ್ಯರು ಈ ರೀತಿ ಕಾರ್ಯನಿರ್ವಹಿಸಿದಲ್ಲಿ ಪಟ್ಟಣ ಸ್ವಚ್ಛಗೊಳ್ಳುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT