ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲಿಟ್ಜರ್ ಟಿಪ್ಪಣಿ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಜೋಸೆಫ್ ಪುಲಿಟ್ಜರ್ ಯಾರು?
`ಸೇಂಟ್ ಲೂಯಿಸ್ ಪೋಸ್ಟ್ ಡಿಸ್‌ಪ್ಯಾಚ್~ ಹಾಗೂ `ನ್ಯೂಯಾರ್ಕ್ ವರ್ಲ್ಡ್~  ಪತ್ರಿಕೆಗಳನ್ನು ಪ್ರಕಟಿಸಿದ ದೂರದೃಷ್ಟಿಯ ಪ್ರಕಾಶಕ. ಮುದ್ರಣ ಪತ್ರಿಕೋದ್ಯಮದ ಸ್ವರೂಪವನ್ನೇ ಬದಲಿಸಿದ ಅವರ ಹೆಸರು `ಪುಲಿಟ್ಜರ್ ಪ್ರಶಸ್ತಿ~ಯ ಮೂಲಕ ಜನಪ್ರಿಯವಾಗಿದೆ.

ಪುಲಿಟ್ಜರ್ ಪ್ರಶಸ್ತಿ ಕೊಡುವುದು ಯಾವುದಕ್ಕೆ?
ವೃತ್ತ ಪತ್ರಿಕೋದ್ಯಮ, ಸಾಹಿತ್ಯ ಸಾಧನೆ ಹಾಗೂ ಸಂಗೀತ ಸಂಯೋಜನೆಯ ಸಾಧನೆಗಳನ್ನು ಗುರುತಿಸಿ ನೀಡುವ ಪ್ರಶಸ್ತಿ ಇದು. ಈ ಪ್ರಶಸ್ತಿಯನ್ನು ಮೊದಲು ನೀಡಿದ್ದು 1917ರಲ್ಲಿ.

ಪ್ರಶಸ್ತಿ ಪುರಸ್ಕೃತರಿಗೆ ಏನೇನು ಸಲ್ಲುತ್ತದೆ?
21 ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲಿ 20 ಪುರಸ್ಕೃತರಿಗೆ ತಲಾ 10 ಸಾವಿರ ಡಾಲರ್ ಮೊತ್ತದ ಬಹುಮಾನ ಸಲ್ಲುತ್ತದೆ.

ಪುಲಿಟ್ಜರ್ ಪ್ರಶಸ್ತಿಗಳಲ್ಲೇ ಯಾವುದು ಅತಿ ಪ್ರತಿಷ್ಠಿತ?
ಸಾರ್ವಜನಿಕ ಸೇವಾ ವಲಯದ ಸಾಧನೆಗೆ ನೀಡುವ ಪುಲಿಟ್ಜರ್ ಪ್ರಶಸ್ತಿ ಅತ್ಯಂತ ಪ್ರತಿಷ್ಠಿತ ಎಂದೆನಿಸಿದೆ. ಸಾರ್ವಜನಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸುವ ಪತ್ರಿಕೆಗೆ ಈ ಪ್ರಶಸ್ತಿ ಸಲ್ಲುತ್ತದೆ. ಸ್ವರ್ಣ ಪದಕವನ್ನು ಇದು ಒಳಗೊಂಡಿದೆ. 1918ರಲ್ಲಿ ಮೊದಲ ಸ್ವರ್ಣ ಪದಕ ಪಡೆದ ಪತ್ರಿಕೆ ಎಂಬ ಅಗ್ಗಳಿಕೆಗೆ `ನ್ಯೂಯಾರ್ಕ್ ಟೈಮ್ಸ~ ಪಾತ್ರವಾಯಿತು.

ಭಾರತದ ಅಥವಾ ಭಾರತೀಯ ಮೂಲದ ಯಾರ‌್ಯಾರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ?
1937ರಲ್ಲಿ ಗೋಬಿಂದ ಬಿಹಾರಿ ಲಾಲ್ ಪತ್ರಿಕೋದ್ಯಮಕ್ಕಾಗಿ ಈ ಪ್ರಶಸ್ತಿಗೆ ಭಾಜನರಾದರು. ಆನಂತರ `ಇಂಟರ್‌ಪ್ರೀಟರ್ ಆಫ್ ಮ್ಯಾಲಡೀಸ್~ ಕೃತಿಗಾಗಿ ಝುಂಪಾ ಲಾಹಿರಿ (2000), `ಪಾಂಪೆ~ ಎಂಬ ವಿಚಿತ್ರ ಕಾಯಿಲೆ ನಿವಾರಣೆಗೆ ಶ್ರಮಿಸಿದ ಗೀತಾ ಆನಂದ್ (2003) ಹಾಗೂ `ದಿ ಎಂಪರರ್ ಆಫ್ ಆಲ್‌ಮ್ಯಾಲಡೀಸ್: ಎ ಬಯಾಗ್ರಫಿ  ಆಫ್ ಕ್ಯಾನ್ಸರ್~ ಕೃತಿಗಾಗಿ ಸಿದ್ಧಾರ್ಥ ಮುಖರ್ಜಿ (2011) ಈ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಜೋಸೆಫ್ ಪುಲಿಟ್ಜರ್‌ಗೆ ಯೋಧನಾಗಬೇಕೆಂಬ ಉತ್ಕಟ ಬಯಕೆ ಇತ್ತು. ಆದರೆ, ಅವರು ತುಂಬಾ ತೆಳ್ಳಗಿದ್ದರು. ದೃಷ್ಟಿ ಕೂಡ ಮಂದವಿತ್ತು. ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಗ್ಲೆಂಡ್‌ನ ಭೂಸೇನೆ ಸೇರುವ ಅವರ ಯತ್ನ ವಿಫಲವಾಯಿತು. ಆಮೇಲೆ  ಅವರು ಅಮೆರಿಕಾಗೆ ಹೋಗಿ ಅಲ್ಲಿನ ಕುದುರೆಸೇನೆಯಲ್ಲಿ ಸಿಪಾಯಿಯಾದರು. ಒಂದು ಯುದ್ಧದಲ್ಲೂ ಅವರು ಹೋರಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT