ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ಬೆಳ್ಳಿ ನಾಣ್ಯ ಪತ್ತೆ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ):  ತಾಲ್ಲೂಕಿನ ಮಾಕನಡುಕು ಗ್ರಾಮದಲ್ಲಿ ಮನೆಗಾಗಿ ನೀರಿನ ಟ್ಯಾಂಕ್ ನಿರ್ಮಿಸಲು ನೆಲ ಅಗೆಯುತ್ತಿದ್ದಾಗ ಪುರಾತನ ಕಾಲದ 40 ಬೆಳ್ಳಿ ನಾಣ್ಯ ಹಾಗೂ ಬಂಗಾರದ ತುಣುಕುಗಳು ಪತ್ತೆಯಾಗಿವೆ. ಈ ನಾಣ್ಯಗಳ ಮೇಲೆ 1819ನೇ ಇಸ್ವಿ ಎಂದು ಬರೆದಿದೆ, ಉರ್ದು ಲಿಪಿಯಿದೆ.

ಮಾಕನಡುಕು ಗ್ರಾಮದಲ್ಲಿ ಶಾರದಮ್ಮ ಮನೆ ಕಟ್ಟಿದ್ದು, ನೀರಿನ ಟ್ಯಾಂಕ್‌ಗಾಗಿ ನೆಲ ಅಗೆಯಿಸುತ್ತಿದ್ದರು. ನೆಲ ಅಗೆಯುವ ಕೂಲಿಯವರಿಗೆ ಕುಡಿಕೆಯಲ್ಲಿ ಬೆಳ್ಳಿ ನಾಣ್ಯ ಹಾಗೂ ಬಂಗಾರದ ತುಣುಕುಗಳು ಕಂಡಿವೆ. ತಕ್ಷಣವೇ ಕೂಲಿಯವರು ಶಾರದಮ್ಮನವರ ಗಮನಕ್ಕೆ ತಂದಿದ್ದಾರೆ. ಶಾರದಮ್ಮ ಭಾನುವಾರ ಹೊಸಹಳ್ಳಿ ಪೊಲೀಸ್ ಠಾಣೆಗೆ ನಾಣ್ಯ ಹಾಗೂ ಬಂಗಾರದ ತುಣುಕುಗಳನ್ನು ಒಪ್ಪಿಸಿದ್ದಾರೆ ಎಂದು ತಹಶೀಲದಾರ ಜವರೇಗೌಡ ಸ್ದ್ದುದಿಗಾರರಿಗೆ ತಿಳಿಸಿದರು.

ನಾಣ್ಯಗಳ ಹಾಗೂ ಬಂಗಾರದ ತುಣುಕುಗಳ ಒಟ್ಟು ತೂಕ, ಅವುಗಳ ಒಟ್ಟು ಬೆಲೆ ತಿಳಿದುಬಂದಿಲ್ಲ. ಒಟ್ಟು 40 ನಾಣ್ಯಗಳಲ್ಲಿ 8 ದೊಡ್ಡ ನಾಣ್ಯಗಳು, 12 ಅವುಗಳಿಗಿಂತ ಚಿಕ್ಕವು, 13 ಸಣ್ಣ ನಾಣ್ಯಗಳು, 7 ಅವುಗಳಿಗಿಂತ ಸಣ್ಣ ನಾಣ್ಯಗಳಿವೆ. ಕೈಗೆ ಧರಿಸುವ ಬ್ರೇಸ್‌ಲೆಟ್ ರೀತಿಯ ಬಂಗಾರದ ತುಣುಕುಗಳು ಹಾಗೂ ಕಳಸದ ರೀತಿಯಲ್ಲಿರುವ ಬಂಗಾರದ ಆಭರಣವಿದೆ.

ಸ್ಥಳಕ್ಕೆ ತಹಶೀಲದಾರ ಜವರೇಗೌಡ, ಹೊಸಹಳ್ಳಿ ಪಿಎಸ್‌ಐ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿರುವ ಬೆಳ್ಳಿ ನಾಣ್ಯಗಳು ಹಾಗೂ ಬಂಗಾರದ ತುಣುಕುಗಳನ್ನು ತಾ.16ರಂದು ಪಟ್ಟಣದ ಖಜಾನೆಗೆ ಒಪ್ಪಿಸಲಾಗುವುದು. ಆಸಕ್ತ ಇತಿಹಾಸ ಸಂಶೋಧಕರು ಅಂದು ಬೆಳಿಗ್ಗೆ 10ರಿಂದ 11ರೊಳಗೆ ನಾಣ್ಯಗಳನ್ನು ಪರಿಶೀಲಿಸಿ ಹೆಚ್ಚಿನ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಜವರೇಗೌಡ ತಿಳಿಸಿದ್ದಾರೆ. ಈ ಮೊದಲು ಇದೇ ರೀತಿ ಹೂಡೇಂ ಗ್ರಾಮದಲ್ಲಿಯೂ ನಾಣ್ಯಗಳು ದೊರೆತ್ದ್ದಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT