ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷ ನೋಟಕ್ಕೆ ದಕ್ಕದ ಮಹಿಳಾ ಭಾವ ಪ್ರಪಂಚ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): `ನಮ್ಮ ಭಾವನೆಗಳನ್ನು ನೀವು ಅರ್ಥ ಮಾಡಿಕೊಳ್ಳುವುದಿಲ್ಲ' ಎಂದು ಪುರುಷರಿಗೆ ಗೊಣಗುತ್ತಿದ್ದ ಮಹಿಳೆಯರ ಮಾತು ಸತ್ಯ ಎಂದು ಹೇಳುತ್ತಿದೆ ನೂತನ ಅಧ್ಯಯನವೊಂದು.

ಮಹಿಳೆಯರ ಕಣ್ಣ ಭಾವನೆಗಳನ್ನು ಗ್ರಹಿಸುವುದು ಪುರುಷರಿಗೆ ಕಷ್ಟ.  ಮಹಿಳೆಯರ ದುಗುಡ, ಉದ್ವೇಗ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪುರುಷರು ಹೊಂದಿರುವುದಿಲ್ಲ. ಕಣ್ಣ ಭಾವನೆಗಳು ಬಹುಬೇಗ ಅವರ ಅರಿವಿಗೆ ಬರುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ.

ಮಹಿಳೆಯರ ಕಣ್ಣುಗಳನ್ನು ಪುರುಷರು ನೋಡುವಾಗ ಅವರ ಬುದ್ಧಿ ಹೆಚ್ಚು ಕಾರ್ಯಶೀಲವಾಗಿರುವುದಿಲ್ಲ. ಪುರುಷರು ಮಹಿಳೆಯರ `ಮನಸ್ಸಿನ ಅರಿಯುವಿಕೆ'ಯಲ್ಲಿ ತೊಡಕು ಅನುಭವಿಸುತ್ತಾರೆ ಎಂಬುದು ಸಂಶೋಧಕರಾದ ಬೊರಿಸ್ ಶಿಫೆರ್ ಅಭಿಪ್ರಾಯ.

ಜರ್ಮನಿಯ ಎಲ್‌ಡಬ್ಲ್ಯುಎಲ್ ವಿಶ್ವವಿದ್ಯಾಲಯದ ಸಂಶೋಧಕ ಬೊರಿಸ್ ಶಿಫೆರ್ ಹಾಗೂ ಅವರ ಸಿಬ್ಬಂದಿ ಈ ಅಧ್ಯಯನ ಕೈಗೊಂಡಿದ್ದು, 21ರಿಂದ 52 ವಯೋಮಾನದ 22 ಪುರುಷರನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದರು.

ಭಾವನೆಗಳ ಗ್ರಹಿಕೆಗೆ `ಮನಸ್ಸಿನ ಸಿದ್ಧಾಂತ'ವೇ ತಳಹದಿಯಾಗಿದೆ. ಆದರೆ ಪುರುಷರಿಗೆ ಭಾವನೆಗಳ ಅರಿಯುವಿಕೆಯ ಕೊರತೆ ಇರುವುದರಿಂದ ಭಾವನೆಗಳ ಅರಿಯುವಿಕೆಯ ಸಂತೃಪ್ತಿ ಮಹಿಳೆಯರಿಂದ ಪುರುಷರಿಗೆ ಸಿಕ್ಕಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ಲಭ್ಯಲಾಗುವುದಿಲ್ಲ. ಈ ಸಂತೃಪ್ತಿ ನೀಡಲು ಪುರುಷರು ಹಿಂದೆ ಬಿದ್ದಿದ್ದಾರೆ ಎನ್ನುತ್ತದೆ ಸಂಶೋಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT