ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆಯಿಂದ ಅನಧಿಕೃತ ಬೋರ್ಡ್ ತೆರವು

Last Updated 6 ಏಪ್ರಿಲ್ 2013, 6:32 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ಪರವಾನಗಿಯಿಲ್ಲದೇ ಅನಧಿಕೃತವಾಗಿ ಅಳವಡಿಸಿದ್ದ ಬೋರ್ಡ್‌ಗಳನ್ನು ಪುರಸಭೆಯಿಂದ ಶುಕ್ರವಾರ ತೆರವು ಗೊಳಿಸಲಾಯಿತು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ,ಮುಖ್ಯರಸ್ತೆ ಮುಂತಾದೆಡೆ ಹಲವು ಅಂಗಡಿ ಮುಗ್ಗಟ್ಟು ವ್ಯಾಪಾರಸ್ಥರು ತಮ್ಮ ವ್ಯವಹಾರದ ಪ್ರಚಾರದ ಬಗ್ಗೆ ರಸ್ತೆಯ ಇಕ್ಕೆಲಗಳಲ್ಲಿ ನಾನಾ ರೀತಿಯ ಬೋರ್ಡ್‌ಗಳನ್ನು ಅಳವಡಿಸಿದ್ದರು.ಆದರೆ ಇದಕ್ಕೆ ನೀಡಿರುವ ಪರವಾನಗಿ ಮಾ.31ರಂದೇ ಅಂತ್ಯವಾಗಿತ್ತು. ಪುನ: ಪರವಾನಗಿಯನ್ನು  ಪಡೆದಿರಲಿಲ್ಲ.

ಜತೆಗೆ ಚುನಾವಣೆಯ ಹಿನ್ನೆಲೆ ಯಲ್ಲಿ,ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಬಾರದೆಂಬ ದೃಷ್ಟಿಯಿಂದ ಚುನಾವಣಾಧಿಕಾರಿಗಳಾದ ಸಹಾಯಕ ಕಮೀಷನರ್ ಇವರ ನಿರ್ದೇಶನದ ಮೇರೆಗೆ ಅನಧಿಕೃತ ಬೋರ್ಡ್‌ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ. ಅನುಪಮಾ ತಿಳಿಸಿದ್ದಾರೆ.

ಹೆದ್ದಾರಿ ಅಗಲೀಕರಣಕ್ಕಾಗಿ ರಸ್ತೆ ಬದಿಯಲ್ಲಿದ್ದ ಬೋರ್ಡ್‌ಗಳನ್ನು ತೆರವು ಗೊಳಿಸಲಾಗುತ್ತಿದೆ ಎಂದು ಮಾತನಾಡಿ ಕೊಳ್ಳುತ್ತಿದ್ದ ನಾಗರಿಕರು. ತೆರವು ಕಾರ್ಯಾಚರಣೆಯನ್ನು ಕುತೂ ಹಲದಿಂದ ವೀಕ್ಷಿಸುತ್ತಿದ್ದುದು ಕಂಡುಬಂತು.

`ಲಾಭದಲ್ಲಿ ಬ್ಯಾಂಕ್'
ಚಿಕ್ಕೋಡಿ:
ರಾಜ್ಯದಾದ್ಯಂತ 75 ಶಾಖೆಗಳನ್ನು ಹೊಂದಿರುವ ತಾಲ್ಲೂಕಿನ ಯಕ್ಸಂಬಿಯ ಶ್ರೀ ಬೀರೇಶ್ವರ  ಸೌಹಾರ್ದ್ ಕ್ರೆಡಿಟ್ ಸಹಕಾರಿಯು 2012-13ನೇ ಆರ್ಥಿಕ ವರ್ಷದ ಕೊನೆಗೆ ರೂ 377.37 ಕೋಟಿಗೂ ಅಧಿಕ ಠೇವುಗಳನ್ನು ಸಂಗ್ರಹಿಸಿ ರೂ 3.81 ಕೋಟಿಗೂ ಮೀರಿ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿಯ ಸಂಸ್ಥಾ ಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲ್ಲೂಕಿನ ಯಕ್ಸಂಬಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿಯು 2012-13ನೇ ಆರ್ಥಿಕ ವರ್ಷದ ಕೊನೆಗೆ 51,388 ಸದಸ್ಯ ರನ್ನು ಹಾಗೂ ರೂ 5.41 ಕೋಟಿಗೂ ಮಿಕ್ಕಿ ಷೇರು ಬಂಡವಾಳ ಸಂಗ್ರಹಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT