ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಅನಾವರಣ...

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದಲಿತ ಸಂಘರ್ಷ ಸಮಿತಿ, ಸಂಸ್ಕೃತಿ ಪ್ರಕಾಶನ ಬಳ್ಳಾರಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಆವರಣ. ಶನಿವಾರ ಸುಬ್ಬು ಹೊಲೆಯಾರ್ ಅವರ ಕವನ ಸಂಕಲನ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಬಿಡುಗಡೆ, ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಹಾಡುಗಾರಿಕೆ. ಉಪಸ್ಥಿತಿ: ಷ.ಶೆಟ್ಟರ್, ಎಚ್.ಎಸ್. ವೆಂಕಟೇಶಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ಸಿದ್ದಲಿಂಗಯ್ಯ, ಮಂಜುನಾಥ್ ಸಿ.ಬಳ್ಳಾರಿ. ಸಂಜೆ 6.

ಎಸ್.ಎಂ.ಎಲ್. ಪ್ರಕಾಶನ: ಪ್ರೆಸ್ ಕ್ಲಬ್ ಆಫ್‌ ಬೆಂಗಳೂರು, ಕಬ್ಬನ್ ಪಾರ್ಕ್. ತುರುವನೂರು ಮಂಜುನಾಥ್ ಅವರ ‘ಸುಕ್ಕುಮನಸುಗಳು’ ಕವನ ಸಂಕಲನ ಭಾನುವಾರ ಬಿಡುಗಡೆ: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಅವರಿಂದ. ಕೃತಿ ಕುರಿತು ಮಾತು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್. ಅತಿಥಿ: ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್. ಬೆಳಿಗ್ಗೆ 10.30.

ಅಹರ್ನಿಶಿ: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಭಾರತಿ ಬಿ.ವಿ. ಅವರ ಕ್ಯಾನ್ಸರ್‌ ಅನುಭವಗಳನ್ನು ಆಧರಿಸಿ ಅಹರ್ನಿಶಿ ಪ್ರಕಾಶನ ಸಂಸ್ಥೆ ಹೊರತಂದಿರುವ, ಅಕ್ಷತಾ ಅವರು ನಿರೂಪಿಸಿರುವ ‘ಬುದ್ಧನಿಗೆ ಸಾಸಿವೆ ತಂದವಳು’ ಪುಸ್ತಕ ಭಾನುವಾರ ಬಿಡುಗಡೆ. ಉಪಸ್ಥಿತಿ– ಡಾ.ಯು.ಆರ್. ಅನಂತಮೂರ್ತಿ, ಕ್ಯಾನ್ಸರ್ ತಜ್ಞ ಡಾ. ಶ್ರೀನಾಥ್, ಕವಿ ಜಯಂತ ಕಾಯ್ಕಿಣಿ, ಲೇಖಕಿ ನೇಮಿಚಂದ್ರ. ಬೆಳಿಗ್ಗೆ 10.30.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನ: ಆರ್‌.ವಿ. ಟೀಚರ್ಸ್‌ ಕಾಲೇಜು ಸಭಾಂಗಣ, ಅಶೋಕ ಪಿಲ್ಲರ್‌ ಹತ್ತಿರ, 2ನೇ ಬ್ಲಾಕ್‌, ಜಯನಗರ. ‘ಮಹಾನ್‌ ಇತಿಹಾಸಕಾರರು’ (ಇಂಗ್ಲಿಷ್‌ ಮೂಲ: ಅರುಣ್‌ ಶೌರಿ, ಕನ್ನಡ ಅನುವಾದ: ಮಂಜುನಾಥ ಅಜ್ಜಂಪುರ)
‘ಕ್ರೈಸ್ತ ಕ್ರೌರ್ಯ ಪರಂಪರೆ’ ಲೇಖಕರು: ಟಿ.ಎ.ಪಿ.ಶೆಣೈ, ‘ಆತ್ಮರಕ್ಷಣೆಯೆಡೆಗೆ ಹಿಂದೂ ಸಮಾಜ...!’ (ಇಂಗ್ಲಿಷ್‌ ಮೂಲ: ಸೀತಾರಾಮ ಗೋಯಲ್, ಕನ್ನಡ ಅನುವಾದ: ಮಂಜುನಾಥ ಅಜ್ಜಂಪುರ), ‘ಹುಸಿ ಜಾತ್ಯತೀತವಾದ’ (ಇಂಗ್ಲಿಷ್‌ ಮೂಲ: ಸೀತಾರಾಮ ಗೋಯಲ್‌, ಕನ್ನಡ ಅನುವಾದ: ಶ್ರೀನಿವಾಸ ಸುಬ್ರಹ್ಮಣ್ಯ). ಭಾನುವಾರ ಪುಸ್ತಕಗಳ ಲೋಕಾರ್ಪಣೆ. ಅಧ್ಯಕ್ಷತೆ/ಲೋಕಾರ್ಪಣೆ–ಸಾಹಿತಿ ಡಾ.ಎಸ್‌.ಎಲ್.ಭೈರಪ್ಪ, ಪುಸ್ತಕಗಳ ಪರಿಚಯ– ಚಿಂತಕ ಡಾ. ಅಜಕ್ಕಳ ಗಿರೀಶ ಭಟ್. ಬೆಳಿಗ್ಗೆ 10.30.

ಅನನ್ಯ ಪ್ರಕಾಶನ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ. ಕೆ. ಅನಂತರಾಮು ಅವರ ಸ್ಪರ್ಧೆ ಕಾದಂಬರಿ, ದ್ರೌಪದಿಯರು ಮತ್ತು ಗಾಂಧಿ– ಗೋಡ್ಸೆ ಮುಖಾಮುಖಿ ಕಥಾಸಂಕಲನಗಳು ಭಾನುವಾರ ಬಿಡುಗಡೆ. ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಅವರಿಂದ. ಅತಿಥಿಗಳು: ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ಶಾಸಕ ರವಿಸುಬ್ರಹ್ಮಣ್ಯ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಹುಣಸವಾಡಿ ರಾಜನ್, ವಿದ್ವಾನ್ ಎ.ಕೆ. ವಿಶ್ವನಾಥ್. ಬೆಳಿಗ್ಗೆ 10.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT