ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣ ಪ್ರಹಸನ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಂಗ ಸುಗ್ಗಿ ಟ್ರಸ್ಟ್: ಬುಧವಾರ `ಪುರಾಣ ಪ್ರಹಸನ~ ನಾಟಕ (ರಚನೆ: ಬಿ.ಟಿ. ಮುನಿರಾಜಯ್ಯ. ನಿರ್ದೇಶನ: ತುಮಕೂರು ಶಿವಕುಮಾರ್). ನಾಟಕವು ಇಂದಿನ ರಾಜಕೀಯ ಪ್ರಹಸನ ಮತ್ತು ಪೌರಾಣಿಕ ಘಟನೆಗಳ ಜೊತೆಗೆ ತಳಕು ಹಾಕಿಕೊಂಡ ಸುಂದರ ಪುರಾಣ ಕಾವ್ಯ.

ಪುರಾಣ ಪುರುಷರು ಮಾಡಿದ ಸ್ವಜನ ಪಕ್ಷಪಾತ, ಲಂಚಗುಳಿತನಕ್ಕೆ ಏನು ಶಿಕ್ಷೆಯಾಗಿದೆ ಎಂದು ಈಗಿನ ರಾಜಕಾರಣಿಗಳು ಪಂಚಾಯಿತಿ ಕಟ್ಟೆಯಲ್ಲಿ ಪ್ರಶ್ನೆ ಮಾಡಿದಾಗ ಉಂಟಾಗುವ ಹಾಸ್ಯ ಘಟನೆಗಳೇ ನಾಟಕದ ವಸ್ತು.

ದೇವತೆಗಳು ಪಂಚಾಯಿತಿ ಕಟ್ಟೆಯಲ್ಲಿ ಬಂದು ವಿಚಾರಣೆಯಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವುದು ಪ್ರೇಕ್ಷಕನಿಗೆ ಕಚಗುಳಿ ಇಡುತ್ತದೆ. ನಾರದನ ಜಾಣ್ಮೆಯಿಂದಾಗಿ ವಿಚಾರಣಾ ಆಯೋಗ ನೇಮಕ ವಾಗುತ್ತದೆ.

ದೇವತೆಗಳು ಶಿಕ್ಷೆಗೆ ಒಳಪಡದೆ ಪಾರಾಗುವುದು ಕಡೆಯವರೆಗೆ ಪ್ರೇಕ್ಷಕನನ್ನು ಕುತೂಹಲದಲ್ಲಿ ಉಳಿಸುತ್ತದೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT