ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ನಟರಾಜನ ಮೂರ್ತಿ ಕಳ್ಳತನದ್ದು

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌(ಪಿಟಿಐ): ಇತ್ತೀಚೆಗೆ ಆಸ್ಟ್ರೇ ಲಿಯಾದಲ್ಲಿ ಮಾರಾಟ­ಗೊಂಡ 900 ವರ್ಷಗಳ ಪುರಾತನ ಶಿವನ ವಿಗ್ರಹ ಭಾರತದಿಂದ ಕಳ್ಳತನವಾದದ್ದು ಎಂದು ಗೊತ್ತಾಗಿದೆ. ಆದ್ದರಿಂದ ಭಾರತ ಮೂಲದ ಕಲಾಕೃತಿಗಳ ಮಾರಾಟಗಾರ ಸುಭಾಷ್‌ ಕಪೂರ್‌ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಟ್ರೇಲಿಯಾ ಗ್ಯಾಲರಿ ಹೇಳಿದೆ.

ಮೂರ್ತಿಯನ್ನು ಭಾರತಕ್ಕೆ ಮರಳಿ ಸುವ ಕುರಿತು ಭಾರತ ಹೈ ಕಮಿಷನ್‌­ನೊಂದಿಗೆ ಚರ್ಚೆ ನಡೆಸುವುದಾಗಿ ದಿ ನ್ಯಾಷನಲ್‌ ಗ್ಯಾಲರಿ ಆಫ್‌ ಆಸ್ಟ್ರೇಲಿಯಾ ಹೇಳಿದೆ.

ಸುಮಾರು ₨ 30 ಕೋಟಿಗೆ ಮಾರಾಟ­ವಾಗಿದ್ದ ಕಂಚಿನ ವಿಗ್ರಹವಮ್ಮಿ ಭಾರತದ ಗ್ಯಾಲರಿಯ ಪ್ರವೇಶ­ದಲ್ಲಿ ಕಳೆದ ರಾತ್ರಿಯವರೆಗೆ ಇಡ­ಲಾಗಿತ್ತು. ಈಗ ಅದು ನ್ಯೂಯಾರ್ಕ್‌ ಸುಪ್ರೀಂ ಕೋರ್ಟ್‌ ಸುರ್ಪದಿಯಲ್ಲಿದೆ. ಪ್ರತಿಮೆಯನ್ನು ಕಪೂರ್‌ ಕಳ್ಳತನ ಮಾಡಿದ್ದು ದೃಢವಾಗಿದೆ. ಅಲ್ಲದೇ ಅವರ ಮೇಲೆ ಹೊರಿಸಲಾಗಿದ್ದ ಆರು ಆರೋಪಗಳು ನಿಜವಾಗಿವೆ ಹಾಗೂ  ಎಂದು ಸಾಬೀತಾಗಿದೆ.

ಶಿವನ ಕಂಚಿನ ವಿಗ್ರಹ ಕೇಂದ್ರ ಸರ್ಕಾರದ ಸ್ವತ್ತಾಗಿದೆ. ಇದು ತಮಿಳುನಾಡಿನ ಅರಿಯಾಲೂರ್‌ ಜಿಲ್ಲೆಯ ಶಿವ ಮಂದಿರದಿಂದ ಕಳ್ಳತನವಾಗಿತ್ತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT